ಇಳಕಲ್ : ಚಿತ್ತರಗಿ ವಿಜಯ ಮಹಾಂತೇಶ ಪೀಠದ ೧೯ ನೇಯ ಪೀಠಾಧಿಪತಿ ಡಾ ಮಹಾಂತಶ್ರೀಗಳ ಎರಡು ಮೇಣದ ಪ್ರತಿಮೆಗಳು ಶ್ರೀಮಠದ ಮ್ಯೂಜಿಯಂಗೆ ಶನಿವಾರದಂದು ಬಂದವು.
ಒಂದು ನಿಂತ ಪ್ರತಿಮೆಯನ್ನು ಮ್ಯೂಜಿಯಂ ಬಾಗಿಲಲ್ಲಿ ಇನ್ನೊಂದು ಮೇಣದ ಪ್ರತಿಮೆ ಇಷ್ಟಲಿಂಗ ಪೂಜೆಯನ್ನು ಮಾಡುತ್ತಿರುವುದನ್ನು ಒಳಗೆ ಕೂಡಿಸಲಾಗಿದೆ. ಮಠದ ೨೦ ನೇ ಪೀಠಾಧಿಪತಿ ಗುರುಮಹಾಂತಶ್ರೀಗಳು ಮತ್ತು ಮಠದ ಭಕ್ತರು ಎರಡೂ ಪ್ರತಿಮೆಗಳನ್ನು ಸ್ವಾಗತಿಸಿಕೊಂಡರು.


























