ದಾವಣಗೆರೆ-ಬೆಂಗಳೂರು: ಇವಿ ಪವರ್ ಪ್ಲಸ್ ಬಸ್ ಮಾರ್ಗ, ಸಮಯ ಬದಲು

0
58

ದಾವಣಗೆರೆ-ಬೆಂಗಳೂರು ನಡುವೆ ಸಂಚಾರ ನಡೆಸುವ ಕೆಎಸ್ಆರ್‌ಟಿಸಿಯ ಎಲೆಕ್ಟ್ರಿಕ್ ಬಸ್ ಮಾರ್ಗ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗ ಬದಲಾಯಿಸಲಾಗಿದ್ದು, ಈ ಕುರಿತು ವಿವರ ನೀಡಲಾಗಿದೆ.

ಕೆಎಸ್ಆರ್‌ಟಿಸಿ ಬೆಂಗಳೂರು-ದಾವಣಗೆರೆ ಮಾರ್ಗದ ಇವಿ ಪವರ್ ಪ್ಲಸ್ ಬಸ್ ಸೇವೆಗಳ ಮಾರ್ಗ, ಸಮಯ ಬದಲಾವಣೆ ಮಾಡಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬರುವಾಗ ಬಾಡಾ ಕ್ರಾಸ್-ವಿದ್ಯಾನಗರ-ಗುಂಡಿ ವೃತ್ತದ-ವಿದ್ಯಾರ್ಥಿಭವನ-ನೂತನ ಬಸ್ ನಿಲ್ದಾಣದ ಮಾರ್ಗದಲ್ಲಿ ಬಸ್ ಕಾರ್ಯಾಚರಣೆ ಮಾಡಲಿದೆ.

ಬಸ್ ವೇಳಾಪಟ್ಟಿ: ಈ ಬಸ್ ಬೆಂಗಳೂರು ನಗರದಿಂದ ಸಂಜೆ 4.50ಕ್ಕೆ ಹೊರಟು ದಾವಣಗೆರೆಗೆ ರಾತ್ರಿ 9.45 ತಲುಪಲಿದೆ ಮತ್ತು ಸಂಜೆ 6.30ಕ್ಕೆ ಹೊರಟು ರಾತ್ರಿ 11.15ಕ್ಕೆ ದಾವಣಗೆರೆ, 7.15ಕ್ಕೆ ಹೊರಟು ರಾತ್ರಿ 1ಕ್ಕೆ ದಾವಣಗೆರೆ, ರಾತ್ರಿ 8.15ಕ್ಕೆ ಹೊರಟು ರಾತ್ರಿ 1.15ಕ್ಕೆ ದಾವಣಗೆರೆ, ರಾತ್ರಿ 9.15ಕ್ಕೆ ಹೊರಟು ಮುಂಜಾನೆ 3ಕ್ಕೆ ದಾವಣಗೆರೆ, ರಾತ್ರಿ 11.58ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗಿನಜಾವ 5 ಗಂಟೆಗೆ ದಾವಣಗೆರೆ ತಲುಪಲಿದೆ.

ಈ ಬಸ್‌ಗಳಲ್ಲಿ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆ ಲಭ್ಯವಿದ್ದು, ಪ್ರಯಾಣಿಕರು ಕೆಎಸ್ಆರ್‌ಟಿಸಿಯ www.ksrtc.in ವೆಬ್‌ಸೈಟ್‌ನಲ್ಲಿ ಮುಂಗಡವಾಗಿ ಆಸನ ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ.

Previous articleರಾಮನಗರ: 36.2 ಎಕರೆ ಜಮೀನು, ನಿಖಿಲ್‌ಗೆ ಸವಾಲು!
Next articleಬೆಂಗಳೂರು: 2026 ಮಾರ್ಚ್‌ಗೆ ಗುಲಾಬಿ ಮೆಟ್ರೋ ರೈಲು ಸಂಚಾರ?

LEAVE A REPLY

Please enter your comment!
Please enter your name here