Namma Metro: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೇವೆಗಳನ್ನು ಸಾರ್ವಜನಿಕರಿಗೆ ಸದ್ಬಳಕೆಯ ಆಲೋಚನೆಯಿಂದ ಘೋಷಿಸಿದ್ದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಬಿಎಂಆರ್‌ಸಿಎಲ್ 1947 ರ ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿ ವ್ಯಾಖ್ಯಾನಿಸಲಾದ ರೈಲ್ವೆ ಇದೂಂದು ಕಂಪನಿಯಾಗಿದ್ದು, ರಾಜ್ಯ ಸರ್ಕಾರವು ತನ್ನ ಸೇವೆಗಳನ್ನು ಸಾರ್ವಜನಿಕ ಉಪಯುಕ್ತತೆಯಾಗಿ ಅಧಿಸೂಚನೆ ಮಾಡುವ ಯಾವುದೇ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಗಮನಿಸಲಾಗಿದೆ.
ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗ್ಡೆ ತಮ್ಮ ಆದೇಶದಲ್ಲಿ ಕೇಂದ್ರ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಸೂಕ್ತ ಅಧಿಕಾರ ಹೊಂದಿದ್ದು, ರಾಜ್ಯ ಸರ್ಕಾರವು ತನ್ನ ಸೇವೆಗಳನ್ನು ಅಧಿಸೂಚನೆ ಮಾಡುವ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲ ಎಂದು ಅಭಿಪ್ರಾಯ ತಿಳಿಸಿದರು. ಅಷ್ಟೇ ಅಲ್ಲದೆ ನ್ಯಾಯಾಧೀಶರು ಬಿಎಂಆರ್‌ಸಿಎಲ್ ನೌಕರರ ಪ್ರತಿಒಬ್ಬರ ನಡತೆ, ಶಿಸ್ತು ಮತ್ತು ಮೇಲ್ಮನವಿ ನಿಯಮಗಳಿಗೆ ಬದ್ಧರಾಗಿಬೇಕು ಎಂದು ಸೊಚನೆ ಹೊರಡಿಸಿದ್ದಾರೆ.
ಕರ್ನಾಟಕದ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ, 2013 ರ ಅಡಿಯಲ್ಲಿ ಹೊರಡಿಸಲಾದ ಜುಲೈ 7, 2017 ರ ಅಧಿಸೂಚನೆಯನ್ನು ರದ್ದುಗೊಳಿಸಿದರು. 1946 ರ ಕೈಗಾರಿಕಾ ಉದ್ಯೋಗ ಕಾಯ್ದೆಯ ಸೆಕ್ಷನ್ 14 ರ ಅಡಿಯಲ್ಲಿ ಬಿಎಂಆರ್‌ಸಿಎಲ್‌ಗೆ ಯಾವುದೇ ವಿನಾಯಿತಿ ನೀಡದಂತೆ ನ್ಯಾಯಾಧೀಶರು ರಾಜ್ಯ ಸರ್ಕಾರವನ್ನು ತಡೆಹಿಡಿದಿದ್ದರು.
ಬಿಎಂಆರ್‌ಸಿಎಲ್ ನೌಕರರ ಸಂಘವು ಈ ಹಿಂದೆ ನಿಯಮಗಳನ್ನು ಪ್ರಶ್ನಿಸಿತ್ತು. ಆದರೆ ಬಿಎಂಆರ್‌ಸಿಎಲ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾತ್ರ ಸರಿಯಾದ ಅಧಿಕಾರ ಹೊಂದಿದೆ ಎಂಬ ಕಾರಣಕ್ಕೆ, ಸೆಕ್ಷನ್ 14 ರ ಕಾಯ್ದೆಯ ಅಡಿಯಲ್ಲಿ 1946 ರ ಕೈಗಾರಿಕಾ ಉದ್ಯೋಗ ವಿನಾಯಿತಿ ನೀಡುವುದನ್ನು ರಾಜ್ಯ ಸರ್ಕಾರ ತಡೆಯಬೇಕು.
ಹಾಗೇ ಸೆಕ್ಷನ್ 13 ಮತ್ತು 14-ಎ ಕಾಯ್ದೆಯ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದಿಂದ ನಿರ್ದೇಶನವನ್ನು ಕೋರಿತು ದಾಖಲೆಯಲ್ಲಿರುವ ಆಧಾರಗಳನ್ನು ಪರಿಶೀಲಿಸಬೇಕು.
ನಂತರ ನ್ಯಾಯಮೂರ್ತಿ ಹೆಗ್ಡೆರವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಎಂಆರ್‌ಸಿಎಲ್‌ನಲ್ಲಿ ತಲಾ 50% ಷೇರುಗಳನ್ನು ಹೊಂದಿದ್ದರೂ ಮತ್ತು ನಿರ್ದೇಶಕರ ಮಂಡಳಿಯಲ್ಲಿ ರಾಜ್ಯ ಸಚಿವರು ಮತ್ತು ಕಾರ್ಯದರ್ಶಿಗಳು ಇದ್ದರೂ, ಅಂತಿಮ ಆಡಳಿತಾತ್ಮಕ ಅಧಿಕಾರವು ಕೇಂದ್ರ ಸರ್ಕಾರದ್ದಾಗಿತ್ತು ಎಂದು ಹೇಳಿದರು.
ನೌಕರರ ಸಂಘ ಸಲ್ಲಿಸಿದ ಅರ್ಜಿಗಳನ್ನು ಸದ್ಯ ಮಾನ್ಯ ಮಾಡಿದ ನ್ಯಾಯಾಧೀಶರು, ರಾಜ್ಯ ಸರ್ಕಾರವು ನಿರ್ಣಾಯಕ ಆಡಳಿತಾತ್ಮಕ ನಿರ್ಧಾರಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಬೇಕು ಎಂದು ಹೇಳಿದರು. ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ಸಹ ವಜಾಗೊಳಿಸಲಾಯಿತು.























