ಬಳ್ಳಾರಿಯ ಪ್ರಮುಖ ದೇವಾಲಯದ ಸೇವೆಗಳು ಆನ್‌ಲೈನ್‌ನಲ್ಲಿ

0
39

ಬಳ್ಳಾರಿಯ ಪ್ರಸಿದ್ಧ ಶ್ರೀ ಕನಕದುರ್ಗಮ್ಮ ದೇವಾಲಯದ ಗಣಕೀಕೃತ ರಸೀದಿ ವ್ಯವಸ್ಥೆ, ವೆಬ್‌ಸೈಟ್ ಬಿಡುಗಡೆ ಮಾಡಲಾಗಿದೆ. ಬಳ್ಳಾರಿಯ ಆರಾಧ್ಯ ದೇವತೆಯಾದ ಕನಕದುರ್ಗಮ್ಮ ದೇವಾಲಯಕ್ಕೆ ಸಾವಿರಾರು ಭಕ್ತರಿದ್ದಾರೆ.

ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ದಸರಾ ಮಹೋತ್ಸವ-2025ರ ಅಂಗವಾಗಿ ವಿವಿಧಿ ಧಾರ್ಮಿಕ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದೇವಸ್ಥಾನದ ಗಣಿಕೀಕೃತ ರಸೀದಿ ವ್ಯವಸ್ಥೆ ಹಾಗೂ ದೇವಸ್ಥಾನ ವೆಬ್‌ಸೈಟ್ ಅನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಶಾಸಕರು, “ಎಲ್ಲಾ ಜಾತಿ, ಮತ-ಧರ್ಮದ ಭೇದಭಾವವಿಲ್ಲದೇ ದೇವಿಯನ್ನು ಪೂಜಿಸುವ ನಗರದ ಏಕೈಕ ಆರಾಧ್ಯ ದೇವಿಯು ಶ್ರೀ ಕನಕದುರ್ಗಮ್ಮ. ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಯೋಜನಾ ಕಾರ್ಯಗಳನ್ನು ರೂಪಿಸಲಾಗಿದೆ” ಎಂದು ಹೇಳಿದರು. ಶ್ರೀ ಕನಕ ದುರ್ಗಮ್ಮ ದೇವಾಲಯದ ಭಕ್ತರು ದೇವಸ್ಥಾನದ ಮಾಹಿತಿಗಾಗಿ ವೆಬ್‌ಸೈಟ್ WWW.kanakadurgammaballari.comಗೆ ಭೇಟಿ ನೀಡಬಹುದು.

ದೇವಿಯ ಆರ್ಶೀವಾದದಿಂದ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ದೇವಿಯ ಕೃಪೆ ಎಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿ, ದಸರಾ ಮಹೋತ್ಸವದ ನವರಾತ್ರಿಯ ಶುಭಾಶಯ ತಿಳಿಸಿದರು. ದೇವಸ್ಥಾನದಲ್ಲಿ 11 ದಿವಸಗಳ ಕಾಲ ನಡೆಯುವ ದಸರಾ ಹಬ್ಬದ ಎಲ್ಲಾ ಕಾರ್ಯಕ್ರಮಗಳನ್ನು ಸಾರ್ವಜನಿಕರು ಭಾಗವಹಿಸಿ ಅಸ್ವಾದಿಸಬೇಕು ಎಂದರು.

ಕಾಣಿಕೆ ಸಂಗ್ರಹ ಎಷ್ಟು?: 2025ರ ಮಾರ್ಚ್‌ನಲ್ಲಿ ಶ್ರೀ ಕನಕ ದುರ್ಗಮ್ಮ ದೇವಾಲಯದ ಕಾಣಿಕೆ ಹುಂಡಿ ಎಣಿಕೆ ನಡೆದಿತ್ತು. ಆಗ 74,21,390 ರೂ. ಹಣ ಸಂಗ್ರಹವಾಗಿತ್ತು. ಕೆಲವು ದಿನಗಳ ಹಿಂದೆ ನಡೆದ ದೇವಾಲಯದ ಸಿಡಿ ಬಂಡಿ ಉತ್ಸವದಲ್ಲಿ ಸುಮಾರು 3 ಲಕ್ಷ ಜನರು ಪಾಲ್ಗೊಂಡಿದ್ದರು.

ಇಷ್ಟು ದಿನಗಳ ಕಾಲ 64 ರೂ. ಕಾಣಿಕೆ ಸಂಗ್ರಹ ಶ್ರೀ ಕನಕ ದುರ್ಗಮ್ಮ ದೇವಾಲಯದ ಅತಿ ಹೆಚ್ಚಿನ ಕಾಣಿಕೆ ಸಂಗ್ರಹವಾಗಿತ್ತು. ಈಗ ಈ ದಾಖಲೆಯನ್ನು ದೇವಾಲಯ ಮುರಿದಿದೆ. ಕಾಣಿಕೆ ಹಣದ ಜೊತೆ ವಿವಿಧ ಹರಕೆ ತೀರಿಸುವಂತೆ ಪತ್ರಗಳನ್ನು ಸಹ ಭಕ್ತರು ಹಾಕಿದ್ದರು.

Previous articleಲಡಾಖ್‌: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಬಿಜೆಪಿ ಕಚೇರಿಗೆ ಬೆಂಕಿ
Next articleಮಂಗಳೂರಿನಲ್ಲಿ ಲಿಖಿತ ಭಾಷಣ ಓದಿದ್ದ ಭೈರಪ್ಪ..

LEAVE A REPLY

Please enter your comment!
Please enter your name here