ದ್ವೀಪ ರಾಷ್ಟ್ರ ಶ್ರೀಲಂಕಾವು ‘ದಿತ್ವಾ’ ಚಂಡಮಾರುತದಿಂದ ತತ್ತರಿಸಿ ಹೋಗಿದೆ. ದೇಶದಾದ್ಯಂತ ಭಾರೀ ಪ್ರವಾಹ ಮತ್ತು ಭೂಕುಸಿತಗಳು ವಿನಾಶವನ್ನು ಸೃಷ್ಟಿಸಿದೆ. ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಈ ಭೀಕರ ನೈಸರ್ಗಿಕ ವಿಕೋಪ ಉಂಟಾಗಿದೆ. ಇದುವರೆಗೆ 159 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಕೇಂದ್ರ (DMC) ಮಾಹಿತಿ ನೀಡಿದೆ.
ಪರಿಸ್ಥಿತಿ ತೀವ್ರ: ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ನಾಪತ್ತೆಯಾದವರ ಸಂಖ್ಯೆ 203ಕ್ಕೆ ಏರಿಕೆಯಾಗಿದೆ. ರಾಜಧಾನಿ ಕೊಲಂಬೊ ಸುತ್ತಮುತ್ತ ಪರಿಸ್ಥಿತಿ ತೀವ್ರವಾಗಿದ್ದು, ಕೆಲನಿ ನದಿಯ ನೀರಿನ ಮಟ್ಟಕಿಂತ ಅಪಾಯಕಾರಿ ಮಟ್ಟಮನ್ನ ಮೀರಿ ಹರಿಯುತ್ತಿದೆ.
ಇದರ ಪರಿಣಾಮವಾಗಿ ಕೊಲಂಬೊದ ಹಲವು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಚಂಡಮಾರುತವು ಶನಿವಾರ ಕರಾವಳಿಯಿಂದ ದೂರ ಸರಿದಿದ್ದರೂ, ಬಿಟ್ಟು ಹೋದ ವಿನಾಶದ ಗುರುತುಗಳು ದ್ವೀಪರಾಷ್ಟ್ರವನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಿದೆ.
ತುರ್ತು ಪರಿಸ್ಥಿತಿ ಘೋಷಣೆ: ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಶನಿವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ದೇಶವನ್ನು ಅಪ್ಪಳಿಸಿರುವ ಈ ವಿಕೋಪವನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯಗಳಿಂದ ತುರ್ತು ನೆರವು ಮತ್ತು ಸಹಕಾರ ಕೋರಿದ್ದಾರೆ.
ಭಾರತ ಸೇರಿದಂತೆ ಹಲವು ದೇಶಗಳು ಈಗಾಗಲೇ ಮಾನವೀಯ ನೆರವು ಮತ್ತು ರಕ್ಷಣಾ ತಂಡಗಳನ್ನು ಶ್ರೀಲಂಕಾಕ್ಕೆ ರವಾನಿಸಿವೆ. ಹಾಗೇ ಈ ವಿಕೋಪದಿಂದ ಜೀವ ರಕ್ಷಣೆಗಾಗಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ.
ವ್ಯಾಪಕ ಹಾನಿ ಮತ್ತು ರಕ್ಷಣಾ ಕಾರ್ಯ: ಡಿಎಂಸಿ ಮಾಹಿತಿ ಪ್ರಕಾರ, ದೇಶದಲ್ಲಿ ಮೂಲಸೌಕರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದು, ಸುಮಾರು 20,000ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ 7.8 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯಕ್ಕೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಸೇನಾಪಡೆಗಳ ಸಹಕಾರದೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಿಪತ್ತು: ಇದು 2017ರ ನಂತರ ಶ್ರೀಲಂಕಾ ಕಂಡ ಅತ್ಯಂತ ದೊಡ್ಡ ನೈಸರ್ಗಿಕ ದುರಂತವಾಗಿದೆ. 2017ರಲ್ಲಿ 200ಕ್ಕೂ ಹೆಚ್ಚು ಮಂದಿ ಮತ್ತು 2003ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 254 ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರಸ್ತುತ ಪರಿಸ್ಥಿತಿಯು ಹಿಂದಿನ ದುರಂತಗಳ ಭೀಕರತೆಯನ್ನು ನೆನಪಿಸಿದೆ. ಹೀಗಾಗಿ ಪ್ರದೇಶದಲ್ಲಿ ಇದರಿಂದ ಇನ್ನೂ ಸಾವಿನ ಸಂಖ್ಯೆ ಏರುವ ಆತಂಕವಿದೆ ಎನ್ನಲಾಗುತ್ತಿದೆ.
ಕೇಂದ್ರದಿಂದ ಮುಂದಿನ ಕ್ರಮ: ಸದ್ಯಕ್ಕೆ ಶ್ರೀಲಂಕಾ ಸರ್ಕಾರವು ರಕ್ಷಣಾ ಕಾರ್ಯಗಳನ್ನು ತ್ವರಿತಗೊಳಿಸಿದೆ ಮತ್ತು ವಿಪತ್ತು ಪೀಡಿತ ಜನರಿಗೆ ತಾತ್ಕಾಲಿಕ ಆಶ್ರಯ ಮತ್ತು ಆಹಾರವನ್ನು ಒದಗಿಸುವತ್ತ ಗಮನಹರಿಸಿದೆ. ಪರಿಸ್ಥಿತಿ ತಿಳಿಯಾಗಲು ಹಾಗೂ ಸಂಪೂರ್ಣ ಹಾನಿಯ ಅಂದಾಜು ಪತ್ತೆಯಾಗಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.























Gave phwin8 a look-see. It is pretty good actually, and has options to play different games. Check it out but keep a responsible attitude.