ಕೆಪಿಸಿಎಲ್ ಶಿಶಿಕ್ಷು ತರಬೇತಿ, ಶಿಷ್ಯ ವೇತನ 10,000 ರೂ.ಗಳು

0
32

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವತಿಯಿಂದ ಕುಡತಿನಿಯಲ್ಲಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ನಿಗದಿತ ಮಾಸಿಕ ವೇತನದೊಂದಿಗೆ ಒಂದು ವರ್ಷ ಅವಧಿ ಶಿಶಿಕ್ಷು ತರಬೇತಿ ನೀಡಲು ಅರ್ಹ ಐಟಿಐ ಮತ್ತು ಐಟಿಐಯೇತರ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು www.apprenticeshipindia.org (skil india, NAPS) ವೆಬ್‌ಸೈಟ್‌ನಲ್ಲಿ BALLARI THERMAL POWER STATION KUDATHINI BALLARI (DIST) ಎಸ್ಟಾಬ್ಲಿಷ್‌ಮೆಂಟ್ [E07162900015]ಗೆ ಅಕ್ಟೋಬರ್ 18ರ ಸಂಜೆ 5ಗಂಟೆಯೊಳಗಾಗಿ ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಆಯಾ ವೃತ್ತಿಗಳಲ್ಲೇ ಅರ್ಜಿ ಸಲ್ಲಿಸಬೇಕು.

ವೃತ್ತಿ ಸಂಖ್ಯೆ ಮತ್ತು ಶಿಷ್ಯ ವೇತನ: ಐಟಿಐ ಎಲೆಕ್ಟ್ರಿಷಿಯನ್-8, ಐಟಿಐ ಫಿಟ್ಟರ್-7, ಐಟಿಐ ಟರ್ನರ್-2, ಐಟಿಐ ವೆಲ್ಡರ್-3, ಐಟಿಐ ಕೊಪಾ (ಪಾಸಾ)-4. ಶಿಷ್ಯವೇತನ ರೂ.10 ಸಾವಿರ. ಎಫ್‌ಓಎ (ಎಸ್‌ಎಸ್‌ಎಲ್‌ಸಿ ಮತ್ತು ಕಂಪ್ಯೂಟರ್)-16, ಹೌಸ್ ಕೀಪರ್-18. ಶಿಷ್ಯವೇತನ ರೂ.7 ಸಾವಿರ.

ಅಭ್ಯರ್ಥಿಯ ಸ್ವವಿವರ, ಆಧಾರ್ ಕಾರ್ಡ್, ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೈಹಿಕಾ ಕ್ಷಮತಾ ಪತ್ರ, ಇತ್ತೀಚಿನ ನಾಲ್ಕು ಭಾವಚಿತ್ರ, ಇತರ ದಾಖಲೆಯ ವಿವರದ ಪ್ರತಿ ಒದಗಿಸಬೇಕು.

  • ಅಭ್ಯರ್ಥಿಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇ-ಮೇಲ್ ಐಡಿಯನ್ನು ಮಾತ್ರ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ತರಬೇತಿಯ ಎಲ್ಲಾ ಪತ್ರ ವ್ಯವಹಾರವನ್ನು ನೀಡಿದಂತಹ ಇ-ಮೇಲ್ ಐಡಿ ಮುಖಾಂತರ ಮಾಡಲಾಗುವುದು.
  • ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಈ ಕಚೇರಿಗೆ ಲಕೋಟೆಯ ಮೇಲೆ ‘ಶಿಶಿಕ್ಷು ತರಬೇತಿಗಾಗಿ ಅರ್ಜಿ’ ಎಂದು ನಮೂದಿಸಿ ಸಲ್ಲಿಸತಕ್ಕದ್ದು, ಆಫ್‌ಲೈನ್ ಮೂಲಕ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆನ್‌ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.
  • ಶಿಶಿಕ್ಷು ತರಬೇತಿಗಾಗಿ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಶಿಶಿಕ್ಷು ಅಧಿನಿಯಮದಂತೆ ಕನಿಷ್ಟ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇರುತ್ತದೆ. ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25ರಷ್ಟು ಮೀಸಲಾತಿ ಇರುತ್ತದೆ.
  • ತರಬೇತಿಯ ಅವಧಿ ಮುಗಿದ ನಂತರ ಶಿಶಿಕ್ಷುಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ಶಿಶಿಕ್ಷುಗಳನ್ನು ನಿಗಮದ ಖಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕುಡತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಚೇರಿ ಅಥವಾ ಮೊಬೈಲ್ 9141614694ಗೆ ಸಂಪರ್ಕಿಸಬಹುದು.

Previous articleರೈಲ್ವೆ ನೌಕರರಿಗೆ ಗುಡ್‌ ನ್ಯೂಸ್ – ಬೋನಸ್ ಬಿಡುಗಡೆಗೆ ಸಂಪುಟ ಅಸ್ತು
Next articleBigg Boss Kannada 12: ಬಿಗ್‌ ಬಾಸ್‌ ಆರಂಭಕ್ಕೆ ದಿನಗಣನೆ ಶುರು

LEAVE A REPLY

Please enter your comment!
Please enter your name here