NWKRTC: ಹುಬ್ಬಳ್ಳಿ-ಜೋಗ ಟೂರ್ ಪ್ಯಾಕೇಜ್, ದರದ ವಿವರ

0
43

ಹುಬ್ಬಳ್ಳಿ: ನೈಋತ್ಯ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಪ್ರವಾಸ ಮಾಡುವ ಜನರಿಗೆ ಅನುಕೂಲವಾಗಲು ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗುತ್ತಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿರುವ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ಟೂರ್ ಪ್ಯಾಕೇಜ್ ಆರಂಭಿಸಿದೆ. ಜುಲೈ 13ರಂದು ಈ ಸೇವೆಗಳಿಗೆ ಚಾಲನೆ ದೊರೆಯಲಿದೆ.

ವಾಕರಸಾಸಂ ಶನಿವಾರ ಹುಬ್ಬಳ್ಳಿ-ಜೋಗದ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಕರ್ನಾಟಕ ಸರ್ಕಾರದ ‘ಶಕ್ತಿ’ ಯೋಜನೆಯಡಿ ಈ ಟೂರ್‌ ಪ್ಯಾಕೇಜ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ಯಾಕೇಜ್ ವಿವರ: ವೇಗದೂತ ಮತ್ತು ರಾಜಹಂಸ ಬಸ್‌ಗಳ ಮೂಲಕ ವಾಕರಸಾಸಂ ಹುಬ್ಬಳ್ಳಿ-ಜೋಗ ಫಾಲ್ಸ್ ಪ್ರವಾಸಿ ಪ್ಯಾಕೇಜ್ ಆರಂಭಿಸಿದೆ. ಹುಬ್ಬಳ್ಳಿಯಿಂದ ಹೊರಡುವ ಬಸ್ ಶಿರಸಿಯಲ್ಲಿ ಶ್ರೀ ಮಾರಿಕಾಂಬ ದೇವಿ ದರ್ಶನ ಮಾಡಿಸಿಕೊಂಡು ಮುಂದೆ ಸಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

ಹುಬ್ಬಳ್ಳಿ-ಜೋಗ ಫಾಲ್ಸ್ ವೇಗದೂತ ಬಸ್‌ನ ಪ್ರಯಾಣ ದರ ಹೋಗಿ ಬರುವುದು ಸೇರಿ 500 ರೂ. ಎಂದು ನಿಗದಿ ಮಾಡಲಾಗಿದೆ. ಈ ಬಸ್ ಹುಬ್ಬಳ್ಳಿಯನ್ನು ಭಾನುವಾರ ಮತ್ತು ರಜೆಯ ದಿನಗಳಲ್ಲಿ ಬೆಳಗ್ಗೆ7.30ಕ್ಕೆ ಬಿಡಲಿದೆ. ಜೋಗ ಫಾಲ್ಸ್‌ಗೆ 12.30ಕ್ಕೆ ತಲುಪಲಿದೆ. ಜೋಗ ಫಾಲ್ಸ್‌ನಿಂದ 17:00 ಗಂಟೆಗೆ ಹೊರಟು, ಹುಬ್ಬಳ್ಳಿಯನ್ನು 22:00ಕ್ಕೆ ತಲುಪಲಿದೆ.

ರಾಜಹಂಸ ಬಸ್‌ನಲ್ಲಿ ಹುಬ್ಬಳ್ಳಿ-ಜೋಗ ಫಾಲ್ಸ್ ನಡುವಿನ ಪ್ರಯಾಣ ದರ 600 ರೂ. (ಹೋಗಿ ಬರುವುದು ಸೇರಿ). ಈ ಬಸ್ ಹುಬ್ಬಳ್ಳಿಯನ್ನು ಬಿಡುವ ವೇಳೆ 07:35, ಜೋಗ ತಲುಪುವ ವೇಳೆ 12.30. ಜೋಗದಿಂದ ಬಸ್ ಹೊರಡುವ ವೇಳೆ 17:05 ಮತ್ತು ಹುಬ್ಬಳ್ಳಿ ತಲುಪುವ ವೇಳೆ 22:00 ಆಗಿದೆ.

ಆನ್‌ಲೈನ್ ಟಿಕೆಟ್ ಬುಕ್ ಮಾಡಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆಗಳು 7760991682/ 7760991674.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈಗಾಗಲೇ ಹಾವೇರಿ-ಜೋಗ ಫಾಲ್ಸ್ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ವೇಗದೂತ ಬಸ್‌ಗಳು ಈ ಪ್ಯಾಕೇಜ್ ಅಡಿ ಸಂಚಾರವನ್ನು ನಡೆಸಲಿದ್ದು, ಶಿರಸಿ, ಸಿದ್ದಾಪುರ ಮಾರ್ಗವಾಗಿ ಬಸ್ ಸಂಚಾರ ನಡೆಸಲಿದೆ.

ಹಾವೇರಿ-ಜೋಗ ಫಾಲ್ಸ್ ಟೂರ್ ಪ್ಯಾಕೇಜ್ ಪ್ರಯಾಣ ದರ 390 ರೂ.ಗಳು. ಈ ಬಸ್ ಹಾವೇರಿಯಿಂದ 8 ಗಂಟೆಗೆ ಬಿಡಲಿದ್ದು, ಜೋಗಕ್ಕೆ 12 ಗಂಟೆಗೆ ತಲುಪುತ್ತದೆ. ಜೋಗದಿಂದ 16:00 ಗಂಟೆಗೆ ಬಿಟ್ಟು, ಹಾವೇರಿಯನ್ನು 19:30ಕ್ಕೆ ತಲುಪುತ್ತದೆ.

ರಾಣೇಬೆನ್ನೂರು-ಜೋಗ ಫಾಲ್ಸ್ ಟೂರ್ ಪ್ಯಾಕೇಜ್ ಸಹ ಆರಂಭಿಸಲಾಗಿದೆ. ವೇಗದೂತ ಬಸ್‌ನಲ್ಲಿ ಹೋಗಿ ಬರುವ ಪ್ರಯಾಣ ದರ 370 ರೂ.ಗಳು. ಈ ಬಸ್ ಹಿರೇಕೆರೂರು, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗದಲ್ಲಿ ಸಂಚಾರ ನಡೆಸಲಿದೆ.

ಈ ಬಸ್ ರಾಣೇಬೆನ್ನೂರಿನಿಂದ 8 ಗಂಟೆಗೆ ಹೊರಟು, ಜೋಗಕ್ಕೆ 11.30ಕ್ಕೆ ತಲುಪುತ್ತದೆ. ಜೋಗದಿಂದ 16:00 ಗಂಟೆಗೆ ಬಿಟ್ಟು, ರಾಣೇಬೆನ್ನೂರಿಗೆ 19.30ಕ್ಕೆ ಆಗಮಿಸುತ್ತದೆ. ಭಾನುವಾರ ಮತ್ತು ಸರ್ಕಾರಿ ರಜೆ ದಿನದಂದು ಈ ಪ್ಯಾಕೇಜ್ ಟೂರ್ ಲಭ್ಯವಿದೆ.

Previous articleSigandur Bridge: ಕೋರ್ಟ್‌ ಮೆಟ್ಟಿಲೇರಿದ ಸಿಗಂದೂರು ಸೇತುವೆಯ ಹೆಸರಿನ ಚರ್ಚೆ!
Next articleಅಕ್ಟೋಬರ್‌ನಲ್ಲಿ ಸಂಪುಟ ವಿಸ್ತರಣೆ: ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಧರ್ಮಸಿಂಗ್‌ ಪುತ್ರ