ಸ್ಥಾಯಿ ಸಮಿತಿ‌ ಅಧ್ಯಕ್ಷರ ಅಧಿಕಾರ ಸ್ವೀಕಾರ

0
12

ಬೆಳಗಾವಿ: ಈ‌ ಹಿಂದೆ ಗಡಿ ವಿವಾದದಿಂದ ಅಪಖ್ಯಾತಿಗೆ ಒಳಗಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಗಡರ, ಸಂಭ್ರಮದ ವಾತಾವರಣ‌ ನಿರ್ಮಾಣವಾಗಿತ್ತು.
ಸ್ಥಾಯಿ ಸಮಿತಿಗೆ ನೇಮಕಗೊಂಡ ಅಧ್ಯಕ್ಷರು ಇಂದು‌ ಅಧಿಕಾರವಹಿಸಿಕೊಂಡಿದ್ದು‌ ಈ ಸಂಭ್ರಮಕ್ಕೆ ಕಾರಣ. ಮಹಾನಗರ ಪಾಲಿಕೆಯಲ್ಲಿ ಹೊಸದಾಗಿ‌ ನಿರ್ಮಿಸಲಾದ ಕಟ್ಟಡದಲ್ಲಿ ನಾಲ್ಕು ಸ್ಥಾಯಿ‌ಸಮಿತಿ ಅಧ್ಯಕ್ಷರಿಗೆ ಕೊಠಡಿಗಳ ಪೂಜೆ ಸಹ ಮಾಡಲಾಯಿತು . ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ ರೇಷ್ಮಾ ಪಾಟೀಲ., ಆಯುಕ್ತ ಅಶೋಕ ದುಡಗುಂಟಿ ಮತ್ತು‌ ನಗರಸೇವಕರು, ಆಯಾ ವಿಭಾಗದ ಸಿಬ್ಬಂದಿಗಳು‌ ನೂತನ‌ ಅಧ್ಯಕ್ಷರಿಗೆ ಶುಭ ಹಾರೈಸಿದರು.
ನಗರ ಯೋಜನೆ ಮತ್ತು ಅಭಿವೃದ್ದಿ ಸ್ಥಾಯಿ ಸಮಿತಿಗೆ ವಾಣಿ ವಿಲಾಸ ಜೋಶಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರವಿ ಧೋತ್ರೆ, ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿಗೆ ವೀಣಾ ಶ್ರೀಶೈಲ ವಿಜಾಪುರೆ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿಗೆ ಸವಿತಾ ಮುರುಘೇಂದ್ರಗೌಡ ಪಾಟೀಲರು ಇಂದು‌ ಅಧಿಕಾರ ಸ್ವೀಕರಿಸಿದರು,

Previous articleಮಹಾ ಮೈತ್ರಿಕೂಟಕ್ಕೆ ‘INDIA’ ಎಂದು ನಾಮಕರಣ
Next articleಧಾರವಾಡ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ