ಬೈಕ್ ತಡೆದು ನಾಲ್ಕು ಲಕ್ಷ ಹಣ ದೋಚಿದ ಕಳ್ಳರು

0
22
ಸಾಂದರ್ಭಿಕ ಚಿತ್ರ

ಮುದಗಲ್: ಬೈಕ್‌ಸವಾರನ್ನು ತಡೆದು ನಾಲ್ಕು ಲಕ್ಷ ರೂಗಳ ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ಇಲ್ಲಿಗೆ ಸಮೀಪದ ಮಟ್ಟೂರು ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಹಣ ಕಳೆದುಕೊಂಡವರು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಮುದಗಲ್ ಪಟ್ಟಣದ ಕೆನರಾ ಬ್ಯಾಂಕ್‌ನಿಂದ ಸಂಜೆ ನಾಲ್ಕು ಲಕ್ಷ ಹಣವನ್ನು ಡ್ರಾ(ಪಡೆದು)ಕೊಂಡು ಬೈಕ್ ಮೇಲೆ ಮುದಗಲ್‌ನಿಂದ ಮಟ್ಟೂರಿಗೆ ಮಲ್ಲಿಕಾರ್ಜುನ ಹಾಗೂ ಪಂಪಣ್ಣ ಎಂಬುವವರು ತೆರಳುತ್ತಿದ್ದರು.

ಮಟ್ಟೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ತಡೆದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆಯ ಸಿಪಿಐ ಹಾಗೂ ಪಿಎಸ್‌ಐ ವೆಂಕಟೇಶ ಮಾಡಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಪೊಲೀಸ್ ಆಕಾಂಕ್ಷಿಗಳಿಗೆ ಬಂಪರ್: 8500 ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Next articleಗುರುಗ್ರಾಮದಲ್ಲಿ ಗೂಗಲ್‌ನ ಬೃಹತ್ ಕಚೇರಿ

LEAVE A REPLY

Please enter your comment!
Please enter your name here