Vande Bhart: ಪ್ರಧಾನಿ ನರೇಂದ್ರ ಮೋದಿ ಬನಾರಸ್ ರೈಲು ನಿಲ್ದಾಣದಲ್ಲಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಬೆಂಗಳೂರು ಎರ್ನಾಕುಳಂ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಅವರು ಇಂದು ಬೆಳಿಗ್ಗೆ 9 ಗಂಟೆಗೆ ಉತ್ತರ ಪ್ರದೇಶದ ಬನಾರಸ್‌ನಿಂದ ವರ್ಚುವಲ್ ವೇದಿಕೆಯಲ್ಲಿ ಚಾಲನೆ ನೀಡಿದರು.
ಇದರ ಜೊತೆಗೆ ಇನ್ನೂಳಿದ ನಾಲ್ಕು ಹೂಸ ಬನಾರಸ್-ಖಜರಾಹೋ, ಲಖನೌ-ಸಹರಾನ್ಸುರ್ ಹಾಗೂ ಫೀರೋಜ್‌ಪುರ-ದೆಹಲಿ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರು ಹಸಿರು ನಿಶಾನೆ ತೋರಿಸುವ ಮೂಲಕ ನಾಲ್ಕು ವಂದೇ ಭಾರತ್ ರೈಲುಗಳಿಗೆ ಮಾರ್ಗಸೂಚಿ ತೋರಿಸಿದರು.
ಬೆಂಗಳೂರುನಲ್ಲಿ ಎರ್ನಾಕುಳಂ ವಂದೇ ಭಾರತ್ ರೈಲು ನವೆಂಬರ್ 8ರಂದು ಮೊದಲ ಸಂಚಾರವನ್ನು ಪರೀಕ್ಷಾರ್ಥವಾಗಿ ಬೆಂಗಳೂರಿನವರೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು.
ಈ ರೈಲ್ವೆ ಬುಧವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 5.10 ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಈ ರೈಲು ಹೊರಡಲಿದ್ದು ಅದೇ ದಿನ ಮಧ್ಯಾಹ್ನ 1.50ಕ್ಕೆ ಎರ್ನಾಕುಳಂ ತಲುಪಲಿದೆ. ಪುನಃ ಇದೆ ದಿನವನ್ನು ಹೊರತುಪಡಿಸಿ ಪ್ರತಿದಿನ ಮಧ್ಯಾಹ್ನ 2.20 ಕ್ಕೆ ಎರ್ನಾಕುಳಂನಿಂದ ಈ ರೈಲು ಹೊರಡಲಿದ್ದು ಅದೇ ದಿನ ರಾತ್ರಿ 11ಕ್ಕೆ ಕೆಎಸ್‌ಆರ್ ಬೆಂಗಳೂರಿಗೆ ಬರಲಿದೆ.
ರೈಲು ಪ್ರತಿದಿನ 583 ಕಿ.ಮೀ ದೂರದ ಪ್ರಯಾಣವನ್ನು 8 ಗಂಟೆ 40 ನಿಮಿಷದಲ್ಲಿ ವಂದೇ ಭಾರತ್ ಕ್ರಮಿಸಲಿದೆ. ಕೇರಳದ ಆರ್ಥಿಕ ರಾಜಧಾನಿ ಎರ್ನಾಕುಳಂ-ಕೊಚ್ಚಿಗೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ. ಕೇರಳ-ತಮಿಳುನಾಡು-ಕರ್ನಾಟಕದಲ್ಲಿ ಸಂಚರಿಸುವ ಈ ರೈಲು ಎಂಟು ಕೋಚ್‌ಗಳನ್ನು ಒಳಗೊಂಡಿರಲಿದೆ.
ಈ ಮಾರ್ಗದ ಹೊಸ ವಂದೇ ಭಾರತ್ ರೈಲು ಪ್ರಯಾಣಿಕರಿಗೆ ಬಹು ಬೇಡಿಕೆಯ ರೈಲಾಗಲಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.
ಶೀಘ್ರದಲ್ಲೇ ಬೆಂಗಳೂರುನಿಂದ ನಿಯಮಿತ ಸೇವೆಗಳು ಆರಂಭವಾಗಲಿವೆ. ಕೇರಳದ ಎರ್ನಾಕುಳಂ ಸೌತ್ ರೈಲು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್‌ನಲ್ಲಿ ಈ ವಂದೇ ಭಾರತ್ ರೈಲಿನ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಎರ್ನಾಕುಳಂ ಬೆಂಗಳೂರು ವಂದೇ ಭಾರತ್ ರೈಲು ಒಟ್ಟು ಎಂಟು ಬೋಗಿಗಳನ್ನು ಹೊಂದಿದೆ.
ಈ ಹೊಸ ಸೇವೆ ಕೇರಳಕ್ಕೆ ಮೂರನೇ ವಂದೇ ಭಾರತ್ ಆಗಿದ್ದು, ದಕ್ಷಿಣ ರೈಲ್ವೆ ವಲಯದಲ್ಲಿ ಕಾರ್ಯನಿರ್ವಹಿಸುವ 12ನೇ ವಂದೇ ಭಾರತ್ ರೈಲು ಜೋಡಿ ಆಗಿದೆ. ಇದರ ಟಿಕೆಟ್ ದರ ಚೇರ್ ಕಾರ್ (CC) ಗೆ ರೂ.1,095 ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ (EC) ಗೆ ರೂ.2,289 ನಿಗದಿಪಡಿಸಲಾಗಿದೆ. ಇದರಲ್ಲಿ ಊಟದ ಶುಲ್ಕ, ಮೀಸಲಾತಿ ಶುಲ್ಕ ಮತ್ತು 5% GST ಸೇರಿಸಲಾಗಿಲ್ಲ.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ಹೊಸ ವೇಗ ಮತ್ತು ಅನುಕೂಲ ತಂದಿದೆ. ಕೆಲಸದ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಇದು ವೇಗ, ಆರಾಮ ಮತ್ತು ಸಮಯ ಪಾಲನೆಯ ಅತ್ಯುತ್ತಮ ಆಯ್ಕೆ ಎನ್ನಲಾಗಿದೆ.
ನಾಳೆ ನವೆಂಬರ್ 9ರಿಂದ ದೈನದಂದಿನ ಸಂಚಾರವನ್ನು ಆರಂಭಿಸಲಿದೆ. ಕೇರಳದ ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೊಯಮತ್ತೂರು, ತಿರುಪ್ಪರು, ಈರೋಡ್, ಸೇಲಂ ಮತ್ತು ಕರ್ನಾಟಕದ ಕೆ.ಆರ್. ಪುರ, ಕೆಎಸ್‌ಆರ್ ಬೆಂಗಳೂರನ್ನು ಸಂಪರ್ಕಿಸಲಿದೆ.


























