ಕರ್ನಾಟಕದ ಪ್ರಸಿದ್ಧ ಮೈಸೂರು ಪಾಕ್ ಇನ್ನಷ್ಟು ಸಿಹಿ. ಧಾರವಾಡ ಪೇಡ ಮತ್ತಷ್ಟು ರುಚಿಕರ. ಹೆಚ್ಚಿದ ಕೊಡಗಿನ ಕಿತ್ತಲೆ ಸ್ವಾದ. ಹೌದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇತ್ತೀಚೆಗೆ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಐತಿಹಾಸಿಕ ಪರಿವರ್ತನೆಯನ್ನು ತಂದಿದೆ. ಬಹುಹಂತದ ತೆರಿಗೆ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿ ಸರಳವಾಗಿ ಕೇವಲ ಶೇ 5 ಮತ್ತು ಶೇ 18 ಎಂಬ ಎರಡು ಹಂತದ ತೆರಿಗೆ ಪದ್ಧತಿ ಅಳವಡಿಕೆ ಮಾಡಿದೆ.
ಈ ವ್ಯವಸ್ಥೆ ಕೇವಲ ತೆರಿಗೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದಿಲ್ಲ ಇದು ಉದ್ಯಮಿಗಳು, ಸಾಮಾನ್ಯ ಜನರಿಗೆ ನೇರವಾಗಿ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಹಿಂದಿನ ಬಹು ಹಂತದ ತೆರಿಗೆ ಪದ್ಧತಿ ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಹೊರೆಯಾಗಿತ್ತು. ಮೋದಿ ಸರ್ಕಾರ ಇದನ್ನು ಉದ್ಯಮ ಸ್ನೇಹಿಯಾಗಿ ಸರಳೀಕರಣಗೊಳಿಸಿತು. ಇದರಿಂದಾಗಿ ಸಾಮಾನ್ಯ ಜನರಿಗೆ ಸಹ ಅನುಕೂಲ ಮಾಡಿಕೊಟ್ಟಿತು.
ಜಿಎಸ್‌ಟಿ ದರ ಕಡಿತ ಕರ್ನಾಟಕದ ಸಣ್ಣ ಉದ್ಯಮಿಗಳಿಗೆ ಸಹಕಾರಿಯಾಗಿದೆ. ಮಹಿಳೆಯರ ನೆಚ್ಚಿನ ಮೈಸೂರು ರೇಷ್ಮೆ ಸೀರೆ, ಇಳಕಲ್ ಹಾಗೂ ಮೊಳಕಾಲ್ಮೂರು ಸೀರೆಗಳು ಈಗ ಶೇ 5ರ ತೆರಿಗೆ ವ್ಯವಸ್ಥೆ ಅಡಿ ಸೇರುತ್ತವೆ. ವಿಶ್ವ ಪ್ರಸಿದ್ಧ ಚನ್ನಪಟ್ಟಣ ಗೊಂಬೆ ಮತ್ತು ಕಿನ್ನಾಳ ಆಟಿಕೆಗಳ ಮೇಲಿನ ಜಿಎಸ್‌ಟಿ ಶೇ 12 ರಿಂದ ಶೇ 5ರ ತೆರಿಗೆ ವ್ಯಾಪ್ತಿಗೆ ಬಂದಿವೆ.
ಮೈಸೂರು ಪಾಕ್, ಧಾರವಾಡದ ಪೇಡ ಮೊದಲಿಗಿಂತಲೂ ಹೆಚ್ಚು ಸಿಹಿಯಾಗಿವೆ. ಇದಕ್ಕೂ ಹೊರತಾಗಿ ಜಿಎಸ್‌ಟಿ ಬದಲಾವಣೆ ರೈತರು ಮತ್ತು ಪ್ಲಾಂಟರ್‌ಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ. ಏಲಕ್ಕಿ, ಕಾಳುಮೆಣಸು, ಕಾಫಿ, ಕಿತ್ತಲೆ, ದಾಳಿಂಬೆ, ನಂಜನಗೂಡು ರಸಬಾಳೆ, ಕಲಮಾಪುರ ಕೆಂಪು ಬಾಳೆ, ಇಂಡಿಯ ನಿಂಬೆಯ ದರ ಈಗ ಕಡಿಮೆ ಆಗಿದೆ. ಬೀದರ್‌ನ ಬಿದರಿ ಕಲಾಕೃತಿ, ಮೈಸೂರು ರೋಸ್ ವುಡ್, ಗಂಜಿಫಾ ಕಾರ್ಡ್‌ಗಳ ದರಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದೆ, ಇದು ಮುಂಬರುವ ದಿನಗಳಲ್ಲಿ ಇವುಗಳಿಗೆ ಹೆಚ್ಚಿನ ಗ್ರಾಹಕರ ಬೇಡಿಕೆ ಒದಗಿಸಲಿದೆ.
ಜಿಎಸ್‌ಟಿ ಬದಲಾವಣೆ ಪರಿಣಾಮಗಳು: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪರಿವರ್ತನೆ ತೋಟಗಾರಿಕೆ, ವಾಲ್‌ನೆಟ್, ಚೆರ್ರಿ ಮತ್ತು ಕೇಸರಿ ಉದ್ಯಮಿಗಳಿಗೆ ಕೊಡುಗೆ ನೀಡಲಿದೆ. ತೆರಿಗೆ ಇಳಿಕೆಯ ಪರಿಣಾಮ ಸ್ಥಳೀಯ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಇದು ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಸ್ಥಳೀಯ ಉತ್ಪನ್ನಗಳಾದ ಕಾಂಗ್ರಾ ಟೀ, ಕಾಮ ಕಸ್ತೂರಿ ಬೀಜಗಳು, ಕುಲು ಶಾಲ್ ಮತ್ತು ಕಾಂಗ್ರಾ ಚಿತ್ರಗಳು ಈಗ ಶೇ 5ರ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ಇದು ರಾಜ್ಯದ ರೈತರು, ಕಲಾವಿದರು ಮತ್ತು ಸ್ಥಳೀಯ ಉದ್ಯವನ್ನು ಬಲಿಷ್ಠಗೊಳಿಸಲು ಸಹಾಯಕವಾಗಿದೆ.
ಉತ್ತರಾಖಂಡ್‌ನಲ್ಲಿ ದಾಲ್ಚಿನಿ ಎಲೆಗಳು, ರಾಜ್ಮಾ, ನೈಟಿಂಗಲ್ ಲಿಚ್ಚಿ ಮತ್ತು ಸ್ಥಳೀಯ ಕರಕುಶಲ ಉತ್ಪನ್ನಗಳನ್ನು ಶೇ 5ರ ತೆರಿಗೆ ವ್ಯಾಪ್ತಿಗೆ ತಂದಿದೆ. ಇದು ರಾಜ್ಯದ ಸಾಂಸ್ಕೃತಿಕ ಮತ್ತು ಪಾರಂಪರಿಕ ಉದ್ಯಮಗಳ ಬಲವರ್ಧನೆಗೆ ಸಹಕಾರಿ.
ಉಳಿದಂತೆ ಜಾರ್ಖಂಡ್ ರಾಜ್ಯದಲ್ಲಿ ಸೊಹ್ರಾಯ್ ಮತ್ತು ಖೋವರ್ ಚಿತ್ರಕಲೆಗಳು, ಡೊಕ್ರಾ ಕಲೆ, ತುಷಾರ್ ರೇಷ್ಮೆ ಮತ್ತು ಮಹುವಾ ಉತ್ಪನ್ನಗಳು ಈಗ ಶೇ 5ರ ತೆರಿಗೆ ಅಡಿ ಬರುತ್ತದೆ. ಇದು ನೇರವಾಗಿ ಆದಿವಾಸಿ ಕುಶಲ ಕರ್ಮಿಗಳು, ರೈತರು ಅವರ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಲು ನೆರವಾಗಲಿದೆ.
ತಮಿಳುನಾಡು ರಾಜ್ಯದಲ್ಲಿ ಬಟ್ಟೆ ತಯಾರಿಕೆ ಉದ್ಯಮ ಮತ್ತು ವಿರೂಪಾಕ್ಷಿ ಪರ್ವತದ ಬಾಳೆಹಣ್ಣು, ಈರೋಡ್ ಅರಿಶಿಣ, ತಾಂಜವೂರ್ ಚಿತ್ರಕಲೆ ಮತ್ತು ಅರಂಬವೂರ್ ಮರದ ಕೆತ್ತನೆಗಳು ಶೇ 5ರ ಜಿಎಸ್‌ಟಿ ವ್ಯಾಪ್ತಿಗೆ ಬರಲಿದ್ದು, ರೈತರು, ಕುಶಲ ಕರ್ಮಿಗಳಿಗೆ ಸಹಾಯಕವಾಗಿದ್ದು, ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡಲಿದೆ. ಚಂಡೀಗಢ್‌ನಲ್ಲಿ ಬಸ್ತಾರ್ ಲೋಹದ ಕಲೆ, ಡೋಕ್ರಾ ಕಲೆ ಮತ್ತು ಚಂಪಾ ರೇಷ್ಮೆ ಸೀರೆಗಳು ಈಗ ಶೇ 5ರ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಇದು ಸಾಂಪ್ರದಾಯಿಕ ಮತ್ತು ಸ್ಥಳೀಯ ರೈತರಿಗೆ ನೆರವಾಗಿವೆ.
ಇನ್ನು ಕೇರಳದಲ್ಲಿ ಅಲೆಪ್ಪಿ ಹಸಿರು ಏಲಕ್ಕಿ, ಮಲಬಾರ್ ಕರಿಮೆಣಸು, ವಯನಾಡು ಕಾಫಿ ಮೇಲಿನ ಜಿಎಸ್‌ಟಿ ಕಡಿಮೆಯಾಗಿದ್ದು ಈಗ ಶೇ 5ರ ವ್ಯಾಪ್ತಿಗೆ ಸೇರಿದೆ. ಇದು ರಾಜ್ಯದ ಕೃಷಿ ಮತ್ತು ಕರಕುಶಲ ಉದ್ಯದಮ ಆರ್ಥಿಕತೆಗೆ ಸಹಕಾರಿಯಾಗಿದೆ.
ಉದ್ಯೋಗ ಸೃಷ್ಟಿಗೆ ಸಹಕಾರಿ: ಆಂಧ್ರ ಪ್ರದೇಶದಲ್ಲಿ ಗುಂಟೂರು ಮೆಣಸು, ತಿರುಪತಿ ಲಡ್ಡು, ಕೊಂಡಪಲ್ಲಿ ಬೊಂಬೆಗಳು, ಏಟಿಕೊಪ್ಪಕ ಆಟಿಕೆಗಳು ಶೇ 5ರ ತೆರಿಗೆ ಅಡಿ ಬರಲಿವೆ. ಇದು ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಉದ್ಯಮದ ಹೊಸ ಶಕೆಗೆ ಅನುಕೂಲ ಒದಗಿಸಲಿದೆ.
ಪುದುಚೇರಿಯಲ್ಲಿ ವಿಲಿಯನೂರ್ ಟೆರಾಕೋಟಾ ಮಣ್ಣಿನ ಕರಕುಶಲ ವಸ್ತುಗಳು, ತಿರುಕನ್ನೂರು ಕ್ರಾಫ್ಟ್‌ಗಳು ಮತ್ತು ಕರ್ನಾಟಕದ ಕೊಡಗಿನ ಕಿತ್ತಲೆ, ಮೈಸೂರು ಸಿಲ್ಕ್‌ಮ ಚನ್ನಪಟ್ಟಣದ ಗೊಂಬೆಗಳು ಶೇ 5ರ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಈ ನಡೆ ಆರ್ಥಿಕ ಉತ್ತೇಜನ ಮತ್ತು ಸಣ್ಣ ಉದ್ಯಮದ, ಕುಶಲ ಕರ್ಮಿಗಳಿಗೆ ಅನುಕೂಲ ಮಾಡಿಕೊಡಲಿದೆ.
ಕರ್ನಾಟಕದ ಪಕ್ಕದ ಮಹಾರಾಷ್ಟ್ರದಲ್ಲಿಯೂ ಜಿಎಸ್‌ಟಿ ಕೊಲ್ಹಾಪುರಿ ಚಪ್ಪಲಿಗಳ, ಪೈನನಿ ಸೀರೆ, ವರ್ಲಿಯ ಕಲಾಕೃತಿಗಳು, ನಾಗ್ಪುರ ಕಿತ್ತಲೆ, ಆಲ್ಫಾನ್ಸೊ ಮಾವಿನಹಣ್ಣು ಈಗ ಶೇ5ರ ಜಿಎಸ್‌ಟಿ ವ್ಯಾಪ್ತಿಗೆ ಬಂದಿದ್ದು, ಕಡಿಮೆ ಉತ್ಪಾದನಾ ವೆಚ್ಚ ಹೊಸ ಉದ್ಯೋಗ ಅವಕಾಶ ಸೃಷ್ಟಿ ಮಾಡಲಿದೆ.
ಕಾಶ್ಮೀರದಲ್ಲಿ ಕಾಶ್ಮೀರಿ ಶಾಲು, ಡ್ರೈ ಪ್ರೂಟ್, ಡೈರಿ ಉತ್ಪನ್ನಗಳು, ಲಡಾಖ್‌ನಲ್ಲಿ ಪಶ್ಮಿನಾ ಶಾಲುಗಳು ಸೇರಿ ಇತರ ಉತ್ಪನ್ನಗಳು ಶೇ 5ರ ಜಿಎಸ್‌ಟಿ ಅಡಿ ಬಂದಿದ್ದು, ಕೃಷ ಮತ್ತು ಇತರ ವಲಯಗಳಿಗೆ ಸಹಕಾರಿಯಾಗಿದೆ. ಹಾಗೆಯೇ ಗೋವಾದಲ್ಲಿ ಗೋಡಂಬಿ ಮೇಲಿನ ಜಿಎಸ್‌ಟಿ ತೆರಿಗೆ ಕಡಿತ ರೈತರಿಗೆ, ಚಿಕ್ಕ ಆಹಾರೋದ್ಯಮಕ್ಕೆ ಅನುಕೂಲ ಮಾಡಿಕೊಟ್ಟಿವೆ.
ಉತ್ತರ ಪ್ರದೇಶದಲ್ಲಿ ಕ್ರೀಡಾ ಪರಿಕರಗಳು, ಕೈಮಗ್ಗ, ಚರ್ಮದ ಉತ್ಪನ್ನಗಳ ಉದ್ಯಮಕ್ಕೆ ಜಿಎಸ್‌ಟಿ ನೀತಿ ಅನುಕೂಲ ಮಾಡಿಕೊಟ್ಟಿದೆ. ಗುಜರಾತ್‌ನಲ್ಲಿ ವಜ್ರದ ಉದ್ಯಮಕ್ಕೆ ವಿಶೇಷ ಅನುಕೂಲ ಮಾಡಿಕೊಡುತ್ತಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿಗೂ ಸಹಾಯಕವಾಗಿದೆ.
ಮಹಾರಾಷ್ಟ್ರದ ಆಟೋಮೊಬೈಲ್ ಉದ್ಯಮ, ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಾಖಂಡ್‌ನಲ್ಲಿನ ಕೃಷಿಗೆ ಜಿಎಸ್‌ಟಿ ತೆರಿಗೆ ಸರಳೀಕರಣ ಅನುಕೂಲ ಮಾಡಿಕೊಡಲಿದೆ. ಅಲ್ಲದೇ ಐಟಿ ಉದ್ಯಮದ ಶಕ್ತಿ ಹೆಚ್ಚಳ, ಎಲೆಕ್ಟ್ರಾನಿಕ್ ಸೆಕ್ಟರ್‌ಗಳ ಅಭಿವೃದ್ಧಿಗೂ ದಾರಿ ಮಾಡಿಕೊಟ್ಟಿದೆ. ಇದು ರಫ್ತನ್ನು ಉತ್ತೇಜಿಸಲಿದೆ, ಹೊಸ ಹೊಸ ಉದ್ಯೋಗವಕಾಶ ಸೃಷ್ಟಿ ಮಾಡಲಿದೆ. ಸ್ಥಳೀಯ ಉದ್ಯಮಿಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲು ವೇದಿಕೆ ಒದಗಿಸಲಿವೆ.
ಒಟ್ಟಾರೆಯಾಗಿ ಮೋದಿ ಸರ್ಕಾರದ ಜಿಎಸ್‌ಟಿ ಸುಧಾರಣೆಗಳು ಕೇವಲ ತೆರಿಗೆ ನೀತಿಯನ್ನು ಸರಳೀಕರಣಗೊಳಿಸಿಲ್ಲ. ಸಾಂಪ್ರದಾಯಿಕ ಉದ್ಯಮಗಳು, ಕರಕುಶಲ ವಸ್ತುಗಳು, ಕೃಷಿ, ಆಹಾರ ಸಂಸ್ಕರಣೆ ಉದ್ಯಮದ ಆರ್ಥಿಕತೆ ಚೈತನ್ಯಕ್ಕೆ ಸಹಕಾರಿಯಾಗಿದೆ. ‘ಸಬ್ ಕೀ ಸಾತ್ ಸಬ್ ಕೀ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಎಂಬ ಪ್ರಧಾನಿ ನರೇಂದ್ರ ಮೋದಿ ಘೋಷಣೆಯನ್ನು ಕಾರ್ಯಗತಗೊಳಿಸುತ್ತದೆ.