ಮಾತೃಭಾಷೆಯಲ್ಲೇ ಮಾತು, ಅದುವೇ ಕನ್ನಡಕ್ಕೆ ಗೌರವ: ಇತಿಹಾಸ ಸ್ಮರಿಸಿದ ‘ನವೋದಯ’ ಉತ್ಸವ!

1
39

ಕುಳಗೇರೆ ಕ್ರಾಸ್: ಮೊದಲು ನಾವು ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಿ, ನಮ್ಮ ಕನ್ನಡ ಭಾಷೆಯನ್ನ ಬಳಸುವ ಮೂಲಕ ನಮ್ಮ ಭಾಷೆಯನ್ನ ಗೌರವಿಸೋಣ ಎಂದು ಮುಂಡರಗಿ ಸಹಾಯಕ ಪ್ರಾಧ್ಯಾಪಕಿ ಡಾ.ವನಜಾಕ್ಷಿ ಭರಮಗೌಡ್ರ ಹೇಳಿದರು.

ರಾಜ್ಯೋತ್ಸವ ಅಂಗವಾಗಿ ಗದಗ ಜಿಲ್ಲೆ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಹಮ್ಮಿಕೊಂಡಿದ್ದ ಕನ್ನಡ ರಾಜರು ಉಪನ್ಯಾಸ ಮಾಲಿಕೆ-೨ ರಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡ ನಾಡು-ನುಡಿಗೆ ವಿಜಯನಗರ ಸಾಮ್ರಾಜ್ಯದ ಅರಸರ ಕೊಡುಗೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಕಲೆ-ಶಿಲ್ಪಕಲೆ ಸಾಹಿತ್ಯ ಮತ್ತು ಸಾಂಸ್ಕೃತಿ ಕುರಿತು ವಿವರಿಸಿದರು. ಸಾನಿಧ್ಯ ವಹಿಸಿ ಮಾತನಾಡಿದ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಶ್ರೀಗಳು ಇತಿಹಾಸ ಎಂಬುದು ಬೆನ್ನ ಹಿಂದಿನ ಬೆಳಕು ಅದನ್ನು ಸದಾ ಸ್ಮರಿಸಬೇಕು.

ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಬೆಳೆಸಿಕೊಳ್ಳಿ. ಕನ್ನಡ ಭಾಷೆ ಕಲಿಯುವುದರ ಜೊತೆಗೆ ಆ ಭಾಷೆಯನ್ನ ಬಳಸಿ ಉಳಿಸುವ ಕಲೆಸ ನಾವೆಲ್ಲ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜೆ.ಎನ್.ವಿ ಪ್ರಾಚಾರ್ಯ ಜಿ ಎಸ್ ಬಸವರಾಜು ಮಾತನಾಡಿ ನಿರಂತರ ಕನ್ನಡ ಭಾಷೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಜೊತೆಗೆ, ಕನ್ನಡ ಭಾಷೆ ಕುರಿತು ಪ್ರತಿ ಗ್ರಾಮ-ಪಟ್ಟಣ ಶಾಲೆ-ಕಾಲೆಜುಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯವನ್ನು ಭೈರನಹಟ್ಟಿ ಶ್ರೀಗಳು ನಿರಂತರ ಮಾಡುತ್ತಿದ್ದಾರೆ.

ಆದ್ಯಾತ್ಮಿದ ಜೊತೆಗೆ ನಮ್ಮ ಕನ್ನಡ ಭಾಷೆಯನ್ನ ಉಳಿಸಿ ಬೆಳೆಸುವ ಕಾಯಕ ಮಾಡುತ್ತಿರುವ ಶ್ರೀಗಳ ಕಾರ್ಯ ಮೆಚ್ಚುವಂತದ್ದು ಎಂದು ಶ್ಲಾಘೀಸಿದರು.
ಡಾ.ಸಂತೋಷ ಹಿರೇಮಠ ಮಾತನಾಡಿ ನಾವು ಕನ್ನಡ ಭಾಷೆ ಬಳಸುವ ಮೂಲಕ ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕುರಿತು ಅರಿವು ಮೂಡಿಸಬೇಕು.

ಶಿಕ್ಷಣ ಕ್ಷೇತ್ರಕ್ಕೆ ಮಠ-ಮಾನ್ಯಗಳ ಕೊಡುಗೆ ಅಪಾರ ಎಂದು ಹೇಳಿದರು. ಕಸಾಪ ಅಧ್ಯಕ್ಷ ಎಂ ಜಿ ಗಚ್ಚನ್ನವರ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೆತ್ತ ತಾಯಿಯಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ಹೇಳಿದರು.

ನಾಗನಗೌಡ ತಿಮ್ಮನಗೌಡ್ರ, ವರದಿಗಾರ ಆರ್ ಎಸ್ ಹಿರೇಮಠ, ಕಸಾಪ ಸದಸ್ಯರಾದ ಸಾಹುಕಾರ ಕೃಷ್ಣ, ಸುರೇಶ ಬಾವಿಹಳ್ಳಿ, ಸಿ ಎನ್ ಹಿರೇಮಠ, ಎಂ ಜಿ ಕುಲಕರ್ಣಿ ಇದ್ದರು.

ಸಂಗೀತ ಶಿಕ್ಷಕಿ ಗಾಯತ್ರಿ ತೀಟೆಯವರು ಸಂಗೀತ ಸೇವೆ ನೀಡಿದರು, ಕೀರಣಕುಮಾರ, ಪದ್ಮಾವತಿ, ಮನೋಹರ ಕುಲಕರ್ಣಿ, ಪ್ರಭುದೇವರು ಕಾರ್ಯಕ್ರಮ ನಿರೂಪಿಸಿದರು.

Previous articleದೆಹಲಿಯಲ್ಲಿ ‘ನಕ್ಸಲ್’ ಆರ್ಭಟ: ಮಾಲಿನ್ಯದ ಪ್ರತಿಭಟನೆಯಲ್ಲಿ ಪೊಲೀಸರಿಗೇ ಬಿತ್ತು ಪೆಪ್ಪರ್ ಸ್ಪ್ರೇ!
Next articleಕಾಂಗ್ರೆಸ್ ಸರ್ಕಾರ ಶಾಸಕರ ಖರೀದಿ ಕೇಂದ್ರ ತೆರೆದಿದೆ: ಸಿ.ಟಿ. ರವಿ ಲೇವಡಿ

1 COMMENT

LEAVE A REPLY

Please enter your comment!
Please enter your name here