Government Employee: ಸಂಬಳ ಪ್ಯಾಕೇಜ್‌ ಖಾತೆ, ಸರ್ಕಾರಿ ನೌಕರರಿಗೆ ಸಿಹಿಸುದ್ದಿ

0
51

Government Employee. ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಇದೆ. ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ ‘ಎ’ ಗುಂಪಿನ ಅರ್ಹ ಅಧಿಕಾರಿಗಳು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ವಿಚಾರದಲ್ಲಿ ಹೊಸ ಆದೇಶವನ್ನು ನೀಡಲಾಗಿದೆ.

ಈ ಕುರಿತು ಡಾ. ವಿಶಾಲ್ ಆರ್. ಸರ್ಕಾರದ ಕಾರ್ಯದರ್ಶಿ, (ವಿತ್ತೀಯ ಸುಧಾರಣೆ), ಆರ್ಥಿಕ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶ ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ ‘ಎ’ ಗುಂಪಿನ ಅರ್ಹ ಅಧಿಕಾರಿಗಳು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತವಡಿಸಿಕೊಳ್ಳುವಲ್ಲಿ ಹೆಚ್ಚುವರಿ 15 ದಿನಗಳ ಕಾಲಾವಧಿಯನ್ನು ವಿಸ್ತರಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ ‘ಎ’ ಗುಂಪಿನ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ 15.09.2025ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು.

ಆದರೆ, ‘ಎ’ ಗುಂಪಿನ ಅಧಿಕಾರಿಗಳು ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ, ‘ಎ’ ಗುಂಪಿನ ಅಧಿಕಾರಿಗಳಿಗೆ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ದಿನಾಂಕ 30.09.2025ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾರಿಗೆ ಎಷ್ಟು ಗಡುವು?: ಈ ಹಿಂದೆ ಕರ್ನಾಟಕ ಸರ್ಕಾರ ತನ್ನ ಆದೇಶದಲ್ಲಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ಎಲ್ಲಾ ಗುಂಪಿನ ನೌಕರರಿಗೆ ಗಡುವು ನೀಡಿತ್ತು. ‘ಎ’ ಗುಂಪು 31.08.2025ರ ಒಳಗೆ, ‘ಬಿ’ ಗುಂಪು 30.09.2025ರ ಒಳಗೆ, ‘ಸಿ’ ಗುಂಪು 30.11.2025ರ ಒಳಗೆ, ‘ಡಿ’ ಗುಂಪು 31.01.2026ರ ಒಳಗೆ ಎಂದು ಗಡುವು ನೀಡಲಾಗಿತ್ತು. ಆದರೆ ಈಗ ‘ಎ’ ಗುಂಪಿನ ಅವಧಿ ವಿಸ್ತರಣೆ ಮಾಡಲಾಗಿದೆ.

ಸರ್ಕಾರದ ಮಾಹಿತಿ ಪ್ರಕಾರ ಸಂಬಳ ಪ್ಯಾಕೇಜ್‌ ನೋಂದಣಿ ಕುರಿತು ಸರ್ಕಾರಿ ಆದೇಶ ಹೊರಡಿಸಿ 42 ತಿಂಗಳಾದರೂ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಂಡ ಅಧಿಕಾರಿಗಳು/ ನೌಕರರ ಸಂಖ್ಯೆ 3 ಲಕ್ಷಗಳಿಗೆ ಮಾತ್ರ ತಲುಪಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)ಯಡಿ 32,611 ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)ಯಡಿ 25,386 ನೋಂದಣಿಗಳು ಮಾತ್ರ ಹೆಚ್.ಆರ್.ಎಂ.ಎಸ್.ನಲ್ಲಿ ದಾಖಲಾಗಿದ್ದು, ಯೋಜನೆಗಳಡಿ ಹೆಚ್ಚಿನ ಪ್ರಗತಿಯಾಗಿರುವುದಿಲ್ಲ.

ಈ ಹಿಂದೆ ಎಲ್ಲಾ ಅಧಿಕಾರಿ/ ನೌಕರರು ಮತ್ತು ವಿವಿಧ ನಿಗಮಗಳು/ ಮಂಡಳಿಗಳ ಉದ್ಯೋಗಿಗಳು ತಮ್ಮ ಕುಟುಂಬಗಳ ಹಿತದೃಷ್ಟಿಯಿಂದ ತಮ್ಮ ಆಯ್ಕೆಯ ಯಾವುದೇ ಬ್ಯಾಂಕ್ ನೀಡುವ ಸಂಬಳ ಪ್ಯಾಕೇಜ್‌ಗಳನ್ನು ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಲು ಹೆಚ್ಚಿನ ಆಸಕ್ತಿಯಿಂದ ಮನವೊಲಿಸುವುದು ಮತ್ತು ಸಂಬಂಧಪಟ್ಟ ಬ್ಯಾಂಕಿಗೆ ಸಂಬಳ ಪ್ಯಾಕೇಜುಗಳಲ್ಲಿ ಸೇರಿಸಲು ಅರ್ಜಿಯನ್ನು ಸಲ್ಲಿಸಲು ತಮ್ಮನ್ನು ಮತ್ತು ಎಲ್ಲಾ ಅಧಿಕಾರಿ/ ನೌಕರರನ್ನು ಪ್ರೇರೇಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿತ್ತು.

Previous articleಬಾಗಲಕೋಟೆಯಲ್ಲಿ ಕೆಲಸ ಖಾಲಿ ಇದೆ: ಹುದ್ದೆ, ವೇತನ ವಿವರ
Next articleಗಂಡನ ಹತ್ರ ರಿಮೋಟ್ ಕೇಳಬೇಡಿ: ಭಾನುವಾರ ಇಂಡೋ-ಪಾಕ್ ಮ್ಯಾಚ್!

LEAVE A REPLY

Please enter your comment!
Please enter your name here