Home Advertisement
Home ಕೃಷಿ/ವಾಣಿಜ್ಯ ಬ್ಯಾಂಗಲ್ ಬಂಗಾರಿಯರಿಗೆ ಗುಡ್ ನ್ಯೂಸ್; ಅಪರಂಜಿ ಚಿನ್ನದ ಬೆಲೆಯಲ್ಲಿ 18,000 ರೂ. ಇಳಿಕೆ!

ಬ್ಯಾಂಗಲ್ ಬಂಗಾರಿಯರಿಗೆ ಗುಡ್ ನ್ಯೂಸ್; ಅಪರಂಜಿ ಚಿನ್ನದ ಬೆಲೆಯಲ್ಲಿ 18,000 ರೂ. ಇಳಿಕೆ!

0
17

ಚಿನ್ನ ಪ್ರಿಯರಿಗೆ ಸೋಮವಾರ (ಇಂದು) ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದ್ದರೂ, ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಈ ಇಳಿಕೆ ಚಿನ್ನ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಇಂದು ಬೆಲೆಗಳು ಗಣನೀಯವಾಗಿ ಕುಸಿದಿವೆ. ವಿಶೇಷವಾಗಿ 100 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 18,000 ರೂ. ಇಳಿಕೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಇಳಿಕೆಯಾಗಿದೆ. ಇಂದು 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ₹11,185 ಆಗಿದ್ದು, 10 ಗ್ರಾಂ ಬೆಲೆ ₹1,11,850 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹135 ಹಾಗೂ 10 ಗ್ರಾಂಗೆ ₹1,350 ಇಳಿಕೆಯಾಗಿದೆ.

ಇದೇ ರೀತಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕುಸಿತ ಕಂಡಿದೆ. 1 ಗ್ರಾಂ ಚಿನ್ನದ ಬೆಲೆ ₹13,670 ಆಗಿದ್ದು, 10 ಗ್ರಾಂಗೆ ₹1,36,700 ಆಗಿದೆ. ಏಪ್ರಿಲ್ ಮೊದಲ ವಾರದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹165 ಹಾಗೂ 10 ಗ್ರಾಂಗೆ ₹1,650 ಇಳಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹14,913 ಹಾಗೂ 10 ಗ್ರಾಂ ಬೆಲೆ ₹1,49,130 ಆಗಿದೆ. ವಾರಾಂತ್ಯದೊಂದಿಗೆ ಹೋಲಿಸಿದರೆ 1 ಗ್ರಾಂಗೆ ₹180 ಹಾಗೂ 10 ಗ್ರಾಂಗೆ ₹1,800 ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ₹14,91,300 ಆಗಿದ್ದು, ಇದರಲ್ಲಿ ಬರೋಬ್ಬರಿ ₹18,000 ಇಳಿಕೆಯಾಗಿದೆ.

ಇನ್ನು ಚಿನ್ನದಂತೆ ಬೆಳ್ಳಿಯ ಬೆಲೆಯಲ್ಲೂ ಇಳಿಕೆ ಕಂಡಿದೆ. ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ ₹250 ಆಗಿದ್ದು, 1 ಕೆ.ಜಿ ಬೆಳ್ಳಿ ಬೆಲೆ ₹2,50,000 ಆಗಿದೆ. ಈ ಬೆಲೆ ಇಳಿಕೆ ಬಂಗಾರ ಹಾಗೂ ಬೆಳ್ಳಿ ಪ್ರಿಯರಲ್ಲಿ ಸಮಾಧಾನ ತಂದಿದೆ.