ಉಡುಪಿ, ಹೊನ್ನಾಳಿ: ಎರಡೂ ಮಠದ ನಡುವೆ ‘ಸುಭದ್ರೆ’ ಯಾರ ಪಾಲು?

0
53

ಮೈಸೂರು ದಸರಾ ಆನೆಗಳು ಸುದ್ದಿಯಲ್ಲಿರುವ ಹೊತ್ತಿನಲ್ಲಿಯೇ ಕರ್ನಾಟಕದ ‘ಸುಭದ್ರೆ’ ಆನೆ ಸದ್ದು, ಸುದ್ದಿ ಮಾಡುತ್ತಿದೆ. ಉಡುಪಿ ಮತ್ತು ಹೊನ್ನಾಳಿ ಮಠದ ಜಟಾಪಟಿ ನಡುವೆ ಆನೆ ಯಾರಿಗೆ ಸೇರಿದ್ದು? ಎಂಬುದು ಚರ್ಚೆಯ ವಿಚಾರವಾಗಿದೆ.

‘ಸುಭದ್ರೆ’ ಎಂಬ ಹೆಸರಿನ ಆನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿದೆ. ಇದನ್ನು ಉಡುಪಿ ಮಠಕ್ಕೆ ಕರೆದುಕೊಂಡು ಹೋಗಲು ಭಾನುವಾರ ಮಠದವರು ಆಗಮಿಸಿದ್ದರು. ಆಗ ‘ಸುಭದ್ರೆ’ ಆನೆ ದೊಡ್ಡ ಸುದ್ದಿ ಮಾಡಿದೆ.

ಆನೆಯನ್ನು ಕೊಡುವುದಿಲ್ಲ ಎಂದು ಮಠದ ಭಕ್ತರು ಉಡುಪಿ ಮಠದಿಂದ ಬಂದವರ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಬಂದರು. ಸಭೆ, ಸಂಧಾನ, ಕಾನೂನು ಪ್ರಕ್ರಿಯೆ ಬಳಿಕ ಈಗ ‘ಸುಭದ್ರೆ’ ಹೊನ್ನಾಳಿಯ ಮಠದಲ್ಲಿಯೇ ಭದ್ರವಾಗಿದ್ದಾಳೆ.

‘ಸುಭದ್ರೆ’ ಆನೆ ಕುರಿತು: 2002ರಲ್ಲಿ ಮುಂಬೈ ಮೂಲದ ಉದ್ಯಮಿಯೊಬ್ಬರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆನೆಯೊಂದನ್ನು ನೀಡಿದರು. ಅದಕ್ಕೆ ‘ಸುಭದ್ರೆ’ ಎಂದು ನಾಮಕರಣ ಮಾಡಲಾಗಿದೆ.

ಶ್ರೀಕೃಷ್ಣ ರಥಯಾತ್ರೆ ಸಂದರ್ಭದಲ್ಲಿ ‘ಸುಭದ್ರೆ’ ಆನೆ ಬಳಕೆ ಮಾಡಲಾಗುತ್ತಿತ್ತು. ಆದರೆ ಕಾಲಾನಂತರ ಅದಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಯಿತು. ಆನೆ ಕಾಲಿಗೆ ಗ್ಯಾಂಗ್ರಿನ್ ಉಂಟಾದ ಬಳಿಕ ಅದು ಬುದುಕುವುದು ಕಷ್ಟ ಎಂದು ವೈದ್ಯರು ಹೇಳಿದ್ದರು.

2019ರಲ್ಲಿ ನಿಯಮಗಳ ಪ್ರಕಾರ ಆನೆಯನ್ನು ಶಿವಮೊಗ್ಗದ ಸಕ್ರೆಬೈಲಯ ಆನೆ ಬಿಡಾರಕ್ಕೆ ಕಳಿಸಲಾಗಿತ್ತು. ಆಗ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮೀಜಿ ಸರ್ಕಾರದ ನಿಯಮದ ಪ್ರಕಾರ ಆನೆಯನ್ನು ಮಠಕ್ಕೆ ತೆಗೆದುಕೊಂಡು ಬಂದರು.

ಆನೆಯ ಚಿಕಿತ್ಸೆಗಾಗಿ ಸುಮಾರು 10 ಲಕ್ಷ ರೂ. ಖರ್ಚು ಮಾಡಿದ್ದಾರೆ. ಆನೆ ಚೇತರಿಸಿಕೊಂಡಿತು. ಮಠದ ವಾತಾವರಣಕ್ಕೆ ಹೊಂದಿಕೊಂಡಿತು. ಅಲ್ಲದೇ ಭಕ್ತರ ಮೆಚ್ಚುಗೆಯನ್ನುಗಳಿಸಿತು. ಆನೆಗಾಗಿಯೇ ಮಠದ 40 ಎಕರೆ ಪ್ರದೇಶದಲ್ಲಿ ಹಸಿರು ಪರಿಸರ ನಿರ್ಮಾಣ ಮಾಡಲಾಗಿದೆ.

ಆದರೆ ಈಗ ಆನೆಯನ್ನು ಪುನಃ ತಮ್ಮ ವಶಕ್ಕೆ ಪಡೆಯಲು ಉಡುಪಿ ಮಠದವರು ಆಗಮಿಸಿದ್ದು, ಎರಡು ಮಠದ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ ಸೇರಿದಂತೆ ಹಲವರು ಆಗಮಿಸಿ ಸಂಧಾನ ಸಭೆ ನಡೆಸಿದರು.

Previous articleಕಾಂತಾರ : ಭಾರತೀಯ ಅಂಚೆ ಇಲಾಖೆಯಿಂದ ವಿಶೇಷ ಗೌರವ
Next articleಭಾರತ-ಮೊರಾಕೊ ರಕ್ಷಣಾ ಸಹಕಾರ: TASL ರಕ್ಷಣಾ ಉತ್ಪಾದನಾ ಸೌಲಭ್ಯ ಉದ್ಘಾಟನೆ

LEAVE A REPLY

Please enter your comment!
Please enter your name here