ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿರುವ ಕಾರಣ ಹೆಚ್ಚಿನ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲಾ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಈ ಕುರಿತು ಪೊಲೀಸರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಪ್ರಕಟಣೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿರುವ ಕಾರಣ ಭೂ ಕುಸಿತ ಉಂಟಾಗುತ್ತಿದ್ದು, ಇನ್ನೂ ಹೆಚ್ಚಿನ ಭೂ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರಮಖ ಪುವಾಸಿ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗ ಐಡಿ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಪತ್ರದ ವಿವರಗಳು: ಚಿಕ್ಕಮಗಳೂರು ಜಿಲ್ಲೆಯು ಪರ್ವತ ಶ್ರೇಣಿಯ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಒಂದು ಭಾಗವಾಗಿರುತ್ತದೆ. ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗ ಐಡಿಪೀಠ ಮತ್ತು ಮುಳ್ಳಯ್ಯನಗಿರಿ ಪ್ರದೇಶವು ಪ್ರಮುಖ ಆಕರ್ಷಿಯ ಗುಡ್ಡಗಾಡಿನ ಸ್ಥಳಗಳಾಗಿರುತ್ತವೆ.
ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಪ್ರವಾಸಿತಾಣಗಳಿಗೆ ಭೇಟಿ ನೀಡುತ್ತಿರುವ ಪ್ರವಸಿಗರ ಸುರಕ್ಷತಾ ಹಿತದೃಷ್ಟಿಯಿಂದ, ಸದರಿ ಪ್ರವಾಸಿತಾಣಗಳನ್ನು ಸ್ಮಳೀಯ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಚಿಕ್ಕಮಗಳೂರು ಅವರಿಂದ ಸ್ಥಳ ಪರಿಶೀಲನೆ ನಡೆಸಲಾಗಿರುತ್ತದೆ.
ಸ್ಥಳೀಯ ಅಧಿಕಾರಿಗಳು ಉಲ್ಲೇಖದಂತೆ ನೀಡಿದ ವರದಿಯಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗ ಐಡಿಪೀಠ ಮತ್ತು ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಅತಿಯಾದ ಮಳೆಯಿಂದ ಹಲವೆಡೆ ಭೂ ಕುಸಿತವಾಗಿದ್ದು, ಈ ಪ್ರದೇಶದಲ್ಲಿ ಪ್ರಸ್ತುತ ಅತಿಯಾದ ವಾಹನಗಳ ಸಂಚಾರದಿಂದ ಭೂ ಕುಸಿತವಾಗುವ ಸಂಭವವಿರುತ್ತದೆಂದು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಈ ಪ್ರದೇಶದಲ್ಲಿ ಸ್ಥಳೀಯ ವಿವಾಸಿಗಳ ವಾಹನಗಳು ಹಾಗೂ ಸರ್ಕಾರಿ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ರಸ್ತೆ ಸಂಚಾರವನ್ನು ಸಗಿತಗೊಳಿಸಲು ಕೋರಿರುತ್ತಾರೆ.
ಪ್ರಸ್ತುತ ಜಿಲ್ಲೆಯಾದ್ಯಂತ ತೀವ್ರ ಮಳೆಯಾದ ಕಾರಣ, ಸ್ಥಳೀಯ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ನೀಡಿದ ವರದಿಯ ಪ್ರಕಾರ ಮುಳ್ಳಯ್ಯನಗಿರಿ ಮತ್ತು ಐಡಿ ಪೀಠದ ರಸ್ತೆ ಮಾರ್ಗಗಳಲ್ಲಿ ಭೂಕುಸಿತ ಉಂಟಾಗಿರುವುದರಿಂದ ಹಾಗೂ ಇನ್ನಷ್ಟು ಭೂಕುಸಿತ ಮತ್ತು ಮರಗಳು ಉರುಳುವ ಸಂಭವ ಇರುವುದರಿಂದ, ಪ್ರವಾಸಿಗರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
ಆದ್ದರಿಂದ ಪುಸ್ತುತ ಪವಾಸಿಗರು ತಾತ್ಕಾಲಿಕವಾಗಿ ಮುಳ್ಳಯ್ಯನಗಿರಿ ಹಾಗೂ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗ ಐಡಿಪೀಠ ಭಾಗದಲ್ಲಿ ದಿನಾಂಕ 14-09-2025ರವರೆಗೆ ಮಳೆ ಪರಿಸ್ಥಿತಿ-ಸುಧಾರಿಸುವವರೆಗೆ ತಮ್ಮ ಪ್ರವಾಸವನ್ನು ಮುಂದೂಡಲು ಕೋರಿದೆ ಎಂದು ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ಮನವಿ ಮಾಡಿದ್ದಾರೆ.