ದೇವನಹಳ್ಳಿ: ಇದು ರಸ್ತೆಯೋ, ಕೆರೆಯೋ?

0
45

ದೇವನಹಳ್ಳಿ: ಪಟ್ಟಣದ ಹೊಸಕೋಟೆ ರಸ್ತೆಯಲ್ಲಿರುವ ಸತ್ವ ಅಪಾರ್ಟ್‌ಮೆಂಟ್‌ ಬಳಿ ಕೆರೆಯಂತಾಗಿದೆ. ರಸ್ತೆ ಹೀಗಿದ್ದರೂ ಕಣ್ಣಿದ್ದರೂ ಕಾಣದಂತೆ ವರ್ತಿಸುತ್ತಿರುವ ಪುರಸಭಾ ಅಧಿಕಾರಿಗಳ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಬಂತೆಂದರೆ ಇಂತಹ ಸ್ಥಳಗಳಲ್ಲಿ ರಸ್ತೆ ಯಾವುದು? ಎಂದು ಹುಡಕಾಡಿಕೊಂಡು ಹೋಗಬೇಕಾದ ಪರಿಸ್ಥತಿ ಎದುರಾಗುತ್ತದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿಯುವುದರಿಂದ ಇದು ರಸ್ತೆಯೋ?, ಕೆರೆಯೋ? ಎಂಬ ಪ್ರಶ್ನೆ ಮೂಡುತ್ತದೆ.

ಪ್ರತಿ ಬಾರಿಯೂ ಮಳೆ ಸುರಿದಾಗ ಈ ರಸ್ತೆಯಲ್ಲಿ ವಾಹನ ಸವಾರರ ಸಂಚಾರ ಸರ್ಕಸ್ ಮಾಡಿದಂತೆ. ನೀರಿನಿಂದ ತುಂಬಿದ ರಸ್ತೆಯಲ್ಲಿ ಗುಂಡಿ ಎಲ್ಲಿದೆ? ಎಂದು ನೋಡಿಕೊಂಡು ವಾಹನ ಚಲಾಯಿಸುವುದೇ ದೊಡ್ಡ ಸವಾಲು.

ಇನ್ನೂ ಬೈಕ್ ಸವಾರರ ಸಂಕಷ್ಟ ಹೇಳತೀರದು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಪಾದಚಾರಿಗಳು ಈ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಬೇಕಾಗಿದೆ. ಮಳೆ ಸುರಿದ ಕೂಡಲೇ ರಸ್ತೆ ಕೆರೆಯಂತಾಗಲಿದ್ದು, ಜನರು ಹಿಡಿಶಾಪ ಹಾಕಿದ್ದಾರೆ.

Previous articleಜನಪ್ರಿಯ ಉಪಾಹಾರ ಇಡ್ಲಿಯ ಗೂಗಲ್ ಡೂಡಲ್
Next articleಗ್ರಾಮ ಪಂಚಾಯಿತಿ: ಮಹಿಳಾ ಸದಸ್ಯರ ಗಂಡನದ್ದೇ ಅಧಿಕಾರ!

LEAVE A REPLY

Please enter your comment!
Please enter your name here