ಹಾಡಹಗಲಲ್ಲೇ ಬಸ್​ ಚಾಲಕನ ಬರ್ಬರ ಹತ್ಯೆ

0
17
ಕೊಲೆ

ಕಲಬುರಗಿ: ಕೆಕೆಆರ್​ಟಿಸಿ ಬಸ್ ಚಾಲಕನನ್ನು ಹಾಡಹಗಲಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಅಫಜಲಪುರ ತಾಲ್ಲೂಕಿನ ಮದರಿ ಗ್ರಾಮದ ನಿವಾಸಿ ನಾಗಯ್ಯಸ್ವಾಮಿ(45) ಕೊಲೆಯಾದ ಬಸ್ ಚಾಲಕ. ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಕೆಳಗಿಳಿಯುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಹಳೆ ವೈಷಮ್ಯ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬಾವನಿಂದ ರೌಡಿ ಶೀಟರ್‌ಗೆ ಚೂರಿ ಇರಿತ : ಸಾವು
Next articleಹೃದಯಾಘಾತದಿಂದ ಕರ್ತವ್ಯನಿರತ ವೀರಯೋಧ ಮರಣ