ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಡಿಸೆಂಬರ್ 8 ರಿಂದ 19ರವರೆಗೆ ನಡೆಯಲಿರುವ 14ನೇ ಚಳಿಗಾಲದ ಅಧಿವೇಶನಕ್ಕೆ ಈ ಬಾರಿ ಬರೋಬ್ಬರಿ ₹21 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಕಳೆದ ವರ್ಷ ₹15.30 ಕೋಟಿ ವೆಚ್ಚವಾಗಿದ್ದರೂ, ಪ್ರಸ್ತುತ ವರ್ಷ ಭದ್ರತೆ ಮತ್ತು ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಂದಾಜು ಶೇ 37ರಷ್ಟು ಹೆಚ್ಚಳ ಕಂಡಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಪ್ರಕಾರ, ಈ ಬಾರಿ ಪೊಲೀಸ್ ಇಲಾಖೆಯಿಂದ ₹5 ಕೋಟಿ ಹಾಗೂ ಜಿಲ್ಲಾಡಳಿತದಿಂದ ₹16 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇತ್ತೀಚಿನ ನವದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಈ ಬಾರಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸುಮಾರು 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಅಧಿವೇಶನಕ್ಕೆ ವೆಚ್ಚ ಹೆಚ್ಚಾಗಲು ಮೂಲ ಕಾರಣ, ಆಹಾರ ಮತ್ತು ಊಟೋಪಚಾರ. ಈ ವರ್ಷ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ರಾಜ್ಯದ ವಿವಿಧ ಪ್ರದೇಶಗಳ ವಿಶೇಷ ಖಾದ್ಯಗಳಾದ ಜೋಳದ ರೊಟ್ಟಿ, ಸಜ್ಜಿ ಖಡಕ್ ರೊಟ್ಟಿ, ಕುಂದಾ, ಕರದಂಟು, ಮೈಸೂರು ಶ್ರೀ, ರಸ್ಮಲಾಯ್ ಸೇರಿದಂತೆ ಹಲವಾರು ಸಿಹಿ ಖಾದ್ಯಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.
ಕಳೆದ ಬಾರಿ ಪ್ರತಿದಿನ ಊಟಕ್ಕೆ ತಗುಲುತ್ತಿದ್ದ ₹5 ಲಕ್ಷ ವೆಚ್ಚ ಈ ಬಾರಿ ದುಪ್ಪಟ್ಟಾಗುವ ಅಂದಾಜು ಇದೆ. ಒಟ್ಟು ವೆಚ್ಚ ₹169.6 ಕೋಟಿ:2023ರವರೆಗೆ ಒಟ್ಟು 13 ಅಧಿವೇಶನಗಳು ನಡೆದಿದ್ದು, ಇಲ್ಲಿಯವರೆಗೆ ₹169.6 ಕೋಟಿ ಹಣ ಖರ್ಚಾಗಿದೆ. 2023ರಲ್ಲಿ ದಾಖಲೆಯ ₹23 ಕೋಟಿ ವೆಚ್ಚವಾಗಿತ್ತು.
ವಸತಿ ಮತ್ತು ಅನಗತ್ಯ ವೆಚ್ಚಗಳ ಟೀಕೆ: ಶಾಸಕರು, ಸಚಿವರು, ಅಧಿಕಾರಿಗಳು ಸೇರಿದಂತೆ 4,100ಕ್ಕೂ ಹೆಚ್ಚು ಕೋಣೆಗಳನ್ನು ಬೆಳಗಾವಿ ನಗರದಲ್ಲಿ ಬುಕ್ ಮಾಡಲಾಗಿದ್ದು, ವಸತಿಯ ಜತೆಗೆ ಸಾರಿಗೆ ವೆಚ್ಚವೂ ಹೆಚ್ಚುತ್ತಿದೆ. ಸುವರ್ಣ ಸೌಧದ ಬಳಿಯೇ ಶಾಸಕರ ಭವನ ನಿರ್ಮಿಸುವ ಮೂಲಕ ವಸತಿ ಮತ್ತು ಸಾರಿಗೆ ವೆಚ್ಚ ತಗ್ಗಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.
ಅಲ್ಲದೆ, ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅನಗತ್ಯ ವೆಚ್ಚಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ವರ್ಷ ಸಭಾಧ್ಯಕ್ಷರ ಪೀಠ ಮತ್ತು ಮೇಜು ಸಿದ್ಧಪಡಿಸಲು ₹42.93 ಲಕ್ಷ ಹಾಗೂ ಮಹಾನ್ ನಾಯಕರ ಭಾವಚಿತ್ರಗಳು ಮತ್ತು ಅನುಭವ ಮಂಟಪದ ತೈಲವರ್ಣದ ಚಿತ್ರಕ್ಕಾಗಿ ₹67.67 ಲಕ್ಷ ವೆಚ್ಚದ ಹಣ ದುರುಪಯೋಗಕ್ಕೆ ಸಾಕ್ಷಿ ಎನ್ನಲಾಗುತ್ತಿದೆ.
























33jl, huh? Never tried it before. Gonna give it a shot tonight. I’ll let you know if it’s worth the hype. Fingers crossed! Visit it here: 33jl