ಗ್ರೇಟರ್ ಬೆಂಗಳೂರು ರಚನೆ: ಪಾಲಿಕೆ ಕಚೇರಿಗಳು ಎಲ್ಲೆಲ್ಲಿ ಸ್ಥಾಪನೆ?

0
49

ಗ್ರೇಟರ್ ಬೆಂಗಳೂರು ರಚನೆ ಮಾಡಿ ಕರ್ನಾಟಕ ಸರ್ಕಾರ ಆದೇಶವನ್ನು ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾಲಿಕೆ ಕಚೇರಿಗಳು ಎಲ್ಲೆಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಜನರಿಗೆ ಮಾಹಿತಿ ನೀಡಿದೆ.

ಈ ಕುರಿತು ಉಪ ಆಯುಕ್ತರು (ಆಡಳಿತ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಗ್ರೇರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಸೃಜನೆಯಾಗುವ ನಗರ ಪಾಲಿಕೆಗಳಿಗೆ ಕಛೇರಿಗಳನ್ನು ಸ್ಥಾಪಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನಾಗಿಸಿ 5 ನಗರ ಪಾಲಿಕೆಗಳಾಗಿ ವಿಭಜಿಸಲು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸದರಿ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿರುತ್ತದೆ.
ಮುಂದುವರೆದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ನಗರ ಪಾಲಿಕೆಗಳನ್ನು ಸೃಜಿಸಿ, ಪ್ರತಿ ನಗರ ಪಾಲಿಕೆಗೆ 2 ವಲಯಗಳನ್ನು ಸೃಜಿಸಲು ಉದ್ದೇಶಿಸಲಾಗಿರುತ್ತದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಛೇರಿ ಮತ್ತು 5 ನಗರ ಪಾಲಿಕೆಗಳ ಒಟ್ಟು 10 ವಲಯ ಕಛೇರಿಗಳಿಗೆ ಈ ಕೆಳಗಿನಂತೆ ಹಾಲಿ ಕಛೇರಿಗಳನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ ಎಂದು ಹೇಳಿದೆ.

ಪಾಲಿಕೆ ಕಚೇರಿಗಳು ಎಲ್ಲೆಲ್ಲಿ?

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಛೇರಿಯ ಮುಖ್ಯ ಕಟ್ಟಡ (ಅನೆಕ್ಸ್-1) ಮತ್ತು ಅನೆಕ್ಸ್-2 ಕಟ್ಟಡ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವಲಯ-1 ಹಾಲಿ ಪೂರ್ವ ವಲಯ ಕಛೇರಿ. ವಲಯ-2 ಕೇಂದ್ರ ಕಛೇರಿಯ ಅನೆಕ್ಸ್-3 ಕಟ್ಟಡ.

ಬೆಂಗಳೂರು ಪೂರ್ವ ನಗರ ಪಾಲಿಕೆ. ವಲಯ-1 ಹಾಲಿ ಮಹದೇವಪುರ ವಲಯ ಕಛೇರಿ. ವಲಯ-2 ಹಾಲಿ ಕೆ.ಆರ್.ಪುರಂ ಮುಖ್ಯ ಅಭಿಯಂತರರ ಕಛೇರಿ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ. ವಲಯ-1 ಹಾಲಿ ಆರ್.ಆರ್.ನಗರ ವಲಯ ಕಛೇರಿ. ವಲಯ-2 ಹಾಲಿ ಪಾಲಿಕೆ ಸೌಧ, ಚಂದ್ರಾಲೇಔಟ್, ವಲಯ ಕಛೇರಿ.

ಬೆಂಗಳೂರು ಉತ್ತರ ನಗರ ಪಾಲಿಕೆ. ವಲಯ-1 ಹಾಲಿ ಯಲಹಂಕ ವಲಯ ಕಛೇರಿ. ವಲಯ-2 ಹಾಲಿ ದಾಸರಹಳ್ಳಿ ವಲಯ ಕಛೇರಿ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ. ವಲಯ-1 ಹಾಲಿ ದಕ್ಷಿಣ ವಲಯ ಕಛೇರಿ. ವಲಯ-2 ಹಾಲಿ ಬೊಮ್ಮನಹಳ್ಳಿ ವಲಯ ಕಛೇರಿ.

ಈ ಮೇಲಿನಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಗಳಿಗೆ ಕಛೇರಿಗಳ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ನಗರ ಪಾಲಿಕೆಗೆ ಪ್ರಮುಖ ಕಛೇರಿಗಳಾದ ಆಯುಕ್ತರ ಕಛೇರಿ, ವಿಶೇಷ ಆಯುಕ್ತರ ಕಛೇರಿ, ವಲಯವಾರು ಮುಖ್ಯ ಅಭಿಯಂತರರು, ಜಂಟಿ ಆಯುಕ್ತರು, ಉಪ ಆಯುಕ್ತರುಗಳಿಗೆ ಈ ಮೇಲೆ ತಿಳಿಸಲಾಗಿರುವ ಕಛೇರಿಗಳಲ್ಲಿ ಕಛೇರಿ ವ್ಯವಸ್ಥೆಯನ್ನು ಕಲ್ಪಿಸಲು ಸೂಕ್ತ ಏರ್ಪಾಡು ಮಾಡಿಕೊಳ್ಳಲು ಎಲ್ಲಾ ವಲಯ ಆಯುಕ್ತರುಗಳಿಗೆ ಸೂಚಿಸಿದೆ ಎಂದು ಆದೇಶ ಹೇಳಿದೆ.

Previous articleLPG Price: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ
Next articleಮೈಸೂರು: ರಾಜಕೀಯಕ್ಕಾಗಿ ಧರ್ಮಸ್ಥಳ ಯಾತ್ರೆ – ಸಿಎಂ ಸಿದ್ದರಾಮಯ್ಯ

LEAVE A REPLY

Please enter your comment!
Please enter your name here