ಅಧಿಕಾರಿಗಳ ಮೇಲೆ ಹಲ್ಲೆ: ಓರ್ವನ ಬಂಧನ

0
21
ಅಧಿಕಾರಿ ಹಲ್ಲೆ

ರಬಕವಿ-ಬನಹಟ್ಟಿ: ಈಚೆಗೆ ಸಮೀಪದ ಜಗದಾಳ ಗ್ರಾಮದಲ್ಲಿ ಅನಧಿಕೃತವಾಗಿ ಸಾಮಿಲ್‌ನಲ್ಲಿ ಕಟ್ಟಿಗೆ ಕೊರೆಯುವ ಯಂತ್ರದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳು ತಮ್ಮ ಕಾರ್ಯ ನಡೆಸುತ್ತಿರುವಾಗ ತನಿಖೆಗೆ ಅಡ್ಡಿಪಡಿಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಾಲ್ವರು ತಲೆ ಮರೆಸಿಕೊಂಡಿದ್ದರು.
ಆರೋಪಿಗಳಿಗೆ ಶೋಧ ನಡೆಸಿದ ಪೊಲೀಸ್ ತಂಡದಿಂದ ಪ್ರಮುಖ ಆರೋಪಿ ಸಾಮಿಲ್ ಮಾಲಿಕ ಮುತ್ತಪ್ಪ ಗಾಂಜಾಗೋಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಮೂವರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ. ಸೇವಾ ಸಮಯದಲ್ಲಿದ್ದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಜಾತಿ ನಿಂದನೆ ಪ್ರಕರಣಕ್ಕೆ ತಡೆಯಾಜ್ಞೆ:
ಜಗದಾಳದ ಸಾಮಿಲ್‌ಕ್ಕೆ ತೆರಳಿದ್ದ ೮-೧೦ ಜನರ ಅರಣ್ಯ ಇಲಾಖೆ ಸಿಬ್ಬಂದಿ ತಂಡದೊಂದಿಗೆ ಅಧಿಕಾರಿಗಳಾದ ಪವನ್‌ಕುಮಾರ ಕೆ. ಹಾಗೂ ಮಲ್ಲಿಕಾರ್ಜುನ ನಾವಿ ಎಂಬುವರ ಮೇಲೂ ಜಾತಿ ನಿಂದನೆ ಪ್ರಕರಣವನ್ನು ಸಾಮಿಲ್ ಮಾಲಿಕರು ಪ್ರಕರಣ ದಾಖಲಿಸಿದ್ದರು. ಈ ಕುರಿತಾಗಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ ಇಲಾಖೆ ಪ್ರಕರಣಕ್ಕೆ ಶುಕ್ರವಾರ ತಡೆಯಾಜ್ಞೆ ದೊರೆತಿದೆ. ಒಟ್ಟಾರೆ ಅರಣ್ಯ ಸಂಪತ್ತಿಗೆ ಅಕ್ರಮವಾಗಿ ನಡೆಸುತ್ತಿದ್ದ ಕಾರ್ಖಾನೆ ಹಾಗೂ ಸಾಮಿಲ್‌ಗಳಿಗೆ ತಕ್ಕ ಪಾಠ ಕಲಿಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.

Previous articleಅವಳಿ ನಗರಕ್ಕೆ ವಿಧಿವಿಜ್ಞಾನ ಶಾಖೆ
Next articleಪತ್ನಿ ಮೇಲೆ ಹಲ್ಲೆ ಮಾಡಿದ ಪತಿಗೆ ಜೈಲು ಶಿಕ್ಷೆ