ಬೆಂಗಳೂರು ನಗರದಾಚೆ 18,000 ಕೋಟಿ ವೆಚ್ಚದಲ್ 110 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಾಣವಾಗಲಿದೆ. ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಇದನ್ನು ನಿರ್ಮಾಣ ಮಾಡಲಿದ್ದು, ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಗೇಟರ್ ಬೆಂಗಳೂರು ಪ್ರಾಧಿಕಾರ ಸಿದ್ಧತೆ ಕೈಗೊಂಡಿದ್ದು, ಇದೀಗ ನಗರದಲ್ಲಿ 110 ಕಿ.ಮೀ.ಎಲಿವೆಡೆಟ್ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ.
ಬಿ-ಸ್ಮೈಲ್ ಸಂಸ್ಥೆಯಿಂದ 110 ಕಿ.ಮೀ. ಉದ್ದದ ಎತ್ತರಿಸಿದ ಕಾರಿಡಾರ್ ಕಾಮಗಾರಿಯನ್ನು 18,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ನಗರ ಬೆಳೆದಂತೆ ಹೊರ ಭಾಗಗಳಲ್ಲಿ ಟ್ರಾಫಿಕ್ ಉಲ್ಬಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾರಿಡಾರ್ ರಸ್ತೆಯನ್ನು ನಗರದ ಹೊರ ಭಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಿ-ಸ್ಮೈಲ್ ನಿರ್ದೇಶಕ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.
ಡಿಪಿಆರ್ ಸಿದ್ಧ: ಹೊಸ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಇದಕ್ಕೆ ಸರ್ಕಾರ ಕೂಡ ಅನುಮೋದನೆ ನೀಡಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಶುರು ಮಾಡಲಾಗುವುದು ಎಂದು ಪ್ರಹ್ಲಾದ್ ತಿಳಿಸಿದ್ದಾರೆ. ಕಾಮಗಾರಿಗೆ ನಿಗದಿಪಡಿಸಿರುವ 18 ಸಾವಿರ ಕೋಟಿ ರೂ. ಗಳಲ್ಲಿ 3000 ಕೋಟಿ ಭೂಸ್ವಾಧೀನಕ್ಕೆ ಉಳಿದ 15,000 ಕೋಟಿ ರೂ.ಗಳಲ್ಲಿ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ.
ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಈ ಕಾರಿಡಾರ್ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ನೀವು ಟೋಲ್ ನೀಡಬೇಕಾಗುತ್ತದೆ. ಈ ಕಾರಿಡಾರ್ ರಸ್ತೆಯನ್ನು ಕೇವಲ 3 ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ನೂತನ ತಂತ್ರಜ್ಞಾನದಿಂದ ಹೈಟೆಕ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು.
ಇನ್ನೂ ಗುಂಡಿ ಬಿದ್ದ ರಸ್ತೆಗಳಿಗೆ ಮುಕ್ತಿ ನೀಡಲು ನಗರದ 500 ಕಿ.ಮೀ. ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ 440 ಕಿ.ಮೀ. ಮೆಟ್ರೋ ಹಳಿಗಳ ಸಮೀಪ 9000 ಕೋಟಿ ನಿರ್ಮಾಣ, ರೂ.ಗಳ ವೆಚ್ಚದಲ್ಲಿ ಜೋಡಿ ರಸ್ತೆ 5500 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ, ಕಾರಿಡಾರ್ ನಿರ್ಮಾಣಕ್ಕಾಗಿ ನಗರದ ಹೊರ ವಲಯಗಳಲ್ಲಿ 16 ಜಾಗಗಳನ್ನು ಗುರುತಿಸಲಾಗಿದೆ. ಒಟ್ಟಾರೆ ಮೂರ್ನಾಲ್ಕು ವರ್ಷಗಳಗಲ್ಲಿ ನಗರವನ್ನು ಸಂಚಾರ ದಟ್ಟಣೆ ಮುಕ್ತ ಪ್ರದೇಶವನ್ನಾಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಕಾರಿಡಾರ್ ರಸ್ತೆಯ ಮಾಹಿತಿ
- ಬಿ ಸ್ಮೈಲ್ ಸಂಸ್ಥೆಯಿಂದ 18,000 ಕೋಟಿ ರೂ.ವೆಚ್ಚದಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಾಣ
- ಇದರಲ್ಲಿ 3000 ಕೋಟಿ ರೂ. ಭೂಸ್ವಾಧಿನಕ್ಕೆ 15000 ಕೋಟಿ.ರೂ ಕಾಮಗಾರಿಗೆ ವಿನಿಯೋಗ
- ಡಿಸೆಂಬರ್ ವೇಳೆಗೆ ಕಾರಿಡಾರ್ ಕಾಮಗಾರಿ ಆರಂಭ
- ಕಾರಿಡಾರ್ ರಸ್ತೆ ನಿರ್ಮಾಣದ ಡಿಪಿಅರ್‌ಗೆ ರಾಜ್ಯದ ಅನುಮೋದನೆ