ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಸಮೀಕ್ಷೆಯು ಹಿಂದೂಗಳ ಮತಾಂತರಕ್ಕೆ ಪ್ರೋತ್ಸಾಹ ನೀಡುವಂತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದರು.
ಸಮೀಕ್ಷೆಯಲ್ಲಿ ‘ಕ್ರಿಶ್ಚಿಯನ್ ಲಿಂಗಾಯತ’, ‘ಕ್ರಿಶ್ಚಿಯನ್ ಬ್ರಾಹ್ಮಣ’ ಮುಂತಾದ ಉಲ್ಲೇಖಗಳ ಬಗ್ಗೆ ಜೋಶಿ ಪ್ರಶ್ನಿಸಿದ್ದರು. ಈ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಜೋಶಿಯವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ತಮ್ಮ ಟ್ವೀಟ್ ಮೂಲಕ ಜೋಶಿಯವರಿಗೆ ತಿರುಗೇಟು ನೀಡಿದ್ದು, ಬಿಜೆಪಿ ನಾಯಕರೊಬ್ಬರು ಕುಟುಂಬ ಸಮೇತ ಮತಾಂತರಗೊಂಡಿರುವ ಘಟನೆಯನ್ನು ಉಲ್ಲೇಖಿಸಿದ್ದಾರೆ. “ನಿಮ್ಮ ಪಕ್ಷದವರೇ ಆದ ಒಬ್ಬ ನಾಯಕರು ಕುಟುಂಬ ಸಮೇತ ಮತಾಂತರಗೊಂಡಿದ್ದಾರೆಂದು ನಿಮ್ಮದೇ ಪಕ್ಷದವರು ಹೇಳಿದ್ದರು.
ಹಾಗಾದರೆ, ಇವರ ಮತಾಂತರಕ್ಕೆ ಪ್ರೇರಣೆಯಾದ ಸಂಗತಿ ಯಾವುದು? ನಿಮ್ಮ ಪಕ್ಷದವರಿಗಾಗಿ ‘ಘರ್ ವಾಪಸಿ’ ಕಾರ್ಯಕ್ರಮ ಹಮ್ಮಿಕೊಳ್ಳುವಿರಾ?” ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಜಾತಿ ಗಣತಿಯು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತದೆ ಎಂಬ ಜೋಶಿಯವರ ವಾದವನ್ನು ಖಂಡಿಸಿರುವ ಖರ್ಗೆ, “ಸಮೀಕ್ಷೆಯಿಂದ ಮತಾಂತರವಾಗಲು ಸಾಧ್ಯವೇ? ನಿಮ್ಮ ಪ್ರಕಾರ ಹಿಂದೂ ಧರ್ಮ ಅಷ್ಟೊಂದು ದುರ್ಬಲವೇ?” ಎಂದು ನೇರವಾಗಿ ಕೇಳಿದ್ದಾರೆ.
ಜನರಿಗೆ ಬೇಕಾಗಿರುವುದು “ಮ್ಯಾಜಿಕ್ ಮಾತುಗಳಲ್ಲ, ಲಾಜಿಕ್ ಮಾತುಗಳು” ಎಂದು ಹೇಳುವ ಮೂಲಕ ಪ್ರಿಯಾಂಕ್ ಖರ್ಗೆ, ಜೋಶಿಯವರ ಆರೋಪಗಳಿಗೆ ಸ್ಪಷ್ಟ ಮತ್ತು ತಾರ್ಕಿಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರಹ್ಲಾದ್ ಜೋಶಿ, ಜಾತಿ ಗಣತಿಯಲ್ಲಿ ವೈಯಕ್ತಿಕ ಪ್ರಶ್ನೆಗಳನ್ನು ಸೇರಿಸಿ, ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಕೇಂದ್ರ ಸರ್ಕಾರ ಜಾತಿ ಗಣತಿಗೆ ವಿರೋಧವಿಲ್ಲ, ಆದರೆ, “ನೀವು ಯಾವುದಾದರೂ ಸಾಮಾಜಿಕ ಸಂಘಟನೆಗೆ ಸೇರಿದ್ದೀರಾ?” ಎಂಬಂತಹ ಪ್ರಶ್ನೆಗಳು ಅನಗತ್ಯ ಎಂದು ವಾದಿಸಿದ್ದರು. ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಈ ಗಣತಿ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಈ ತೀಕ್ಷ್ಣ ಪ್ರತಿಕ್ರಿಯೆಯು, ಜಾತಿ ಗಣತಿಯ ಸುತ್ತಲಿನ ರಾಜಕೀಯ ಚರ್ಚೆಯನ್ನು ಮತ್ತಷ್ಟು ಬಿಸಿಗೊಳಿಸಿದೆ.



























ಹಿಂದೂ ಧರ್ಮಕ್ಕೆ ಕ್ರಿಶ್ಚಿಯನ್ ಧರ್ಮವನ್ನು ಸೇರಿಸಿರುವುದನ್ನು ನಾನು ಖಂಡಿಸುತ್ತೇನೆ ಹಾಗೆ ಇಸ್ಲಾಂ ಧರ್ಮವನ್ನು ಯಾಕೆ ಸೇರಿಸಿಲ್ಲ. ಈ ರೀತಿ ಮಾಡಿ ನೀವು ನೂರಾರು ಹೊಸ ಮಿಶ್ರ ಜಾತಿಗಳನ್ನು ಶೃಷ್ಟಿ ಮಾಡಿದ್ದೀರಿ. 😡ಇದಕ್ಕೆ ಸಂವಿಧಾನದ ಅನುಮತಿ ಇದೆಯಾ. ನಿಮ್ಮ ದುರಾಡಳಿತವನ್ನು ಮರೆಮಾಚಲು ಈ ರೀತಿ ನಾಟಕ ಮಾಡುತ್ತಿದ್ದೀರಿ. ಹಾಗೇ ನೋಡುತ್ತಿರಿ ಈ ಸಮೀಕ್ಷೆಯನ್ನು ತಿರಸ್ಕರಿಸುತ್ತೀರಿ ಮತ್ತು ರಾಜ್ಯದ ಹಣವನ್ನು ದುರುಪಯೋಗ ಮಾಡುತ್ತಿದ್ದೀರಿ. ಹಾಗೇ ನೋಡ್ಈತಾಯಿರಿ ಹಿಂದಿನ ಜಯಪ್ರಕಾಶ್ ಹೆಗ್ಡೆ ಆಯೋಗ ಮತ್ತು ಕಾಂತರಾಜ್ ಆಯೋಗದ ವರದಿಗಳನ್ನು ಅವೈಜ್ಞಾನಿಕ ಎಂದು ತಿರಸ್ಕರಿಸಿದ ರೀತಿಯಲ್ಲೇ ಈ ವರದಿಯನ್ನು ತಿರಸ್ಕರಿಸುತ್ತೀರಿ. ನಾಲಾಯಕ್ ಕಾಂಗ್ರೆಸ್ ಸರ್ಕಾರ.ಥ್ಥುಥ್ಥುಥ್ದುಥ್ಥುಥ್ಥೂ.,😡