ಬಾಗಲಕೋಟೆ: ಉಪಚುನಾವಣಾ ಅಖಾಡದಲ್ಲಿ ಮಾಜಿ ಸಂಸದ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಬೈ ಎಲೆಕ್ಷನ್ ಕುರಿತು ಮಾತನಾಡಿದ ಅವರು ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸರ್ಕಾರದಿಂದ ಕೆಲ ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದಾರೆ. ನಾವು ಇಲ್ಲೇ ಠಿಕಾಣಿ ಹೂಡುತ್ತೇವೆ. ಅವರು ಏನೇನು ಮಾಡಿದ್ದಾರೆ ಎಲ್ಲಾ ತಪ್ಪುಗಳನ್ನ ಜನರಿಗೆ ತಿಳಿಸುವಂತ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಉಪಚುನಾವಣೆ ಬಗ್ಗೆ ಮಾತನಾಡಿದ ಶ್ರೀರಾಮುಲು 2018ರಲ್ಲಿ 10 ರಿಂದ 11 ಬೈಎಲೆಕ್ಷನ್ ನಡೆದಿವೆ. 10 ರಲ್ಲಿ ಬಿಜೆಪಿ ಗೆದ್ದಿದೆ. ಈ ಬಾರಿ ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಜನರ ಬಲ ಮತ್ತು ಭಾರತೀಯ ಜನತಾ ಪಾರ್ಟಿ ಗೆಲ್ಲೋಕೆ ಕಾರಣ. ಚರಂತಿಮಠ ಅವರು ಗೆಲ್ಲುತ್ತಾರೆ ಮತ್ತು ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಗೆಲ್ಲುತ್ತಾರೆ. ದಾವಣಗೆರೆಯಲ್ಲಿ ಸಾಕಷ್ಟು ಅಲ್ಪಸಂಖ್ಯಾತರು ಸಹೋದರರು ಕೂಡ ಸ್ವಯಂಪ್ರೇರಿತವಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಯಾಕಂದ್ರೆ ಅವರಿಗೆ ಗೊತ್ತಿದೆ ಕಾಂಗ್ರೆಸ್ ಪಾರ್ಟಿ ಯಾವ ರೀತಿ ಅನ್ಯಾಯ ಮಾಡುತ್ತಿದೆ ಅಂತ ಅವರಿಗೆ ಮನವರಿಕೆ ಆಗ್ತಿದೆ.
ಮುಂದುವರಿದು ಮಾತನಾಡಿದ ಶ್ರೀರಾಮುಲು, ಬಿಜೆಪಿ ಯಾವಾಗಲು ಡಬಲ್ ಇಂಜಿನ್ ಸರ್ಕಾರ ಅಂತ ಹೇಳ್ತಿರ್ತೀವಿ. ಆದ್ರೆ ಈ ಸರ್ಕಾರ ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ‘ಡಬಲ್ ಸ್ಟೀರಿಂಗ್ ಸರ್ಕಾರ’ ಆಗಿದೆ. ಒಂದು ಸ್ಟೀರಿಂಗ್ ಸಿದ್ದರಾಮಯ್ಯನವರ ಕೈಯಲ್ಲಿದೆ, ಇನ್ನೊಂದು ಸ್ಟೀರಿಂಗ್ ಡಿ.ಕೆ ಶಿವಕುಮಾರ್ ಅವರ ಕೈಯಲ್ಲಿದೆ. ಈ ಡಬಲ್ ಸ್ಟೀರಿಂಗ್ ಸರ್ಕಾರದಲ್ಲಿ ಹೈಕಮಾಂಡ್‌ದು ಏನು ಇಲ್ಲ. ಹಾವಿಗೆ ಹಲ್ಲು ಕಿತ್ತಿದ್ರೆ ಹೇಗೆ ಇರುತ್ತೋ ಹಾಗೆ ಹೈಕಮಾಂಡ್ ಹಲ್ಲು ಕಿತ್ತಿದ ಹಾವಿನಂತಾಗಿದೆ. AICC ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಇಡೀ ರಾಜ್ಯ ಮತ್ತು ದೇಶದ ದಲಿತರನ್ನ ಮರೆತಿದ್ದಾರೆ. ಯಾವುದು ತೀರ್ಮಾನ ತಗೊಂಡ್ರು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎನ್ನುವ ಮಾತು ಒಬ್ಬ AICC ಅಧ್ಯಕ್ಷರು ಮಲ್ಲಿಕಾರ್ಜುನ್ ಖರ್ಗೆಯವರೇ ಈ ರೀತಿಯಾಗಿ ಹೇಳಿಕೆ ಕೊಟ್ಟಂತ ಸಮಯದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿಯನ್ನ ತೋರಿಸುತ್ತೆ. ಮಲ್ಲಿಕಾರ್ಜುನ ಖರ್ಗೆಯವರು ಕೇವಲ ಉತ್ಸವ ಮೂರ್ತಿಯಂತೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಒಂದು ಕಡೆ ಡಿ.ಕೆ ಶಿವಕುಮಾರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಂಬಲಿಸುತ್ತಿದ್ದಾರೆ. ಇನ್ನೊಂದು ಕಡೆ ಸಿದ್ದರಾಮಯ್ಯರವರು ನಾನು ಸಿಎಂ ಸ್ಥಾನವನ್ನ ಬಿಟ್ಟು ಕೊಡುವುದಿಲ್ಲ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಖಜಾನೆಯನ್ನು ಖಾಲಿ ಮಾಡಿದ್ದಾರೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಖಜಾನೆಯನ್ನ ಭರ್ತಿ ಮಾಡ್ತಿದ್ದಾರೆ. ದಾವಣಗೆರೆ ಮತ್ತು ಬಾಗಲಕೋಟೆ ಬೈ ಎಲೆಕ್ಷನ್‌ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಶ್ರೀರಾಮುಲು ಗುಡುಗಿದ್ದಾರೆ.












![60g4q9mdx4dwxfgvpz9mdx3rjzqramulu[1]](https://samyuktakarnataka.in/wp-content/uploads/2026/03/60g4q9mdx4dwxfgvpz9mdx3rjzqramulu1-696x418.webp)






