ಧಾರವಾಡ: ಕೆಲಸ ಖಾಲಿ ಇದೆ, ಅಭ್ಯರ್ಥಿಗಳಿಗೆ ಮಾಹಿತಿ

1
51

ಧಾರವಾಡ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಚಾರ ಆರೋಗ್ಯ ಘಟಕಕ್ಕೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಚಾರ ಆರೋಗ್ಯ ಘಟಕಕ್ಕೆ ವಿವಿಧ ಹುದ್ದೆಗಳಿಗಾಗಿ ಅರ್ಹರಿಂದ ಅರ್ಜಿ ಕರೆದಿದೆ. ಆಸಕ್ತ ಎಂಬಿಬಿಎಸ್ ವೈದ್ಯಾಧಿಕಾರಿಗಳು (2), ಶುಶ್ರೂಷಕರು (2), ಪ್ರಯೋಗ ಶಾಲಾ ತಂತ್ರಜ್ಞರು (2), ಒಟ್ಟು 6 ಹುದ್ದೆಗಳ ಆಯ್ಕೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ಸೆಪ್ಟೆಂಬರ 10ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಭವನದಲ್ಲಿ ಅರ್ಜಿ ಸಲ್ಲಿಸಬಹುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಎನ್.ಹೆಚ್.ಎಮ್ ನಿಯಮಾನುಸಾರ ಮೂಲ ದಾಖಲಾತಿಗಳನ್ನು ಪರೀಶಿಲನೆ ಸಮಯದಲ್ಲಿ ಹಾಜರುಪಡಿಸಬೇಕು. ತದನಂತರ ಬಂದ ಅರ್ಜಿಗಳನ್ನು ಆಯ್ಕೆಯಲ್ಲಿ ಪರಿಗಣಿಸುವುದಿಲ್ಲ ಮತ್ತು ಸದರಿ ಆಯ್ಕೆ ಪ್ರಕ್ರೀಯೆಯಲ್ಲಿನ ಹುದ್ದೆಗಳನ್ನು ಹೆಚ್ಚಿಸುವ ಮತ್ತು ಕಡಿತಗೊಳಿಸುವ ಅಧಿಕಾರವನ್ನು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸೊಸೈಟಿ ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಎನ್‍ಎಚ್‍ಎಮ್ ವಿಭಾಗದಲ್ಲಿ ಸಂಪರ್ಕಿಸಬಹುದು ಮತ್ತು ಈ ಕುರಿತ ಮಾಹಿತಿಯನ್ನು ಕಚೇರಿಯ ಸೂಚನಾಫಲಕದಲ್ಲಿ ಪ್ರದರ್ಶಿಸಲಾಗಿದೆ.

ಸೆ.11 ರಂದು ನೇರ ಸಂದರ್ಶನ: ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಖಾಸಗಿ ಕಂಪನಿಯಾದ ಸಂಭವ್ ಫೌಂಡೇಷನ್, ಮಡಿಕೇರಿ, ಇವರು ಉಚಿತ ತರಬೇತಿಯೊಂದಿಗೆ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಿದ್ದಾರೆ.

ಇದಕ್ಕಾಗಿ ನೇರ ಸಂದರ್ಶನವು ಸೆಪ್ಟೆಂಬರ್ 11ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ 18 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು 1 ಸೆಟ್ ಸ್ವವಿವರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಡಿಕೇರಿ ಕಚೇರಿಗೆ ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 8296020826 ಅನ್ನು ಸಂಪರ್ಕಿಸಬಹುದು.

Previous articleಶಿರಸಿ: ಬಾಲಕನ ಕೈಯಲ್ಲಿದ್ದ ಏರಗನ್‌ನಿಂದ ಸಿಡಿದ ಗುಂಡು ಮಗು ಸಾವು
Next articleಮುಂಬೈ: 34 ವಾಹನಗಳಲ್ಲಿ 400kg RDX​ ಬಾಂಬ್ – ಎಚ್ಚರಿಕೆ ಸಂದೇಶ

1 COMMENT

  1. Hello samyuktakarnataka.in,

    I visited your website online and discovered that it was not showing up in any search results for the majority of keywords related to your company on Google, Yahoo, or Bing.

    Do you want more targeted visitors on your website?

    We can place your website on Google’s 1st Page. yahoo, AOL, Bing. Etc.

    If interested, kindly provide me your name, phone number, and email.

    Well wishes,
    Nishant Sharma | Digital Marketing Manager

    Note: – If you’re not Interested in our Services, send us “opt-out”

LEAVE A REPLY

Please enter your comment!
Please enter your name here