ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದಿ ಗುರು ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಖಾಂಡ್ವಾ ಜಿಲ್ಲೆಯ ಯಾತ್ರಾ ನಗರ ಓಂಕಾರೇಶ್ವರದಲ್ಲಿ ಶಂಕರಾಚಾರ್ಯರ ಪ್ರತಿಮೆ ಅನಾವರಣಗೊಂಡಿದೆ. ಅಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಭೌಗೋಳಿಕ ಮಟ್ಟದಲ್ಲಿ ರಾಷ್ಟ್ರೀಯ ಏಕತೆಗೆ ನಾಂದಿ ಹಾಡಿದ ಸಾಧಕ ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಅನಾವರಣದೊಂದಿಗೆ ಮುಂದೆ ಅದ್ವೈತ ಲೋಕ ವಸ್ತುಸಂಗ್ರಹಾಲಯ ನಿರ್ಮಾಣವೂ ಯೋಜನೆಯಲ್ಲಿದೆ. ಜತೆಗೆ ಆಚಾರ್ಯರ ತತ್ವ ಸಿದ್ದಾಂತಗಳನ್ನು ಪ್ರಚಾರ ಮಾಡುವ ಯೋಜನೆಯೂ ಇದೆ. ಈ ಪ್ರತಿಮೆಯ ನಿರ್ಮಾಣಕ್ಕೆ ಸರಿಸುಮಾರು 2,141.85 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಿದೆ.


























