ಜಾತಿಗಣತಿ: ಶಿಕ್ಷಕರೊಬ್ಬರಿಗೆ ಹೃದಯಾಘಾತ; ಅಪಾಯದಿಂದ ಪಾರು

0
44

ದಾವಣಗೆರೆ: ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರೊಬ್ಬರು ಹೃದಯಾಘಾತಕ್ಕೀಡಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಹಳೆಕಡ್ಲೆಬಾಳು ಶಾಲೆಯ ಶಿಕ್ಷಕ ಪ್ರಕಾಶ್ ನಾಯಕ್ (44) ಸಮೀಕ್ಷೆಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸ್ಟಂಟ್ ಅಳವಡಿಸಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಪ್ರಕಾಶ್ ನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಬಗ್ಗೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಆಯೋಗಕ್ಕೆ ತಿಳಿಸಲಾಗಿದ್ದು, ಶಿಕ್ಷಕ ಪ್ರಕಾಶ ಅವರನ್ನು ಭೇಟಿಯಾಗಲಿದ್ದೇನೆ. ಸಮೀಕ್ಷೆ ವೇಳೆ ನಾಯಿ ಕಡಿತ ಸೇರಿದಂತೆ ಮೂವರಿಗೆ ತೊಂದರೆ ಉಂಟಾಗಿದ್ದು, ಅವರಿಗೆಲ್ಲಾ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

Previous articleದಾವಣಗೆರೆ: ಮಳೆಯಿಂದ ನಷ್ಟ, ಸರ್ಕಾರಕ್ಕೆ ವರದಿ
Next articleAI: ನಂಬಿಕೆ, ಸುರಕ್ಷತೆ, ಸಮತೋಲನ ಮುಖ್ಯ – ಡಾ. ಜೈಶಂಕರ್

LEAVE A REPLY

Please enter your comment!
Please enter your name here