ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೀಗ ಕಥೆ ಕಳವು ವಿವಾದಕ್ಕೆ ಸಿಲುಕಿರುವುದು ಎಲ್ಲರಿಗೂ ತಿಳಿದ ವಿಷಯ. ಈ ವಿಚಾರಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ, ನಿರ್ದೇಶಕರಾದ ಗುರುದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ವಿರುದ್ಧ ಕಿಡಿಕಾರಿದ್ದಾರೆ.
ಲೀಗಲ್ ಆಗಿ ಹೋಗ್ತೀನಿ ಅಂದಾಗ ಡಾರ್ಲಿಂಗ್ ಕೃಷ್ಣ ನಮ್ಮ ಕ್ಲೋಸ್ ಫ್ರೆಂಡ್, ನನ್ನ ಬೆಸ್ಟ್ ಫ್ರೆಂಡ್ ಬೆಸ್ಟ್ ಫ್ರೆಂಡ್. ಇಂಥ ಗುರುದೇಶಪಾಂಡೆನ ಬೆಸ್ಟ್ ಫ್ರೆಂಡ್ ಅಂದ್ರೆ ನನ್ನ ಮನೇಲಿ ಸೇರಿಸ್ತಾರಾ, ನಾನು ಹೇಗೆ ಬದುಕಿದ್ದೀನಿ ಅನ್ನೋದನ್ನ ನೀವೆಲ್ಲರೂ ನೋಡಿದ್ದೀರಾ ಗುರುದೇಶಪಾಂಡೆ ಹೇಗೆ ಬದುಕಿದ್ದಾರೆ ಅನ್ನೋದನ್ನ ನೀವೆಲ್ಲರೂ ನೋಡಿದ್ದೀರಾ ಅಲ್ವಾ ಅವರು ನನ್ನ ಬೆಸ್ಟ್ ಫ್ರೆಂಡ್ ಅಲ್ಲ ಅವರ ಜೊತೆ ಕಥೆ ಡಿಸ್ಕಸ್ ಮಾಡಿಲ್ಲ ಇವರಿಗೆಲ್ಲ ಲೀಗಲ್ ಆಗಿ ಕೊಡ್ತೀನಿ ಎಂದು ಡಾರ್ಲಿಂಗ್ ಕೃಷ್ಣ ಗುಡುಗಿದ್ದಾರೆ.
ಕೋರ್ಟ್ ರೂಮ್ ಡ್ರಾಮಾ ಎಷ್ಟು ಸಿನಿಮಾದಲ್ಲಿ ಬಂದಿಲ್ಲ. ಲವ್ ಮಾಕ್ಟೇಲ್ ಚಿತ್ರದಲ್ಲಿ ನಿಧಿಮಾಗೆ ಕ್ಯಾನ್ಸರ್ ಬಂದು ಸತ್ತು ಹೋಗ್ತಾರೆ. ನೆಕ್ಸ್ಟ್ ಇಂಡಸ್ಟ್ರಿಯಲ್ಲಿ ಯಾರಾದ್ರೂ ಕಥೇಲಿ ಹೀರೋಯಿನ್‌ಗೆ ಕ್ಯಾನ್ಸರ್ ಬಂದು ತೀರಿಹೋದರೆ ಅದು ನಂದು ಅನ್ನೋಕಾಗುತ್ತ. ನಾನು ಜೆನ್ಯೂನ್ ಫಿಲಂ ಮೇಕರ್ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಿಲನಾ ನಾಗರಾಜ್ ಕೂಡ ಮಾತನಾಡಿದ್ದಾರೆ. ನಮಗೆ ಏನಾದರು ಕಥೆ ಐಡಿಯಾಸ್ ಬರದೇ ಇದ್ರೆ ನಮಗೆ ಮುಂದೆ ಬರಿಯೋಕೆ ಆಗದೆ ಇದ್ದರೆ ಇಂಥವರ ಹತ್ತಿರ ಕಥೆ ಕದ್ದು ಸಿನಿಮಾ ಮಾಡಬೇಕು ಅನ್ನೋ ಪರಿಸ್ಥಿತಿ ಬಂದರೆ ನಾವು ಸಿನಿಮಾನೇ ಮಾಡೋದಿಲ್ಲ ಎಂದು ಮಿಲನಾ ನಾಗರಾಜ್ ಹೇಳಿದ್ದಾರೆ.
ಇನ್ನು ಡಾರ್ಲಿಂಗ್ ಕೃಷ್ಣ ಅವರು ಮಾಧ್ಯಮದವರು ಕೇಳಿದ ಪ್ರಶ್ನಗೆ ಉತ್ತರಿಸಿದ್ದಾರೆ. ಕಾಂಪ್ರಮೈಸ್ ಆಗ್ತಿವಿ ಹೋಗಿರೋ ಮರ್ಯಾದೆ ಯಾರು ಕೊಡ್ತಾರೆ, ಕಷ್ಟ ಪಟ್ಟು ಓದಿರೋ ಸ್ಟೂಡೆಂಟ್‌ಗೆ ಕಾಪಿ ಮಾಡಿ ಪಾಸ್ ಆಗಿದಿಯಾ ಅಂದ್ರೆ ಎಲ್ಲಿಂದ ಉರಿಯುತ್ತೆ ಸರ್ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.



















