ಬೆಳಗಾವಿ-ಸಿಕಂದರಾಬಾದ್ ನೂತನ ರೈಲಿಗೆ ಚಾಲನೆ

0
14

ಬೆಳಗಾವಿ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಇಂದು ಈಡೇರಿದೆ. ಬೆಳಗಾವಿ-ಸಿಕಂದರಾಬಾದ್ ನೂತನ ರೈಲಿಗೆ ಇಂದು ಸಂಸದೆ ಮಂಗಲಾ ಅಂಗಡಿ ಚಾಲನೆ ನೀಡಿದರು.
ರೈಲು ಪ್ರತಿದಿನ ಬೆಳಗಾವಿಯಿಂದ ಮಧ್ಯಾಹ್ನ 01.10ಕ್ಕೆ ಹೊರಟು ಮರುದಿನ ಬೆಳಿಗ್ಗೆ 05.50 ಕ್ಕೆ ಸಿಕಂದರಾಬಾದ್‌ಗೆ ಆಗಮಿಸುತ್ತದೆ, 16.15 ಗಂಟೆಗಳಲ್ಲಿ 812 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಧಾರವಾಡ, ಹೊಸಪೇಟೆ, ಬಳ್ಳಾರಿ, ಗುಂತಕಲ್, ರಾಯಚೂರು ಮತ್ತು ಮಂತ್ರಾಲಯದಲ್ಲಿ ನಿಲ್ಲುತ್ತದೆ. ರೈಲು 6 ಸ್ಲೀಪರ್ ಕ್ಲಾಸ್ ಕೋಚ್‌ಗಳು, 2 ಜನರಲ್ ಕೋಚ್‌ಗಳು ಮತ್ತು 1, 2ನೇ ಎಸಿ ಮತ್ತು 1, 3ಎಸಿ ಸ್ಲೀಪರ್ ಸೇರಿದಂತೆ ಒಟ್ಟು 12 ಐಸಿಎಫ್ ಕೋಚ್‌ಗಳನ್ನು ಹೊಂದಿದೆ.

Previous articleಪ್ರಜಾಧ್ವನಿಯಲ್ಲಿ ಕಾಂಗ್ರೆಸ್ ವಾಗ್ದಾಳಿ
Next articleನದಿಗೆ ಹಾರಿ ತಾಯಿ,‌ ಮಕ್ಕಳು ಆತ್ಮಹತ್ಯೆ