ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ, ಕಬ್ಬು ಬೆಳೆಗೆ ದರ ಏರಿಕೆಗೆ ರೈತರುಗಳ ಬೇಡಿಕೆ ಹಿನ್ನೆಲೆಯಲ್ಲಿ ಸಹಕಾರ ನೀಡುವಂತೆ ಸಿಎಂ ಕಾರ್ಖಾನೆ ಮಾಲೀಕರಲ್ಲಿ ಮನವಿ ಮಾಡಿದರು. ಆದರೆ ಬೆಲೆ ಏರಿಕೆಗೆ ಸಮ್ಮತಿಸದೇ ಬದಲಿಗೆ ಮಾಲೀಕರು ಸಮಸ್ಯೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.ಕಾರ್ಖಾನೆ ನಡೆಸಲು ಆಗುತ್ತಿಲ್ಲ. ಸಕ್ಕರೆ ಕಾರ್ಖಾನೆ ನಡೆಸುವುದು ಬಹಳ ಕಷ್ಡಕರವಾಗಿದೆ. ಸಕ್ಕರೆ, ಎಥೆನಾಲ್, ವಿದ್ಯುತ್ ಉತ್ಪಾದನೆ ಮಾಡಿದರೂ ಈಗ ನಾವು ಸಂಕಷ್ಟದಲ್ಲಿ ಸೀಲುಕಿದ್ದವೆ. ಅಲ್ಲದೇ ಬೆಳೆಗಾರ ರೈತರುಗಳಿಂದ ಕೆಟ್ಟ ಬೈಗುಳಗಳನ್ನು ಕೇಳುತ್ತಿದೆವೆ.
ಬೆಳೆಗೆ ದರ ಏರಿಕೆಗೆ ರೈತರಿಂದಲೂ ಬಹಳ ಒತ್ತಡ ಬರುತ್ತಿದೆ. ಹೀಗಾದರೇ ಕಾರ್ಖಾನೆಗಳನ್ನು ನಡೆಸುವುದೇ ಕಷ್ಟ ಆಗುತ್ತದೆ. ಇದೆ ಮುಂದುವರೆದರೇ ಸರ್ಕಾರವೇ ನಮ್ಮ ಕಾರ್ಖಾನೆಗಳನ್ನು ನಡೆಸಲಿ ಎಂದು ಕಾರ್ಖಾನೆ ಮಾಲೀಕರು ತಮ್ಮ ಆಕ್ರೋಶವನ್ನು ಹೂರಹಾಕಿದ್ದಾರೆ. ಇದೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ನೋವು ತೋಡಿಕೊಂಡರು.
ಇದೆ ಶುಕ್ರವಾರ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಸಂಕಷ್ಟಗಳನ್ನು ಮುಖ್ಯಮಂತ್ರಿಗಳ ರೈತರ ಬೇಡಿಕೆಗಳನ್ನ ಇಡೆರಿಸುವಂತೆ ಮತ್ತು ಬೆಳೆ ದರ ಏರಿಕೆ ಮಾಡಿ ರೈತರಿಗೆ ಸಹಕರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು. ಕಾರ್ಖಾನೆಯ ಮಾಲೀಕರುಗಳು ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಇದೆಲ್ಲವನ್ನು ಆಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜೊತೆಗೆ ಇನ್ನೂಂದು ಸಭೆ ನಡೆಸಿ ಚರ್ಚೆ ಸಡೆಸುವುದಾಗಿ ಹೇಳಿದರು.
ಇದಕ್ಕೊ ಮೊದಲು ಬೆಳೆ ದರ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ” ಕಾರ್ಖಾನೆ ನಡೆಸುವುದು ನೀವು ಹೇಳುವಷ್ಟೇ ಕಷ್ಟವಾಗಿದ್ದರೆ ಒಬ್ಬ ಮಾಲಿಕನಿಗೆ ಒಂದೇ ಕಾರ್ಖಾನೆ ಇದ್ದವರು ಇವಾಗ ಎರಡು, ಮೂರು ಕಾರ್ಖಾನೆಗಳ ಮಾಲೀಕರಾಗಿದ್ದು ಹೇಗೆ ಸಾಧ್ಯ ಎನ್ನುವ ರೈತರ ಪ್ರಶ್ನೆಗೆ ಏನು ಉತ್ತರ ಹೇಳ್ತೀರಿ” ಎಂದು ಸಿಎಂ ಪ್ರಶ್ನಿಸಿದರು.ಕೇಂದ್ರ ಸರ್ಕಾರ ಎಫ್ ಆರ್ ಪಿ ದರಕ್ಕೆ ಪೂರಕವಾಗಿ MSP ದರ ಏರಿಸುತ್ತಿಲ್ಲ. 2019 ರಿಂದ ಕೇಂದ್ರ MSP ದರ ಏರಿಸಿಲ್ಲ. ಎಥೆನಾಲ್ ದರವನ್ನೂ ಏರಿಸಿಲ್ಲ.
ನಮ್ಮ ಈ ಸಮಸ್ಯೆ ಬಗ್ಗೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸಬೇಕು ಎಂದು ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು MSP ದರ ಹೆಚ್ಚಿಸುವಂತೆ ಬಹಳ ಹಿಂದೆಯೇ ಕೇಂದ್ರಕ್ಕೆ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೆವೆ. ಇಲ್ಲಿಯವರೆಗೂ ಕೇಂದ್ರ ಸರ್ಕಾರ MSP ಹೆಚ್ಚಿಸಿಲ್ಲ. ರಾಜ್ಯ ಪ್ರತಿನಿಧಿಸುವ ಕೇಂದ್ರ ಮಂತ್ರಿಗಳೂ ಕಬ್ಬು ಬೆಳೆಗಾರರಿಗೆ MSP ದರ ಹೆಚ್ಚಿಸುವುದಕ್ಕೆ ಸಹಕರಿಸಲಿಲ್ಲ, ಪ್ರಧಾನಿಯವರು ಜೊತೆ ಮಾತನಾಡುತ್ತಿಲ್ಲ. ಏನು ಮಾಡೋದು ? ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ನಂತರ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ದರ ಎರಿಕೆ ತೀರ್ಮಾನದ ಕುರಿತು ಮೊದಲ ಸುತ್ತಿನ ಸಭೆ ಮುಕ್ತಾಯವಾಗಿದೆ. ಇದೀಗ ರೈತರ ಜೊತೆಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ರೈತರ ಜೊತೆಗಿನ ಸಭೆಯ ಬಳಿಕ ಮತ್ತೊಂದು ಸುತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸುತ್ತೇವೆ. ದರ ಹೆಚ್ಚಳ ಹಾಗೂ ರೈತರ ಎಲ್ಲ ಸಮಸ್ಯಗಳ ಬಗ್ಗೆ ಇನ್ನೂಮ್ಮೆ ಸಭೆ ಕರೆದು ನಂತರ ತೀರ್ಮಾನ ಕೈಗೊಳ್ಳಲು ಸಿಎಂ ಹಾಗು ಸರ್ಕಾರ ಮುಂದಾಗಿದೆ.


























