ತರೀಕೆರೆ: ಕಳೆದ ಕೆಲವು ದಿನಗಳಿಂದ ತರೀಕೆರೆ ತಾಲ್ಲೂಕಿನ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಭೈರಾಪುರ ಬಳಿ ಅರಣ್ಯ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮಾನವನ ಜೀವಕ್ಕೆ ಅಪಾಯ ತಂದೊಡ್ಡಿದ್ದ ಚಿರತೆಯನ್ನು ಸೆರೆ ಹಿಡಿಯುವ ಬೃಹತ್ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಯೂಬ್ಬರು ಗುಂಡು ಹಾರಿಸಿದ್ದಾರೆ.
ಈ ಪ್ರದೇಶದಲ್ಲಿ ಚಿರತೆಯ ಉಪಟಳ ತೀವ್ರಗೊಂಡಿತ್ತು. ನವೆಂಬರ್ 20 ರಂದು ಶಿವಪುರ ಗ್ರಾಮದ ಕಲ್ಲು ಕ್ವಾರಿ ಬಳಿ ಕಾರ್ಮಿಕ ದಂಪತಿಯ 5 ವರ್ಷದ ಮಗುವನ್ನು ಚಿರತೆಯು ಪೋಷಕರ ಎದುರೇ ಹೊತ್ತೊಯ್ದು ಕೊಂದಿತ್ತು.
ಈ ಆಘಾತಕಾರಿ ಘಟನೆಯ ಬಳಿಕ ನವೆಂಬರ್ 28 ರಂದು ಭೈರಾಪುರದಲ್ಲಿ 10 ವರ್ಷದ ಬಾಲಕನ ಮೇಲೂ ಚಿರತೆ ದಾಳಿ ನಡೆಸಿ ಜನರನ್ನು ತೀವ್ರ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ಹಾಗೇ ಪದೇ ಪದೇ ನಡೆಯುತ್ತಿದ್ದ ದಾಳಿಯಿಂದಾಗಿ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆ ಹಿಡಿಯಲು ಬೃಹತ್ ಕಾರ್ಯಾಚರಣೆ ಆರಂಭಿಸಿತ್ತು. ಸಕ್ರೆಬೈಲಿನಿಂದ ಮೂರು ಸಾಕಾನೆಗಳು, ಹಾಗೂ ಮಂಗಳೂರು, ಬಂಡೀಪುರ, ಬನ್ನೇರುಘಟ್ಟ ಮತ್ತು ತಾವರೆಕಪ್ಪ ಮೃಗಾಲಯಗಳಿಂದ ವಿಶೇಷ ಪಶುವೈದ್ಯರ ತಂಡವನ್ನು ಕರೆಸಲಾಗಿತ್ತು.
ನಂದಿ, ಕೆಂಚಾಪುರ ಗೇಟ್ ಮತ್ತು ಭೈರಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವು ಬೋನುಗಳನ್ನು ಇರಿಸಲಾಗಿತ್ತು. ಆದರೆ ಈ ಹಿಂದೆ ಬೋನಿನ ಅನುಭವ ಇದ್ದ ಚಿರತೆ ಬೋನಿನ ಹತ್ತಿರ ಸುಳಿಯದೇ ಇದ್ದುದರಿಂದ ನೇರ ಕಾರ್ಯಾಚರಣೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅನಿರ್ವಾಯವಾಗಿತ್ತು.
ಹೀಗಾಗಿ ಭೈರಾಪುರ ಸಮೀಪ ಸಿಬ್ಬಂದಿ ಚಿರತೆಯನ್ನು ಹಿಂಬಾಲಿಸುತ್ತಿದ್ದಾಗ, ಲಂಟಾನ ಪೊದೆಯಲ್ಲಿದ್ದ ಚಿರತೆಯು ಸಿಬ್ಬಂದಿಯ ಮೇಲೆ ದಿಢೀರನೆ ಹಲ್ಲೆಗೆ ಎರಗಿದೆ. ಈ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗುಂಡೇಟು ತಿಂದ ಚಿರತೆ ಕೊಂಚ ದೂರ ಸಾಗಿ ಮೃತಪಟ್ಟಿದೆ.
“ಮಕ್ಕಳ ಮೇಲೆ ದಾಳಿ ಮಾಡಿದ ಚಿರತೆ ಇದೇ ಎಂದು ಅರಣ್ಯ ಇಲಾಖೆ ಹೇಗೆ ದೃಢಪಡಿಸಿತು? ಇಲಾಖೆಯಲ್ಲಿ ಈ ಗುರುತಿಸುವಿಕೆ ಮಾಡಲು ಬೇಕಾದ ಪರಿಣತಿ ಇದೆಯೇ?” ಎಂದು ವನ್ಯಜೀವಿ ತಜ್ಞರು ಪ್ರಶ್ನಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಉದ್ಭವಿಸಿರುವ ಹಿನ್ನೆಲೆಯಲ್ಲಿ, ಮೃಗವು ಮಗು ಕೊಲೆಗೈದ ಚಿರತೆಯೇ ಎಂಬುದರ ಕುರಿತು ಅರಣ್ಯ ಇಲಾಖೆಯು ಮರಣೋತ್ತರ ಪರೀಕ್ಷೆಯ ವರದಿಯನ್ನು ತಕ್ಷಣವೇ ಬಹಿರಂಗಪಡಿಸಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ.“










Alright, giving AE888L1 a shot. User experience is pretty smooth, and the bonus they offered was tempting. We’ll see how the withdrawals go! Give it a try: ae888l1