SLLC: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ ಸರ್ಕಾರ

0
63

SSLC. 2025-26ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿ ಇದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್‌ಎಲ್‌ಸಿ ಪರೀಕ್ಷೆ ಶುಲ್ಕವನ್ನು ಪರಿಷ್ಕರಣೆ ಮಾಡಿದೆ.

ಈ ಕುರಿತು ಅಧ್ಯಕ್ಷರು ಕ.ಶಾ.ಶಿ.ಮೌ.ಮಂಡಲಿ ಆದೇಶವನ್ನು ಹೊರಡಿಸಿದ್ದಾರೆ. ಈ ಜ್ಞಾಪನಾ ಪತ್ರವು 2025-26ನೇ ಸಾಲಿನಲ್ಲಿ ನಡೆಯುವ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪರಿಷ್ಕರಣೆ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ನಡೆಸಲಾಗುವ ಎಸ್‌ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ನೋಂದಣಿಯಾಗುವ ವಿದ್ಯಾರ್ಥಿಗಳಿಂದ ಸರ್ಕಾರದ ಆದೇಶದಂತೆ ಪರೀಕ್ಷಾ ಶುಲ್ಕವನ್ನು ಶೇಕಡಾ 5ರಷ್ಟು ಪ್ರತಿ ವರ್ಷ ಹೆಚ್ಚಿಸಿ ಪರಿಷ್ಕರಿಸಲು ಆದೇಶವಾಗಿರುತ್ತದೆ.

ಅದರನ್ವಯ 2025-26ನೇ ಸಾಲಿಗೆ ಪರೀಕ್ಷಾ ನೋಂದಣಿಗೆ ಅರ್ಜಿಗಳನ್ನು ಆಹ್ವಾನಿಸುವ ಹಿನ್ನೆಲೆ 2025-26ರ ಸಾಲಿನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇಕಡಾ 5ರಷ್ಟು ಸೇರಿಸಿ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದೆ.

ಪರಿಷ್ಕೃತಗೊಂಡ ಶುಲ್ಕಗಳು

  • ಪ್ರಥಮ ಭಾರಿಗೆ ಹಾಜರಾಗುವ ಶಾಲಾ ವಿದ್ಯಾರ್ಥಿಗಳು/ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಪ್ರಸ್ತುತ 676 ರೂ.ಗಳು. ಪರಿಷ್ಕೃತ ಶುಲ್ಕ 710 ರೂ.ಗಳು.
  • ಖಾಸಗಿ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ. ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ ಪ್ರಸ್ತುತ 236 ರೂ.ಗಳು, ಪರಿಷ್ಕೃತ ಶುಲ್ಕ 248 ರೂ.ಗಳು.
  • ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ ಪ್ರಸ್ತುತ ಶುಲ್ಕ 69 ರೂ.ಗಳು, ಪರಿಷ್ಕೃತ ಶುಲ್ಕ 72 ರೂ.ಗಳು.
  • ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ. ಒಂದು ವಿಷಯಕ್ಕೆ ಹಾಲಿ ಶುಲ್ಕ
    427 ರೂ., ಪರಿಷ್ಕೃತ ಶುಲ್ಕ 448 ರೂ.ಗಳು. ಎರಡು ವಿಷಯಕ್ಕೆ ಹಾಲಿ ಶುಲ್ಕ 532 ರೂ.ಗಳು, ಪರಿಷ್ಕೃತ ಶುಲ್ಕ 559 ರೂ.ಗಳು. ಮೂರು ಮತ್ತು ಮೂರಕ್ಕಿಂತ ಹೆಚ್ಚಿನ ವಿಷಯಕ್ಕೆ ಹಾಲಿ ಶುಲ್ಕ 716 ರೂ.ಗಳು, ಪರಿಷ್ಕೃತ ಶುಲ್ಕ 752 ರೂ.ಗಳು.
Previous articleಉತ್ತರ ಕನ್ನಡ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿ ಆನೆ ಸಾವು
Next articleಮೈಸೂರು: ಬದುಕಿನ ಯಾನ ಮುಗಿಸಿದ ಭೈರಪ್ಪಗೆ ಕಣ್ಣೀರಿನ ವಿದಾಯ – ಅಂತಿಮ ದರ್ಶನ ಪಡೆದ ಅಭಿಮಾನಿಗಳು

LEAVE A REPLY

Please enter your comment!
Please enter your name here