ಓಟವೇ ಉಸಿರು, ಬಡತನವೇ ಶತ್ರು: ಸಾಧಕ ಸಂಗಮೇಶನಿಗೆ ಬೇಕಿದೆ ಸರ್ಕಾರದ ಆಸರೆ

0
13

ಅದು ಬಡಕುಟುಂಬ, ಆತ ಖಾಸಗಿಯೊಬ್ಬರಲ್ಲಿ ದುಡಿಮೆ ಸಾಗಿಸುತ್ತ ಬಿಪಿಎಡ್ ಶಿಕ್ಷಣ ಕಲಿಯುತ್ತ ರಾಷ್ಟ್ರಮಟ್ಟದಲ್ಲಿ `ರನ್ನಿಂಗ್’ ಸ್ಪರ್ಧೆಯಲ್ಲಿ ಮಿಂಚುತ್ತಿರುವ `ಹಳ್ಳಿ ಹೈದ’ನ ಯಶೋಗಾಥೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಸಂಗಮೇಶ ಅರ್ಜುನ ಹಳ್ಳಿ.

ಇದೀಗ ಬನಹಟ್ಟಿಯಲ್ಲಿ ಜರುಗಿದ ಬಾಗಲಕೋಟೆ ವಿವಿ ವಲಯದ ಪ್ರಥಮ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಹತ್ಸಾಧನೆ ಮಾಡುವ ಮೂಲಕ ಗಮನ ಸೆಳೆಯುವಲ್ಲಿ ಕಾರಣರಾಗಿದ್ದಾರೆ. 24 ವರ್ಷದ ಸಂಗಮೇಶ ಪದವಿ ನಂತರ ಇದೀಗ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಬಿಪಿಎಡ್ ಕಲಿಯುತ್ತಿದ್ದ.

ಇತ ಓಟದಲ್ಲಿ ನೂರಾರು ಪದಕಗಳನ್ನು ಪಡೆಯುವ ಮೂಲಕ ಓಟದಲ್ಲಿ `ಗಾಳಿಯ ಗಂಡ’ ಎಂಬ ಪದವಿಗೂ ಪಾತ್ರನಾಗುವಂತೆ 32 ನಿಮಿಷ 31 ಸೆಕೆಂಡ್‌ಗಳಲ್ಲಿ 10 ಕಿ.ಮೀ.ನಷ್ಟು ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸುತ್ತ ಇದೀಗ 2023ರ ಅಥ್ಲೆಟಿಕ್‌ನಲ್ಲಿ ವಿಶ್ವದಾಖಲೆ ಬರೆದಿರುವ `ಬೆರೆಹು ಅರೆಗ್ವಿ’ಯವರ 26 ನಿಮಿಷ 33 ಸೆಕೆಂಡ್‌ಗಳ ಓಟದತ್ತ ನೋಟವಾಗಿದೆಯೆಂದು ಸ್ವತಃ ಸಂಗಮೇಶ ಎನ್ನುತ್ತಾರೆ.

ಬೆಳಿಗ್ಗೆ ಕಾಲೇಜು, ರಾತ್ರಿ ಪಾಳಿ ಕೆಲಸ: ಬಿಎ ಪದವಿ ನಂತರ ಇದೀಗ ಬಿಪಿಎಡ್ ಮಾಡುತ್ತಿರುವ ಸಂಗಮೇಶ, ಸೆಕ್ಯುರಿಟಿ ಗಾರ್ಡ್ ಆಗಿ ಸೇರುತ್ತ ಓದಿನೊಂದಿಗೆ ಓಟಕ್ಕೂ ತಲ್ಲೀಣತೆ ನೀಡಿ ಏನನ್ನಾದರೂ ಸಾಧನೆ ಮಾಡಬೇಕೆಂಬ ತುಡಿತ ಇವರದಾಗಿದೆ. ತಂದೆ ಕೂಲಿ ಕೆಲಸಕ್ಕೆಂದು ತೆರಳುತ್ತಾರೆ. ಕುಟುಂಬ ನಿರ್ವಹಣೆಯೇ ಸವಾಲಾಗಿದ್ದು, ಈತನ ಶಿಕ್ಷಣ ಹಾಗೂ ಕ್ರೀಡಾ ತಯಾರಿ ಬಲು ದುಬಾರಿಯಾಗಿದೆ.

ಸಾಧನೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 5 ಕಿ.ಮೀ. ಹಾಗೂ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದಾರೆ. ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ ಮೂರನೇಯ ಸ್ಥಾನ ಪಡೆದಿರುವ ಸಂಗಮೇಶ.

ಇದೀಗ ನಾಗಾಲ್ಯಾಂಡ್‌ನಲ್ಲಿ ಜರುತ್ತಿರುವ 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಕ್ರಾಸ್ ಕಂಟ್ರಿ(ಗುಡ್ಡಗಾಡು ಪ್ರದೇಶದ ಓಟ)ಯಲ್ಲಿಯೂ ಸಾಧನೆ ಮೆರೆದಿರುವ ಸಂಗಮೇಶ 400 ಕ್ಕೂ ಅಧಿಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು 300 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಪಾತ್ರರಾಗಿರುವದು ಹೆಮ್ಮೆಯ ವಿಷಯ

ಸರ್ಕಾರ ನೆರವಾಗಲಿ: ಇಂತಹ ಪ್ರತಿಭಾವಂತ ಕ್ರೀಡಾಪಟುವಿಗೆ ಸರ್ಕಾರದ ನೆರವು ಅನಿವಾರ್ಯವಾಗಿದ್ದು, ಮಾಸಿಕ ಏಳೆಂಟು ಸಾವಿರ ರೂ.ಗಳಷ್ಟು ವೆಚ್ಚ ಈ ಕ್ರೀಡಾಲಿಗೆ ಅವಶ್ಯವಿದ್ದು, ಅದೂ ಕೂಡ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಳು ಸಂಗಮೇಶ ಹಳ್ಳಿಯವರಿಗೆ ಸರ್ಕಾರ ಸಹಾಯ ಹಸ್ತ ಚಾಚುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ ಈಡೇರಿಸಬೇಕಾದದು ಜನಪ್ರತಿನಿಧಿಯಾದವರ ಜವಾಬ್ದಾರಿ.

ಕ್ರೀಡಾಳುವಿಗೆ ಸಹಾಯ ಸಹಕಾರ ಸಲ್ಲಿಸುವವರು 63648-39690 ನಂಬರನ್ನು ಸಂಪರ್ಕಿಸಬಹುದು.

Previous articleಐರನ್​ಮ್ಯಾನ್​ ರೇಸ್​ ಪೂರ್ಣಗೊಳಿಸಿದ ಕನ್ನಡಿಗ
Next articleಕಾಲಿವುಡ್‌ನ ಜನಪ್ರಿಯ ನಟ ಅಭಿನಯ್‌ ಇನ್ನಿಲ್ಲ

LEAVE A REPLY

Please enter your comment!
Please enter your name here