ಇಂದಿನಿಂದ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ “ಗಂಧದಗುಡಿ’

0
20
ಗಂಧದಗುಡಿ

ಧಾರವಾಡ: ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ರಾಜ್ಯಾದ್ಯಂತ ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ “ಗಂಧದಗುಡಿ” ಚಿತ್ರದ ಹೆಸರು ಪ್ರಕಟಿಸಿ ಪ್ರಚಾರ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ನಿರ್ಧರಿಸಿದೆ.
ಇದು ಅಪ್ಪು ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ. ೧೫ ವರ್ಷಗಳ ಕಾಲ ಒಂದು ನಯ್ಯಾಪೈಸೆ ಹಣ ಪಡೆಯದೇ ನಂದಿನಿ ಹಾಲಿನ ಪ್ರಚಾರ ರಾಯಭಾರಿಯಾಗಿ ನಂದಿನಿ ಉತ್ಪನ್ನಗಳನ್ನು ಪ್ರಚಾರ ಮಾಡಿದ ಪುನೀತ್‌ಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕೆಟ್‌ಗಳ ಮೇಲೆ ಗಂಧದಗುಡಿ ಚಿತ್ರದ ಹೆಸರು ಮುದ್ರಿಸಲಾಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ತಿಳಿಸಿದ್ದಾರೆ.
೧೫ ದಿನಗಳ ಕಾಲ ಹಾಲಿನ ಪ್ಯಾಕೆಟ್‌ಗಳ ಮೂಲಕ ಪುನೀತ್ ಅವರ ಕೊನೆಯ ಚಿತ್ರ ಗಂಧದಗುಡಿ ಹೆಸರು ಮುದ್ರಿಸಲಾಗುವುದು ಎಂದು ತಿಳಿಸಿದರು.

Previous articleಸಾಮಾನ್ಯ ಸಭೆಯಲ್ಲಿ ಮತ್ತೆ ಮಾರ್ದಣಿಸಿದ `ಗೌನ್’
Next articleಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ವೃದ್ಧ ಆತ್ಮಹತ್ಯೆ