ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಮಾರ್ಗ: ರಾತ್ರಿ ಮಲಗುವ ಮುನ್ನ ಈ ‘ಮ್ಯಾಜಿಕ್ ಜ್ಯೂಸ್’ ಕುಡಿಯಿರಿ!

0
2

ಇಂದಿನ ಶ್ರೀಮಂತ ಬದುಕಿನಲ್ಲಿ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆಯಿಂದಾಗಿ ‘ಬೊಜ್ಜು’ ಅಥವಾ ಅಧಿಕ ತೂಕದ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಕೆಲವರು ಇದರಿಂದ ಪಾರಾಗಲು ಹಲವಾರು ಸರ್ಕಸ್‌ ಮಾಡುತ್ತಾರೆ. ಅಷ್ಟೇ ಅಲ್ಲದೇ ಜಿಮ್ ಅಥವಾ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ.

ಹಾಗೇ ಜನರು ಬೊಜ್ಜು ಕರಗಿಸಲು ಇಂಗ್ಲೀಷ್‌ ಮಾತ್ರೆಗಳತ್ತ ಮುಖ ಮಾಡಿರುವುದೇ ಜಾಸ್ತಿ ಎನ್ನಬಹುದು. ಇತ್ತೀಚಿಗೆ ಜನರಿಗೆ ಜಿಮ್ ಅಥವಾ ಕಠಿಣ ವ್ಯಾಯಾಮಗಳನ್ನ ಮಾಡಲು ಸಮಯವಿಲ್ಲದವರು ಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸೌತೆಕಾಯಿ ಮತ್ತು ನಿಂಬೆರಸದ ಪಾನೀಯ.

ಆರೋಗ್ಯದ ಹಾದಿ ಬೆಳಿಗ್ಗೆಯಿಂದಲೇ ಆರಂಭ: ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ದೇಹಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ರಾತ್ರಿಯಿಡೀ ಸಂಗ್ರಹವಾದ ವಿಷಕಾರಿ ಅಂಶಗಳನ್ನು (Toxins) ಹೊರಹಾಕಲು ಮತ್ತು ಚಯಾಪಚಯ ಕ್ರಿಯೆಯನ್ನು (Metabolism) ಚುರುಕುಗೊಳಿಸಲು ಸಹಾಯ ಮಾಡುತ್ತದೆ.

ಆದರೆ, ಹೊಟ್ಟೆಯ ಸುತ್ತಲಿನ ಮೊಂಡುತನದ ಕೊಬ್ಬನ್ನು ಕರಗಿಸಲು ರಾತ್ರಿಯ ವೇಳೆಯ ಪಾನೀಯವೂ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ.

ಸೌತೆಕಾಯಿ ಮತ್ತು ನಿಂಬೆರಸದ ಅದ್ಭುತ ಶಕ್ತಿ: ಸೌತೆಕಾಯಿಯಲ್ಲಿ ಶೇಕಡಾ 95ರಷ್ಟು ನೀರಿನಾಂಶವಿದ್ದು, ಇದು ಅತ್ಯಂತ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ನಾರಿನಂಶವನ್ನು (Fiber) ಹೊಂದಿದೆ. ಇದು ಹೊಟ್ಟೆಯನ್ನು ತಂಪಾಗಿರಿಸುವುದಲ್ಲದೆ, ದೇಹದ ಅನಗತ್ಯ ಕೊಬ್ಬನ್ನು ನಾಶಮಾಡಲು ಪ್ರೇರೇಪಿಸುತ್ತದೆ.

ಹಾಗೇ ನಿಂಬೆರಸವು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ನಿಂಬೆಹಣ್ಣಿನ ರಸವು ಲಿವರ್‌ನ್ನು ಶುದ್ಧೀಕರಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತದೆ.

ಜ್ಯೂಸ್ ತಯಾರಿಸುವುದು ಹೇಗೆ?: ಬೊಜ್ಜು ಕರಗಿಸಲು ಈ ಜ್ಯೂಸ್ ಅನ್ನು ತಯಾರಿಸುವುದು ಅತ್ಯಂತ ಸರಳ.
ಮೊದಲು ಒಂದು ತಾಜಾ ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ರಸವನ್ನು ಸೋಸಿಕೊಳ್ಳಿ. ಈ ರಸಕ್ಕೆ ಅರ್ಧ ಭಾಗ ನಿಂಬೆಹಣ್ಣಿನ ರಸವನ್ನು ಹಿಂಡಿ. ಜ್ಯೂಸ್ ಇನ್ನಷ್ಟು ರುಚಿಯಾಗಿ ಮತ್ತು ಪರಿಣಾಮಕಾರಿಯಾಗಿರಲು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ.

ರಾತ್ರಿ ಸೇವನೆಯ ಮಹತ್ವವೇನು?: ಸಾಮಾನ್ಯವಾಗಿ ನಾವು ರಾತ್ರಿ ಮಲಗಿದಾಗ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಆದರೆ ಮಲಗುವ ಮುನ್ನ ಇಂತಹ ಪಾನೀಯವನ್ನು ಕುಡಿಯುವುದರಿಂದ ನಾವು ಮಲಗಿದ್ದರೂ ದೇಹವು ಕೊಬ್ಬನ್ನು ನಾಶಮಾಡವ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ.

ಜೇನುತುಪ್ಪವು ದೇಹಕ್ಕೆ ಅಗತ್ಯವಿರುವ ನೈಸರ್ಗಿಕ ಸಕ್ಕರೆಯನ್ನು ನೀಡುವುದಲ್ಲದೆ, ರಾತ್ರಿಯ ವೇಳೆ ಅತಿಯಾದ ಹಸಿವಾಗುವುದನ್ನು ನಿಯಂತ್ರಿಸುತ್ತದೆ.

ಇತರ ಪ್ರಯೋಜನಗಳು: ಸೌತೆಕಾಯಿ ಮತ್ತು ನಿಂಬೆ, ಈ ಜ್ಯೂಸ್ ಕೇವಲ ತೂಕ ಇಳಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ದಿನವಿಡೀ ಉಲ್ಲಾಸದಿಂದಿರಲು ಇದು ಸಹಾಯ ಮಾಡುತ್ತದೆ.

Previous articleಜೋಯಿಡಾದಲ್ಲಿ ಅಡಿಕೆ ಕೊಯ್ಲಿನ ಭರಾಟೆ