ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿದೆ. ಕೈದಿಗಳಿಗೆ ಅಪರಾಧಿ ಭಾವವನ್ನು ಅನುಭವಿಸಲು ಬಿಡದೆ, ವಿಶೇಷ ಆತಿಥ್ಯವನ್ನು ಸಿದ್ಧಪಡಿಸಿಕೊಡುವ ಕಾರ್ಯ ನಡೆಯುತಿದೆ. ಇದೀಗ ವಿಡಿಯೋ, ದೃಶ್ಯಗಳು ಬಹಿರಂಗಗೊಂಡ ಬೆನ್ನಲೇ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು ವಿಡಿಯೋದ ದೃಶ್ಯಗಳು ಅಸಲಿದೆಂದು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಕಾರಾಗೃಹ ಇಲಾಖೆ ಹೆಚ್ಚುವರಿ ಡಿಐಜಿ ಪಿ.ವಿ.ಆನಂದರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳಿಗೆ ಮದ್ಯಪಾನ, ಧೂಮಪಾನ ಮತ್ತು ಸ್ನ್ಯಾಕ್ಸ್‌ಗಳನ್ನ ಕೊಟ್ಟು ಮೂಜು,ಮಸ್ತಿಗೆ ಯಾವುದೆ ತೊಂದರೆ ಇರದಂತೆ ಆಥಿತ್ಯ ಮಾಡಲಾಗಿತ್ತು. ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ನೀಡುತ್ತಿರುವ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಪರಾಧಿಗಳಿಗೆ ಈ ಸೌಲಭ್ಯವನ್ನು ಒದಗಿಸುತ್ತಿರುವದರ ಬಗ್ಗೆ ಜೈಲು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಮದ್ಯ ಸೇವಿಸಿದ ಜೈಲಿನ ವಿಚಾರಣಾ ಕೈದಿಗಳು ಡ್ಯನ್ಸ್ ಮಾಡುತ್ತಿರುವ ಇನ್ನೂಂದು ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಯಾವ ಜೈಲಿನ ವಿಡಿಯೋ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಹಾಗೂ ಭಾನುವಾರ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಕೈದಿಗಳ ಬ್ಯಾರಕ್‌ಗಳಲ್ಲಿ ಪೂರ್ಣ ತಪಾಸಣೆ ನಡೆಸಿದರು.
ಈ ವೇಳೆ ಮೊಬೈಲ್ ಸೇರಿ ಯಾವುದೇ ವಸ್ತು ಪತ್ತೆಯಾಗಿಲ್ಲ. ಕೈದಿಗಳಾದ ಜುಹಾದ್ ಹಮೀದ್, ಉಮೇಶ್ ರೆಡ್ಡಿ ಇರುವ ಬ್ಯಾರಕ್ ಮೇಲೆ ಭಾನುವಾರ ಮುಂಜಾನೆ ಕಾರಾಗೃಹ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿತು. ಉಮೇಶ್ ರೆಡ್ಡಿ ಇರುವ ಕೊಠಡಿಯಲ್ಲಿನ ಟಿ.ವಿ ಸಹಿತ ಹಲವು ವಸ್ತುಗಳು ಮಾಯವಾಗಿರುವುದು ಅಧಿಕಾರಿಗಳಿಗೆ ಅಚ್ಚರಿಯಾಗುವಂತೆ ಮಾಡಿದೆ.
ಕಾರಾಗೃಹ ಇಲಾಖೆ ಹೆಚ್ಚುವರಿ ಡಿಐಜಿ ಪಿ.ವಿ.ಆನಂದ ರೆಡ್ಡಿ ಅವರು ಕಾರಾಗೃಹಕ್ಕೆ ಭೇಟಿ ನೀಡಿ, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಕೈದಿಗಳ ಹತ್ತಿರ ಇದ್ದ ಮೊಬೈಲ್‌ಗಳು ಕೇವಲ ಒಂದೇ ದಿನದಲ್ಲಿ ಮಾಯವಾಗಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಅಲ್ಲದೆ ಜೈಲಿನ ಕೆಲ ಸಿಬ್ಬಂದಿಯೇ ಕೈದಿಗಳೊಂದಿಗೆ ಶಾಮೀಲಾಗಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಅತ್ಯಾಚಾರ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ, ಲಷ್ಕರ್-ಎ-ತಯಬಾ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ಅವರು ಮೊಬೈಲ್ ಫೋನ್ ಹಿಡಿದುಕೊಂಡು ತಮ್ಮ ಸಹಚರರು ಹಾಗೂ ಸಂಬಂಧಿಕರ ಜತೆ ಮಾತುಕತೆ ನಡೆಸುತ್ತಿರುವುದು, ಕೊಠಡಿಯಲ್ಲಿ ಟಿ.ವಿ.ಸೌಲಭ್ಯ ಇರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಜಾಲತಾಣಗಳಲ್ಲಿ ಸದ್ದು ಮಾಡುತಿರುವ ವಿಡಿಯೋಗಳ ಪೈಕಿ ಕೇಲವನ್ನು 2025ರಲ್ಲಿ ಚಿತ್ರೀಕರಿಸಿರುವುದು ಎಂದು ಮೇಲ್ನೋಟಕ್ಕೆ ಖಚಿತವಾಗಿದೆ. ಮೊಬೈಲ್‌ಗಳು ಸಿಕ್ಕಿದ್ದು ಹೇಗೆ? ಕೊಟ್ಟವರು ಯಾರು? ಯಾವಾಗ ಚಿತ್ರೀಕರಿಸಲಾಯಿತು? ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಿಗೆ ವಿಡಿಯೊಗಳನ್ನು ಹರಿಬಿಟ್ಟವರು ಯಾರು? ಎಂಬ ಎಲ್ಲ ಪ್ರಶ್ನೆಗಳನ್ನು ತಿಳಿಯಲು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸೂಚಿಸಲಾಗಿದೆ.
ಅಷ್ಟೇಲ್ಲದೆ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಿಗೆ ಇಲಾಖಾ ವತಿಯಿಂದಲೂ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಆ ವರದಿ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ತನಿಖೆ ನಡೆಸಿ ಆಧಾರಗಳನ್ನು ಪರಿಶೀಲಿಸಿ ವಿಡಿಯೋಗಳು ಹಳೇಯದ್ದಾ ಅಥವಾ ಇತ್ತೀಚಿನದ್ದಾ ಎಂದು ಚರ್ಚಿಸಿ ಸರಿಯಾದ ಮೂಲಗಳನ್ನ ಪತ್ತೆ ಹಚ್ಚಿ ಇದಕ್ಕೆ ಸಹಕರಿಸಿದವರಿಗು ಶಿಕ್ಷೆಗೆ ಒಳಪಡಿಸಬೇಕು.
ಜೊತೆಗೆ ಜೈಲಿನ ಉಸ್ತುವಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ಯಾವ ಅಪರಾಧಿಗಳಿಗೊ ಮೊಬೈಲ್ ಇತರೆ ಆಥಿತ್ಯ ಮಾಡುವಂತಿಲ್ಲ. ಕೆಲವು ದಿನಗಳಿಂದ ಜೈಲಿನ ವಾಸದಿಂದ ಬೇಸತ್ತು, ಯಾವುದೇ ಸೌಲಭ್ಯವಿಲ್ಲದೆ ನಟ ದರ್ಶನ್ ಅವರು ದಿಂಬು ಹಾಸಿಗಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಯಾವುದೆ ಅಡಚಣೆ ಇಲ್ಲದೆ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಜೈಲು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.























