ಸಾವಕಾಶವಾಗಿ ಹೊರಟ ಇಳಕಲ್ ಕಾ ಮಹಾರಾಜ ಗಣೇಶ

0
19

ಇಳಕಲ್ ‌: ಇಲ್ಲಿನ ಹೊಸಪೇಟೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಇಳಕಲ್ ಕಾ ಮಹಾರಾಜ ಗಣೇಶನ ವಿಸರ್ಜನೆ ಮಂಗಳವಾರದಂದು ಸಾವಕಾಶವಾಗಿ ಆರಂಭವಾಯಿತು.

ಸಂಯೋಜಕರು ಮಧ್ಯಾಹ್ನ 12 ಗಂಟೆಗೆ ವಿಸರ್ಜನಾ ಮೆರವಣಿಗೆ ಪ್ರಾರಂಭಿಸಿದರು ಆದರೆ ಅದರ ಆಮೆ ನಡಿಗೆಯ ಮುಂದೆ ಮಹಾರಾಷ್ಟ್ರ ರಾಜ್ಯದ ಡೊಳ್ಳು ಗೊಂಬೆ ರೂಪಕಗಳು ಪಟಾಕಿಯ ಸಿಡಿತ ಯುವಕರ ಉನ್ಮಾದದ ನೃತ್ಯ ಗಣೇಶನು ನಿಂತಿದ್ದ ಟ್ರ್ಯಾಕ್ಟರ್ ಮುಂದೆ ಚಲಿಸದಂತೆ ಮಾಡಿದ್ದವು

‌‌‌‌ಗಣೇಶ ಪ್ರತಿಷ್ಠಾಪನೆಯ ಸ್ಥಳದ ಅನತಿ ದೂರದಲ್ಲಿ ಮಸೀದೆಯೊಂದು ಇದ್ದು ಅಲ್ಲಿ ಯಾವುದೇ ರೀತಿಯ ಗಲಾಟೆ ಆಗಬಾರದು ಎಂಬ ಉದ್ದೇಶದಿಂದ ಪೋಲಿಸರು ಅಲ್ಲಿ ಸಾಕಷ್ಟು ಪೋಲಿಸರನ್ನು ನಿಯೋಜನೆ ಮಾಡುವ ಜೊತೆಗೆ ಎರಡು ಡಿಐಆರ್ ವಾಹನಗಳನ್ನು ನಿಲ್ಲಿಸಿದ್ದರು.

ಯುವಕರ ಹಾರಾಟ ಚೀರಾಟ ಖುಷಿಯ ಚೆಲ್ಲಾಟದ ನಡುವೆ  ಗಣೇಶನ ಮೆರವಣಿಗೆ ಡಿಜೆಗಳಿಗೆ ನಿರ್ಬಂಧ ಇದ್ದರೂ ಅದರ ಹೃದಯ ಬಡಿಯುವ ಸೌಂಡಿನೊಂದಿಗೆ ಮುಂದೆ ಸಾಗಿತ್ತು .ಡಿಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ನೇತೃತ್ವದಲ್ಲಿ ಸಿಪಿಐ ಸುನೀಲ ಸವದಿ, ಶಹರ್ ಪೋಲಿಸ್ ಪಿಎಸ್ ಐ ಮಂಜುನಾಥ ಪಾಟೀಲ ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು.

ಎಸ್ ಪಿ ಭೇಟಿ: ಇಳಕಲ್ ಕಾ ಮಹಾರಾಜ ಗಣೇಶ ವಿಸರ್ಜನೆ ಸ್ಥಳಕ್ಕೆ ಬಾಗಲಕೋಟ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಭೇಟಿ ನೀಡಿದರು ಯಾವುದೇ ರೀತಿಯ ಗದ್ದಲ ಗೊಂದಲ ಆಗದಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ಯತ್ನಾಳ ಆಗಮನ: ಗಣೇಶ ವಿಸರ್ಜನೆಯ ಮಂಗಳವಾರದಂದು ಮಧ್ಯಾಹ್ನ ಒಂದು ಗಂಟೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಳಕಲ್‌ಗೆ ಭೇಟಿ ನೀಡಿದರು ಅವರ ಆಗಮನದ ಸುದ್ದಿ ಹಲವೆಡೆ ಹರಡಿದರೂ ಅವರು ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿಯೇ ಊಟ ಮಾಡಿಕೊಂಡು ಅವರ ಜೊತೆಗೆ ಗಂಗಾವತಿಯತ್ತ ಪಯಣ ಬೆಳೆಸಿದ್ದರು.

Previous articleನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್: 2 ಲಕ್ಷಕ್ಕೂ ಹೆಚ್ಚು ಹಣ ಬಿಹಾರದ ಖಾತೆಗೆ ವರ್ಗಾವಣೆ!
Next articleದೆಹಲಿ: ಮಾದಕ ವಸ್ತು ಮುಕ್ತ ಗುರಿಗೆ ಭಾರತ ದಿಟ್ಟ ಹೆಜ್ಜೆ – ಅಮಿತ್ ಷಾ

LEAVE A REPLY

Please enter your comment!
Please enter your name here