ಕೊಪ್ಪಳ: ಅಕ್ಟೋಬರ್ 8ರಂದು ನೇರ ಸಂದರ್ಶನ

0
86

ಕೊಪ್ಪಳ ಜಿಲ್ಲೆಯಲ್ಲಿ ಅಕ್ಟೋಬರ್ 8ರಂದು ಅಂಚೆ ವಿಮೆ ಉತ್ಪನ್ನಗಳ ಮಾರಾಟ ಪ್ರತಿನಿಧಿಗಳ ನಿಯುಕ್ತಿಗೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತರು, ಅರ್ಹರು ಪಾಲ್ಗೊಳ್ಳಬಹುದು.

ಅಂಚೆ ಅಧೀಕ್ಷಕರು ಕೊಪ್ಪಳ ವಿಭಾಗ, ಕೊಪ್ಪಳ ಇವರು ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಪ್ರಸ್ತಾಪಿಸಿದ್ದಾರೆ.

ಅಕ್ಟೋಬರ್ 8ರ ಬುಧವಾರ ಕೊಪ್ಪಳ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂದರ್ಶನ ಬೆಳಗ್ಗೆ 10 ಗಂಟೆಗೆ ಅಂಚೆ ಅಧೀಕ್ಷಕರ ಕಾರ್ಯಾಲಯ, ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣ, ಎಲ್‌ಐಸಿ ಆಫೀಸ್ ಎದುರುಗಡೆ, ಹೊಸಪೇಟೆ ರಸ್ತೆ, ಕೊಪ್ಪಳ ಇಲ್ಲಿ ನಡೆಯಲಿದೆ.

ಅರ್ಹತಾ ನಿಯಮಗಳು: ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟಿರಬೇಕು. ನೇರ ಪ್ರತಿನಿಧಿಗಳಾಗಲು ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಸಲಹೆಗಾರರು ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಫೀಲ್ಡ್ ಆಫೀಸರ್ ಹುದ್ದೆಗೆ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರರು ಸಂದರ್ಶನದಲ್ಲಿ ಭಾಗವಹಿಸಬಹುದು.

ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬಂದ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ರೂ. 5000ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕಾಗುತ್ತದೆ.

ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮಿಷನ್ ನೀಡಲಾಗುವುದು ಹಾಗೂ ಯಾವುದೇ ನಿಗದಿತ ವೇತನ ಇರುವುದಿಲ್ಲ. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ/ ಸಂಸ್ಥೆ ಸಂಘಗಳ ಏಜೆಂಟ್ ಆಗಿರಬಾರದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.

Previous articleಡೇರಿಯಲ್ಲಿ ಅವ್ಯವಹಾರ: ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದ ರೈತರು
Next articleಹುಬ್ಬಳ್ಳಿ: ದೀಪಾವಳಿ, ಛತ್ ಹಬ್ಬಕ್ಕೆ ವಿಶೇಷ ರೈಲುಗಳ ಸಂಭ್ರಮ, ಇಲ್ಲಿದೆ ಸಂಪೂರ್ಣ ಮಾಹಿತಿ

LEAVE A REPLY

Please enter your comment!
Please enter your name here