ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ 6 ಮಂದಿಗೆ ಗಡಿಪಾರು ಶಿಕ್ಷೆ

0
13

ಬೆಳಗಾವಿ: ನಗರದಲ್ಲಿ ಮಟಕಾ, ಜೂಜಾಟ, ಅಕ್ರಮ ಸಾರಾಯಿ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವ್ಯಕ್ತಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಮಾರ್ಕೇಟ್‌ ಉಪವಿಭಾಗದ ಮಾರ್ಕೆಟ್ ಠಾಣೆಯಲ್ಲಿ-03, ಮಾಳಮಾರುತಿ ಠಾಣೆಯಲ್ಲಿ-02 ಹಾಗೂ ಶಹಾಪೂರ ಠಾಣೆಯಲ್ಲಿ ಒಬ್ಬ ಆರೋಪಿಯನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ.
ಮಹಮ್ಮದರಫಿ ಮೋದಿನ ಸಾಬ ತಹಶೀಲ್ದಾರ(78), ಇಜಾರಅಹ್ಮದ ಮಹದಇಸಾಕ್ ನೇಸರಿಕರ(48, ಜಾನಿ ಜಯಪಾಲ ಲೊಂಡೆ(36), ಬೈರಗೌಡ ಜ್ಯೋತಿಬಾ ಪಾಟೀಲ(45), ನಿತೀನ ಪಾಂಡುರಂಗ ಪೇಡೇಕರ್(50) ಎಂಬುವರೇ ಗಡಿಪಾರು ಶಿಕ್ಷೆಗೆ ಒಳಗಾದವರು.

Previous articleಸಾಕು ಮಾಡಿ, ಗಡಿ ಭಾಷೆ ಗದ್ದಲ
Next articleಕರ್ನಾಟಕಕ್ಕೆ ಸೇರಿಸಿಕೊಳ್ಳಲು ಠರಾವು ಪಾಸ್: ಮಹಾರಾಷ್ಟ್ರ ಸರ್ಕಾರಕ್ಕೆ ಮುಜುಗರ