ಬೆಂಗಳೂರು ನಿವಾಸಿಗಳಿಗೆ ಪ್ರಮುಖ ಸೂಚನೆ ಅಕ್ಟೋಬರ್ 31ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಕೆಪಿಟಿಸಿಎಲ್ ಕೈಗೊಂಡಿರುವ ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಈ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಬೆಸ್ಕಾಂ ಸಾರ್ವಜನಿಕರ ಸಹಕಾರ ಕೋರಿದೆ.
ಎಲ್ಲೆಲ್ಲಿ ಮತ್ತು ಯಾವಾಗ?: ಉಪವಿಭಾಗ 1ರಲ್ಲಿ ಫೀಡರ್ ನಿರ್ವಹಣಾ ಕಾರ್ಯ ನಡೆಯುವುದರಿಂದ, ಅಕ್ಟೋಬರ್ 15, 17, 19, 21, 23, 25, 27, 29 ಮತ್ತು 31ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹನುಮಂತಪುರ, ಅನ್ನೆತೋಟ, ಜಗನ್ನಾಥಪುರ, ನಿರ್ವಾಣಿ ಲೇಔಟ್, ಅಗ್ನಿಬನ್ನಿರಾಯ ನಗರ, ಬಿಎ ಗುಡಿಪಾಳ್ಯ, ಮತ್ತು ಅಂಬೇಡ್ಕರ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ, ಅಕ್ಟೋಬರ್ 16, 18, 24, 26, 28 ಮತ್ತು 30ರಂದು ಗೋವಿಂದನಗರ, ಹೌಸಿಂಗ್ ಬೋರ್ಡ್, ಗುಬ್ಬಿಗೇಟ್, ಕುಂಟಮ್ಮಂತೋಟ, ದಿಬ್ಬೂರು, ಬಿಎಚ್ ಪಾಳ್ಯ, ಪಿಎನ್‌ಆರ್ ಪಾಳ್ಯ, ಕುಪ್ಪೂರು, ಹೊನ್ನೇನಹಳ್ಳಿ ರಸ್ತೆ, ಹಾರೋನಹಳ್ಳಿ ರಸ್ತೆ, ಪಿಎನ್‌ಆರ್ ಪಾಳ್ಯ, ಕುಪ್ಪೂರು ಮತ್ತು ಹೊಸಹಳ್ಳಿ ಭಾಗಗಳಲ್ಲಿ ವಿದ್ಯುತ್ ಇರುವುದಿಲ್ಲ.
ಹೆಚ್ಚುವರಿ ಕಡಿತ: ಅಕ್ಟೋಬರ್ 14ರಂದು ನಾಗರಘಟ್ಟ ಮತ್ತು ನರಸಿಕಟ್ಟೆ ಉಪಕೇಂದ್ರಗಳಲ್ಲಿ ಲಿಂಕ್ ಲೈನ್ ಕೆಲಸ ನಡೆಯುತ್ತಿರುವ ಕಾರಣ, ಅಕ್ಟೋಬರ್ 14ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ತಿಪಟೂರು ತಾಲೂಕಿನ ಕೆರೆಗೋಡಿ ಉಪಸ್ಥಾವರ, ನಾಗರಘಟ್ಟ ಮತ್ತು ನರಸಿಕಟ್ಟೆ ಪ್ರದೇಶಗಳು, ಹೆಡಗರಹಳ್ಳಿ, ಬೆಳಗರಹಳ್ಳಿ, ಕನ್ನುಘಟ್ಟ, ನಾಗರಘಟ್ಟ, ಎನ್.ಮೇಲನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ನಿವಾಸಿಗಳಿಗೆ ಸಲಹೆ:ಈ ವಿದ್ಯುತ್ ಕಡಿತದ ಅವಧಿಯಲ್ಲಿ, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಚಾರ್ಜಿಂಗ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ. ನೀರು ಸಂಗ್ರಹಣೆಯಂತಹ ವಿಷಯಗಳಿಗೂ ಮೊದಲೇ ಸಿದ್ಧತೆ ಮಾಡಿಕೊಳ್ಳುವುದು ಸೂಕ್ತ.
ಅನಾನುಕೂಲತೆಯನ್ನು ತಪ್ಪಿಸಲು ಮತ್ತು ತಮ್ಮ ದೈನಂದಿನ ಕೆಲಸಗಳನ್ನು ಸುಗಮವಾಗಿ ನಿರ್ವಹಿಸಲು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ವಿದ್ಯುತ್ ವ್ಯತ್ಯಯದ ಕುರಿತು ಹೆಚ್ಚಿನ ಮಾಹಿತಿಗಾಗಿ, ಬೆಸ್ಕಾಂ ಸಹಾಯವಾಣಿಯನ್ನು ಸಂಪರ್ಕಿಸಬಹುದು.