ಮಂಡ್ಯ: ಶ್ರೀರಂಗಪಟ್ಟಣ ದಸರಾ 2025, ಲೋಗೋ ಬಿಡುಗಡೆ

0
47

ಮಂಡ್ಯದ ಶ್ರೀರಂಗಪಟ್ಟಣ ಸಹ ದಸರಾಕ್ಕೆ ತಯಾರಿಯನ್ನು ನಡೆಸುತ್ತಿದೆ. ಮೈಸೂರು ದಸರಾಗೂ ಮೊದಲು ಶ್ರೀರಂಗಪಟ್ಟಣದ ಐತಿಹಾಸಿಕ ದಸರಾ ನಡೆಯುತ್ತದೆ. ಶ್ರೀರಂಗಪಟ್ಟಣ ದಸರಾ 2025ರ ಲೋಗೋವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಈ ಬಾರಿಯ ಶ್ರೀರಂಗಪಟ್ಟಣ ದಸರಾ ಸೆಪ್ಟೆಂಬರ್ 25 ರಿಂದ 28ರ ತನಕ ನಡೆಯಲಿದೆ. ಅದ್ದೂರಿಯಾಗಿ ನಡೆಯುವ ದಸರಾದ ಲೋಗೋವನ್ನು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಗೋ‌ ಬಿಡುಗಡೆಯ ನಂತರ ಮಾತನಾಡಿದ ಸಚಿವರು, “ಈ ಬಾರಿಯ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ನಟ ಟಿ.ಎಸ್.ನಾಗಾಭರಣ ನೆರವೇರಿಸಲಿದ್ದಾರೆ” ಎಂದರು.

“ಈ ಬಾರಿಯ ಕಾರ್ಯಕ್ರಮಗಳನ್ನು ಸಹ ಉತ್ತಮವಾಗಿ ಸಂಘಟಿಸಲಾಗುವುದು. ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ 25ರಂದು ಉದ್ಘಾಟನೆ ಹಾಗೂ 28ರಂದು ಸಮಾರೋಪ ಸಮಾರಂಭ ನಡೆಯಲಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಅದ್ದೂರಿಯಾಗಿ ನಡೆಯಲಿದೆ ದಸರಾ: ಮಂಡ್ಯ ಜಿಲ್ಲಾಡಳಿತದ ವತಿಯಿಂದ ಈ ಬಾರಿ 4 ದಿನಗಳ ಕಾಲ ಸೆಪ್ಟೆಂಬರ್ 25 ರಿಂದ 28ರ ತನಕ ಶ್ರೀರಂಗಪಟ್ಟಣ ದಸರಾ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳು ವಿಭಿನ್ನವಾಗಿ ಜನರನ್ನು ಆಕರ್ಷಿಸುವ ರೀತಿ ಇರಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.

ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದ ಮೆರವಣಿಗೆಗೆ ಸೆಪ್ಟೆಂಬರ್ 25ರಂದು ಮಧ್ಯಾಹ್ನ 3 ಗಂಟೆಗೆ ಚಾಲನೆ ನೀಡಲಾಗುತ್ತದೆ. ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದ ಆವರಣದಲ್ಲಿ ವಿಜೃಂಭಣೆಯಿಂದ ಈ ಕಾರ್ಯಕ್ರಮ ನಡೆಯಲಿದೆ.

ದಸರಾ ಮೆರವಣಿಕೆ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ವಿವಿಧ ವಯೋಮಿತಿಗಳ ಜನರು ಭಾಗವಹಿಸುವ ರೀತಿ ಕಾರ್ಯಕ್ರಮಗಳನ್ನು ಅಧಿಕಾರಿಗಳು ವೈವಿದ್ಯಮಯವಾಗಿ ರೂಪಿಸಿ ದಸರಾ ಕಾರ್ಯಕ್ರಮಗಳನ್ನು ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ಸಂಘಟಿಸಲಿದ್ದಾರೆ.

ಮೆರವಣಿಗೆಗೆ ಚಾಲನೆ ನೀಡುವ ಕಿರಂಗೂರು ಬನ್ನಿಮಂಟಪದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡು ಸಿದ್ಧತೆಗಳನ್ನು ಪ್ರಾರಂಭಿಸಿ. ಯೋಗ ದಸರಾದಲ್ಲಿ ಯೋಗ ಪ್ರದರ್ಶನದೊಂದಿಗೆ ಯೋಗ ಸ್ಪರ್ಧೆಗಳನ್ನು ಸಹ ಆಯೋಜಿಸಿ. ಶಿಕ್ಷಣ ಇಲಾಖೆ ಅವರು ಯೋಗ ಸ್ಪರ್ಧೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡಿ ಎಂದು ಸಚಿವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, “ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಗಳ ಆಯೋಜನೆಗಾಗಿ ಸ್ವಾಗತ, ಕ್ರೀಡಾ, ವೇದಿಕೆ, ಮೆರವಣಿಗೆ, ಆರೋಗ್ಯ, ನಗರ ಅಲಂಕಾರ, ಹಣಕಾಸು, ಸ್ವಚ್ಛತೆ, ಆಹಾರ, ಆಹಾರ ಮೇಳ, ವಸ್ತು ಪ್ರಸರ್ಶನ, ಸಾಂಸ್ಕೃತಿಕ ಕಾರ್ಯಕ್ರನ ಸೇರಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ಹೇಳಿದ್ದಾರೆ.

Previous articleನಮ್ಮ ಮೆಟ್ರೋ ದರ ಏರಿಕೆ: ತೆರೆಮರೆಯ ಸತ್ಯ ಈಗ ಬಹಿರಂಗ!
Next articleಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ – ಆದೇಶ ಕಾಯ್ದಿರಿಸಿದ ಕೋರ್ಟ್

LEAVE A REPLY

Please enter your comment!
Please enter your name here