KLE ಸೊಸೈಟಿ ಪದಾಧಿಕಾರಿಗಳ ಆಯ್ಕೆ ಅವಿರೋಧ

0
6

ಫೆ. 7, 8ರಂದು ನಿಗದಿಯಾಗಿದ್ದ ಮತದಾನ ರದ್ದು

ಬೆಳಗಾವಿ: ಕರ್ನಾಟಕ ಲಿಂಗಾಯತ ಎಜ್ಯುಕೇಶನ್ ಸೊಸೈಟಿಯ (ಕೆಎಲ್‌ಇ) ಮುಂದಿನ ಅವಧಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೊಸೈಟಿಯ ಚುನಾವಣಾಧಿಕಾರಿಗಳು ಬುಧವಾರ ಅಧಿಕೃತ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಪ್ರಕಟಣೆಯ ಪ್ರಕಾರ, ಕೌಜಲಗಿ ಮಹಾಂತೇಶ ಶಿವಾನಂದ ಅವರು ಅಧ್ಯಕ್ಷರಾಗಿ, ತಟವಟಿ ಬಸವರಾಜ ಶಿವಲಿಂಗಪ್ಪ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾಗಿ ಕೋರೆ ಅಮಿತ ಪ್ರಭಾಕರ, ಬಾಗೇವಾಡಿ ಪ್ರವೀಣ ಅಶೋಕ, ದೊಡವಾಡ ಪ್ರೀತಿ ಕರಣ, ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ, ಕೊಳ್ಳಿ ಮಲ್ಲಿಕಾರ್ಜುನ ಚನಬಸಪ್ಪ, ಮೆಟಗುಡ್ ವಿಜಯ ಶ್ರೀಶೈಲಪ್ಪ, ಮುನವಳ್ಳಿ ಜಯಾನಂದ (ರಾಜು) ಮಹಾದೇವಪ್ಪ, ಮುನವಳ್ಳಿ ಮಂಜುನಾಥ ಶಂಕರಪ್ಪ, ಪಾಟೀಲ ಬಸವರಾಜ ರುದ್ರಗೌಡ, ಪಾಟೀಲ ವಿಶ್ವನಾಥ ಈರನಗೌಡ, ಪಾಟೀಲ ಯಲ್ಲನಗೌಡ ಶಿವಮೊಗ್ಗೆಪ್ಪ ಹಾಗೂ ಪಟ್ಟೇದ ಅನೀಲ ವಿಜಯಬಸಪ್ಪ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿ: ಮೆಟ್ರೋ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ

ಶನಿವಾರ ಫೆಬ್ರುವರಿ 7ರಂದು ಹುಬ್ಬಳ್ಳಿಯ ಬಿ.ವಿ. ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮತ್ತು ರವಿವಾರ ಫೆಬ್ರುವರಿ 8ರಂದು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಬೇಕಾಗಿದ್ದ ಸೊಸೈಟಿಯ ಪದಾಧಿಕಾರಿಗಳ ಆಯ್ಕೆಗಾಗಿ ನಿಗದಿಪಡಿಸಿದ್ದ ಮತದಾನವನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಕೆಎಲ್‌ಇ ಸೊಸೈಟಿಯ ಆಡಳಿತಕ್ಕೆ ನಿರಂತರತೆ ಮತ್ತು ಸ್ಥಿರತೆ ನೀಡುವ ದೃಷ್ಟಿಯಿಂದ ಈ ಅವಿರೋಧ ಆಯ್ಕೆ ಮಹತ್ವದ್ದೆಂದು ಸೊಸೈಟಿ ವಲಯಗಳು ಅಭಿಪ್ರಾಯಪಟ್ಟಿವೆ.

Previous articleಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಮಾರ್ಗ: ರಾತ್ರಿ ಮಲಗುವ ಮುನ್ನ ಈ ‘ಮ್ಯಾಜಿಕ್ ಜ್ಯೂಸ್’ ಕುಡಿಯಿರಿ!