ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿವಿದ ರಕ್ಷಣಾ ಕ್ಷೇತ್ರದಲ್ಲಿ, ಸಾಮಾಗ್ರಿಗಳನ್ನು ಮತ್ತು ಬಿಡಿಭಾಗಗಳನ್ನು ತಯಾರಿಸುವಂತ ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, ಭಾರತೀಯ ಸೇನೆಗೆ ಅಗತ್ಯವಾದ 97 ತೇಜಸ್ ವಿಮಾನಗಳನ್ನು ಖರೀದಿಸಲು ಬೆಂಗಳೂರು ಮೂಲದ ಎಚ್ಎಎಲ್‌ನೊಂದಿಗೆ ರಕ್ಷಣಾ ಇಲಾಖೆ 62,370 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ತೇಜಸ್‌ನ ಎಲ್‌ಸಿಎ ಎಂಕೆ1ಎ ಮಾದರಿ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದ ಇದಾಗಿದ್ದು, ಇದರಡಿಯಲ್ಲಿ 68 ಸಿಂಗಲ್ ಸೀಟರ್ ವಿಮಾನಗಳು ಹಾಗೂ 28 ಟ್ವಿನ್ ಸೀಟರ್ ಜೆಟ್‌ಗಳನ್ನು ಪೂರೈಸುವಂತೆ ರಕ್ಷಣಾ ಇಲಾಖೆ ಎಚ್‌ಎಲ್‌ಗೆ ಆರ್ಡರ್ ಕೊಟ್ಟಿದೆ.
2027-28ರಿಂದ ವಿಮಾನ ಪೂರೈಕೆ ಆರಂಭವಾಗಲಿದ್ದು, ಆರು ವರ್ಷಗಳಲ್ಲಿ ಅಷ್ಟೂ ವಿಮಾನಗಳನ್ನು ಇಲಾಖೆಗೆ ನೀಡಲಿದೆ. ಈ ವಿಮಾನದಲ್ಲಿ ಶೇ.64ರಷ್ಟು ಸ್ಥಳೀಯ ವಸ್ತುಗಳಿರುತ್ತವೆ. ಸ್ಥಳೀಯವಾಗಿ ಅಭಿವೃದ್ಧಿಗೊಳಿಸಿರುವ ಉತ್ತಮ್ ಎಇಎಸ್‌ಎ ರೇಡಾರ್, ಸ್ವಯಂ ರಕ್ಷಾ ಕವಚ್, ಕಂಟ್ರೋಲ್ ಸರ್ಫೇಸ್ ಆಕ್ಷುಯೇಟರ್‌ಗಳು ಇದರಲ್ಲಿ ವಿಶೇಷ ವಿಮಾನ ತಯಾರಿಕೆಯಲ್ಲಿ 105 ಕಂಪನಿಗಳು ಭಾಗಿಯಾಗಿವೆ.
ಈ ಮೊದಲು 2021ರಲ್ಲಿ 47,000 ಸಾವಿರ ಕೋಟಿ ರೂ. ವೆಚ್ಚದಲ್ಲಿ 83 ತೇಜಸ್ ಯುದ್ಧ ವಿಮಾನಗಳಿಗೆ ಒಪ್ಪಂದ ಮಾಡಿ ಕೊಳ್ಳಲಾಗಿತ್ತು. ಆದರೆ ಪೂರೈಕೆ ನಿಗದಿತ ಸಮಯಕ್ಕೆ ಆಗದೆ, ವಿಳಂಬವಾಗಿದ್ದು, ಕಳವಳಕ್ಕೆ ಕಾರಣವಾಗಿತ್ತು. ಸಂಪೂರ್ಣ ಸಜ್ಜಿತ ಎರಡು ವಿಮಾನಗಳನ್ನು ಈಗ ಪೂರೈಕೆ ಮಾಡಿರುವುದು ಹೊಸ ಆದೇಶ ನೀಡಲು ಕಾರಣವಾಗಿದೆ. ಇದೀಗ ಒಟ್ಟು 180 ತೇಜಸ್‌ಗಳಿಗೆ ರಕ್ಷಣಾ ಇಲಾಖೆ ಆರ್ಡರ್ ನೀಡಿದಂತಾಗಿದೆ.
ಜೆಟ್‌ನ ವಿಶೇಷತೆಗಳು ಏನು?
- ಸ್ವದೇಶದಲ್ಲೇ ನಿರ್ಮಿಸಿರುವ ಆಧುನಿಕ ‘ಉತ್ತಮ್ ಎಲೆಕಾನಿಕಲಿ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೇ (ಎಇಎಸ್‌ಎ) ರೇಡಾರ್’ ಅನ್ನು ಈ ವಿಮಾನ ಹೊಂದಿರಲಿದೆ.
- ಸ್ವದೇಶಿ ನಿರ್ಮಿತ ಸ್ವಯಂ ರಕ್ಷಣಾ ವ್ಯವಸ್ಥೆ ‘ಸ್ವಯಂ ರಕ್ಷಾ ಕವಚ್’ ‘ತೇಜಸ್ ಮಾರ್ಕ್ 1ಎ’ನಲ್ಲಿರಲಿದೆ.
- ಬೆಂಗಳೂರಿನ ಎಚ್ಎಎಲ್ ಶೇಕಡ 64ರಷ್ಟು ಸ್ವದೇಶಿ ವಸ್ತುಗಳಿಂದಲೇ ಇದನ್ನು ನಿರ್ಮಾಣ ಮಾಡಲಿದೆ
ಆತ್ಮನಿರ್ಭರ ಭಾರತಕ್ಕೆ ಉತ್ತೇಜನ: “ಸರ್ಕಾರದ ‘ಆತ್ಮನಿರ್ಭರ ಭಾರತ’ ಉಪಕ್ರಮಕ್ಕೆ ಉತ್ತೇಜನ ನೀಡುವ ಕ್ರಮವಾಗಿ, ಭಾರತೀಯ ವಾಯುಪಡೆಗೆ 97 ಲಘು ಯುದ್ಧ ವಿಮಾನ ಖರೀದಿಸಲು ರಕ್ಷಣಾ ಸಚಿವಾಲಯ ನಿರ್ಧಾರ ಮಾಡಿದೆ. ಇದರಿಂದ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚುತ್ತದೆ”, ಎಂದಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್.























