ಏಕಾಏಕಿ ಬೀದಿನಾಯಿ ಮಗುವಿನ ಮೇಲೆ ದಾಳಿ

0
45

ದಾವಣಗೆರೆ: ಶ್ವಾನದ ಭೀಕರದಾಳಿಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಜಮ್ಮಾಪುರದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಪ್ರಕರಣ ವರದಿಯಾಗಿದೆ.

ದಾವಣಗೆರೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಮನೆ ಆವರಣದಲ್ಲಿ ಆಟವಾಡುತ್ತಿದ್ದ ಸಾಹಿತ್ಯ (3ವರ್ಷ) ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ.

ಶಶಿಕುಮಾರ್, ಮಂಜುಳಾ ದಂಪತಿ ಪುತ್ರಿ ಸಾಹಿತ್ಯಾಳನ್ನು ಆಕೆಯ ಅಜ್ಜಿ ಬಳಿ ಬಿಟ್ಟು ದಂಪತಿಗಳು ಕೆಲಸಕ್ಕೆ ಹೋಗಿದ್ದರು. ಮಗು ಮನೆಯ ಮುಂದೆಯೇ ಆಟವಾಡುತ್ತಿದ್ದ ವೇಳೆ ಏಕಾಏಕಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ.

ಮಗುವಿಗೆ ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳ ನಿಯಂತ್ರಿಸುವಂತೆ ಪೋಷಕರ ಒತ್ತಾಯಿಸಿದ್ದಾರೆ.

Previous articleಲಭಿಸದ ಆಂಬ್ಯುಲೆನ್ಸ್ 108: ಗೂಡ್ಸ್ ಟೆಂಪೋದಲ್ಲಿ ರೋಗಿ ಆಸ್ಪತ್ರೆಗೆ!
Next articleಅನ್ನಭಾಗ್ಯ ಅಕ್ರಮ: ರಾಜ್ಯಾದ್ಯಂತ 570 ಜನರ ಬಂಧನ

LEAVE A REPLY

Please enter your comment!
Please enter your name here