ಹೆಚ್ಚಿನ ಅಂಕ ಗಳಿಸಲು ಶಿಕ್ಷಕರಿಂದ ಒತ್ತಡ: ಮೆಟ್ರೋ ನಿಲ್ದಾಣದಲ್ಲಿ ಶಾಲಾ ಬಾಲಕ ಆತ್ಮಹತ್ಯ

0
33

ಶಿಕ್ಷಕರು ಉತ್ತಮ ಅಂಕಗಳನ್ನು ಗಳಿಸುವಂತೆ ಒತ್ತಡ ಹೇರುತ್ತಿದ್ದರು ಮತ್ತು ಬಾಲಕ ” ಪ್ರಯತ್ನಿಸುತ್ತಿದ್ದೇನೆ” ಎಂದು ಪದೇ ಪದೇ ಹೇಳುತ್ತಿದಾ. ಎಂದು ಹುಡುಗನ ತಂದೆ ಹೇಳಿದರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಶ್ಚಿಮ ದೆಹಲಿಯ ಮೆಟ್ರೋ ನಿಲ್ದಾಣದ ಕಟ್ಟಡದಿಂದ ಬಾಲಕನೊಬ್ಬ ಆತ್ಮಹತ್ಯಗೆ ಪ್ರಯತ್ನಿಸಿರುವ ಬಗ್ಗೆ ಪೊಲೀಸ್ ನಿಯಂತ್ರಣಕ್ಕೆ ಕರೆ ಬಂದಿತು.

ಅಂಕ ಗಳಿಸುವಂತೆ ಒತ್ತಾಯಿಸಿದ್ದಕೆ ಬೇಸತ್ತು ಬಾಲಕ ಶೌರ್ಯ ಪಾಟೀಲ(16), ಕೇಂದ್ರ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಚಾರದ ಕುರಿತು ಬಾಲಕನ ತಂದೆ ಹೇಳಿಕೆಯ ಪ್ರಕಾರ ಇಂತಹ ಕಠಿಣ ಕ್ರಮ ಕೈಗೊಳ್ಳಲು ತನ್ನ ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರೇ ಕಾರಣ ಎಂದು ಆರೋಪಿಸಿದ್ದಾರೆ.

ತನ್ನ ಮಗ “ಸಣ್ಣ ವಿಷಯಗಳಿಗೆ ತೊಂದರೆ ಅನುಭವಿಸುತ್ತಿದ್ದಾನೆ” ಎಂದು ತಂದೆ ಆರೋಪಿಸಿದ್ದಾರೆ. ಬಾಲಕನಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ ಅವನ ಶಿಕ್ಷಕರು ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

“ಕಳೆದ ಒಂದು ವರ್ಷದಿಂದ, ನನ್ನ ಮಗನನ್ನು ಅವನ ಶಿಕ್ಷಕರು ಸಣ್ಣಪುಟ್ಟ ವಿಷಯಗಳಿಗೂ ಬೈಯುತ್ತಿದ್ದರು ಮತ್ತು ತೊಂದರೆ ನೀಡುತ್ತಿದ್ದರು. ಅವನು ಅದರ ಬಗ್ಗೆ ನಮಗೆ ಹೇಳಿದನು, ಮತ್ತು ನಾವು ಅವನ ಶಿಕ್ಷಕರೊಂದಿಗೆ ನಮ್ಮ ಕಳವಳಗಳನ್ನು ಹಂಚಿಕೊಂಡೆವು ಆದರೆ ಏನೂ ಆಗಲಿಲ್ಲ. ಆ ಶಿಕ್ಷಕರಿಂದ ಅವನ ಸ್ನೇಹಿತರು ಸಹ ತೊಂದರೆ ಅನುಭವಿಸಿದರು,” ಎಂದು ಹುಡುಗನ ತಂದೆ ಮೊದಲೇ ತಿಳಿಸಿದ್ದರು.

ಶಾಲಾ ಆಡಳಿತ ಮಂಡಳಿಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದೆವು ಎಂದು ತಂದೆ ಹೇಳಿದರು, ಆದರೆ ಹುಡುಗ ತರಗತಿಗಳ ಸಮಯದಲ್ಲಿ ಗಮನಹರಿಸುವ ಅಗತ್ಯವಿದೆ ಎಂದು ಹೇಳಿ ಅವರ ಪೋಷಕರ ಮಾತನ್ನ ತಳ್ಳಿಹಾಕಿದರು.

ಅವನು “ಗಣಿತದಲ್ಲಿ ಕಳಪೆ ಅಂಕ ಬಂದಿವೆ ಮತ್ತು ಅವನು ತನ್ನ ಅಧ್ಯಯನದತ್ತ ಗಮನಹರಿಸಲು ಇಷ್ಟಪಡುವುದಿಲ್ಲ ಎಂದು ಅವರು ಹೇಳುತ್ತಿದ್ದರು” ಎಂದು ಅವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ತಮ್ಮ ಊರಿಗೆ ಅಂತ್ಯಕ್ರಿಯೆಗಾಗಿ ತೆರಳುವ ಮೊದಲು ಹೇಳಿದರು.

ಮಂಗಳವಾರ ಸಂಜೆ, ಬಾಲಕನು ಪಶ್ಚಿಮ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯಯ ಹಿಂದಿನ ಉದ್ದೇಶ ಯಾವುದೇ ವಿದ್ಯಾರ್ಥಿಯನ್ನು ತನ್ನನ್ನ ಹೇಗೆ ನಡೆಸಿಕೊಳ್ಳುತ್ತಿದರೂ ಹಾಗೆ ನಡೆಸಿಕೊಳ್ಳಬಾರದು ಎಂಬುದಾ ಕೊನೆಯ ಆಸೆ ಎಂದು ಬರೆದುಕೊಂಡಿದಾ. ಹಾಗೇ ಟಿಪ್ಪಣಿಯಲ್ಲಿ ಹೆಸರಿಸಿರುವ ನಾಲ್ವರು ಶಿಕ್ಷಕರಿಗೆ “ಶಿಕ್ಷೆಯಾಗಬೇಕು” ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದು ತಿಳಿಸಿದ್ದಾನೆ.

ಮಾಹಿತಿಯ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ದಿನದಂದು, ಬಾಲಕ ವೇದಿಕೆಯಲ್ಲಿ ನೃತ್ಯ ಅಭ್ಯಾಸ ಮಾಡುತಿದ್ದಾಗ ಪ್ರಜ್ಞೆ ತಪ್ಪಿದ್ದ ಎಂದು ಹೇಳಲಾಗುತ್ತಿದೆ. ನಂತರ ಶಿಕ್ಷಕರು ಅವನನ್ನು ‘ಸಾರ್ವಜನಿಕವಾಗಿ ಅವಮಾನಿಸಿ, ನಿಂದಿಸಿದ್ದಾರೆ’ ಮತ್ತು ಅದು ನಕಲಿ ಎಂದು ತಳ್ಳಿಹಾಕಿದ್ದರು.

ಬಾಲಕ ತಾನು ಮೂರ್ಛೆ ಹೋಗಿ ಅಳಲು ಪ್ರಾರಂಭಿಸಿದಾಗ, ಶಿಕ್ಷಕರು ಅದನ್ನು ನಕಲಿ ಎಂದು ಕರೆದರು. ಮಾಹಿತಿಯಂತೆರ ಇದೆ ವಿಚಾರವಾಗಿ ಬಾಲಕ ಮನನೊಂದು ಆತ್ಮಹತ್ಯ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಆಪತ್ರವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಾ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 107 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು ಬಿಎನ್‌ಎಸ್‌ನ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಕ್ಕೆ ಸಂಬಂಧಿಸಿದ ಘಟನೆ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲು ನಾವು ಶಾಲೆಗೆ ನೋಟಿಸ್ ನೀಡುತ್ತೇವೆ. ಹೆಸರಿಸಲಾದ ಶಿಕ್ಷಕರು ತನಿಖೆಗೆ ಒಳಪಡಿಸುತ್ತೆವೆ. ಹಾಗೇ ಹುಡುಗನ ಸ್ನೇಹಿತರೊಂದಿಗೆ ಮಾತನಾಡಿ ವಿಚಾರಿಸುತ್ತೆವೆ” ಎಂದು ಅಧಿಕಾರಿ ಹೇಳಿದರು.

Previous articleಮಾರುವೇಷದಲ್ಲಿ ಬಂದು ಗಂಡನ ಮೇಲೆ ಹಲ್ಲೆ ಮಾಡಿದ ಪತ್ನಿ
Next articleಬೀದಿ ನಾಯಿ ಹಾವಳಿ ತಪ್ಪಿಸಲು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

LEAVE A REPLY

Please enter your comment!
Please enter your name here