ಹುಬ್ಬಳ್ಳಿ: ದೀಪಾವಳಿ, ಛತ್ ಹಬ್ಬಕ್ಕೆ ವಿಶೇಷ ರೈಲುಗಳ ಸಂಭ್ರಮ, ಇಲ್ಲಿದೆ ಸಂಪೂರ್ಣ ಮಾಹಿತಿ

0
35

ಹಬ್ಬಗಳೆಂದರೆ ಪ್ರಯಾಣಿಕರ ದಟ್ಟಣೆ ಸಾಮಾನ್ಯ. ಈ ಬಾರಿಯ ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ವಿಶೇಷ ರೈಲುಗಳನ್ನು ಘೋಷಿಸಿದೆ.

ಪೂರ್ವ ಕೇಂದ್ರ ರೈಲ್ವೆಯು ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ದಾನಾಪುರ–ಯಶವಂತಪುರ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯವರೆಗೆ ಸಂಚರಿಸಲಿವೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ನೆಮ್ಮದಿ ಸಿಗಲಿದೆ.

ಮುಜಫರ್‌ಪುರಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು (6 ಟ್ರಿಪ್‌ಗಳು):

ರೈಲು ಸಂಖ್ಯೆ 05543 ಮುಜಫರ್‌ಪುರ–ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ರೈಲು ಅಕ್ಟೋಬರ್ 10 ರಿಂದ ನವೆಂಬರ್ 14 ರವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 12 ಗಂಟೆ 45 ನಿಮಿಷಕ್ಕೆ ಮುಜಫರ್‌ಪುರದಿಂದ ಹೊರಟು, ಸೋಮವಾರ ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ  ಹುಬ್ಬಳ್ಳಿ ತಲುಪಲಿದೆ. ಮರಳಿ, ರೈಲು ಸಂಖ್ಯೆ 05544 ಅಕ್ಟೋಬರ್ 14 ರಿಂದ ನವೆಂಬರ್ 18 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು, ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ಮುಜಫರ್‌ಪುರ ತಲುಪಲಿದೆ.

ಪ್ರಮುಖ ನಿಲುಗಡೆಗಳು: ಮೋತಿಪುರ, ಚಕಿಯಾ, ಬಾಪುಧಾಮ್ ಮೋತಿಹಾರಿ, ಬೆತ್ತಿಯಾ, ಗೋರಖ್‌ಪುರ, ಗೋಂಡಾ, ಕಾನ್ಪುರ ಸೆಂಟ್ರಲ್, ಝಾನ್ಸಿ, ಭೋಪಾಲ್, ಇಟಾರ್ಸಿ, ನಾಗ್ಪುರ, ಬಲ್ಲಾರ್ಷಾ, ಕಾಜೀಪೇಟ್, ಕಾಚೇಗುಡ, ಮಹೆಬೂಬ್‌ನಗರ, ಧರ್ಮಾವರಂ, ಯಲಹಂಕ, ತುಮಕೂರು, ಅರಸೀಕೆರೆ, ದಾವಣಗೆರೆ, ರಾಣೇಬೆನ್ನೂರು, ಮತ್ತು ಹಾವೇರಿ.

ಬೋಗಿಗಳ ವಿವರ: 22 ಬೋಗಿಗಳಿದ್ದು, 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 12 ಸ್ಲೀಪರ್, 4 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್ ಕಮ್ ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಇರಲಿವೆ.

ದಾನಾಪುರಯಶವಂತಪುರ ವಿಶೇಷ ರೈಲು (12 ಟ್ರಿಪ್‌ಗಳು):

ರೈಲು ಸಂಖ್ಯೆ 03261 ದಾನಾಪುರ–ಯಶವಂತಪುರ ವಿಶೇಷ ರೈಲು ಅಕ್ಟೋಬರ್ 11 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಗೆ ದಾನಾಪುರದಿಂದ ಹೊರಟು, ಮಂಗಳವಾರ ರಾತ್ರಿ 9 30 ಕ್ಕೆ ಯಶವಂತಪುರ ತಲುಪಲಿದೆ. ಮರಳಿ, ರೈಲು ಸಂಖ್ಯೆ 03262 ಅಕ್ಟೋಬರ್ 14 ರಿಂದ ಡಿಸೆಂಬರ್ 30 ರವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು, ಗುರುವಾರ ಮಧ್ಯಾಹ್ನ 12 ಕ್ಕೆ ದಾನಾಪುರ ತಲುಪಲಿದೆ.

ಪ್ರಮುಖ ನಿಲುಗಡೆಗಳು: ಅರಾ, ಬಕ್ಸರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂ, ಪ್ರಯಾಗ್‌ರಾಜ್, ಸತ್ನಾ, ಜಬಲ್‌ಪುರ, ಇಟಾರ್ಸಿ, ನಾಗ್ಪುರ, ಬಲ್ಲಾರ್ಷಾ, ರಾಮಗುಂಡಂ, ಕಾಚೇಗುಡ, ಮಹೆಬೂಬ್‌ನಗರ, ಧರ್ಮಾವರಂ, ಹಿಂದೂಪುರ, ಮತ್ತು ಯಲಹಂಕ.

ಬೋಗಿಗಳ ವಿವರ: 20 ಬೋಗಿಗಳಿದ್ದು, 2 ಎಸಿ 2-ಶ್ರೇಣಿ, 2 ಎಸಿ 3-ಶ್ರೇಣಿ, 9 ಸ್ಲೀಪರ್, 5 ಸಾಮಾನ್ಯ ದ್ವಿತೀಯ ದರ್ಜೆ, ಮತ್ತು 2 ದ್ವಿತೀಯ ದರ್ಜೆ ಕಮ್ ಲಗೇಜ್-ಕಮ್-ಬ್ರೇಕ್ ವ್ಯಾನ್ (ದಿವ್ಯಾಂಗಜನ ಕೋಚ್ ಸಹಿತ) ಇರಲಿವೆ.

ಈ ವಿಶೇಷ ರೈಲುಗಳು ಹಬ್ಬದ ಸಮಯದಲ್ಲಿ ಪ್ರಯಾಣವನ್ನು ಸುಗಮಗೊಳಿಸಲು ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ಅತ್ಯಂತ ಸಹಕಾರಿಯಾಗಲಿವೆ. ಪ್ರಯಾಣಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

Previous articleಕೊಪ್ಪಳ: ಅಕ್ಟೋಬರ್ 8ರಂದು ನೇರ ಸಂದರ್ಶನ
Next articleZoho: ಪಾವತಿ ಲೋಕದತ್ತ ಹೊಸ ಹೆಜ್ಜೆ

LEAVE A REPLY

Please enter your comment!
Please enter your name here