ಪರಪ್ಪನ ಅಗ್ರಹಾರ ಜೈಲು ಮತ್ತೆ ಸುದ್ದಿಯಲ್ಲಿದೆ. ಆದರೆ ನಟ ದರ್ಶನ್ ಕಾರಣಕ್ಕೆ ಅಲ್ಲ. ಕಾರಾಗೃಹದ ಕೈದಿಗಳಿಗೆ ಮಾದಕ ವಸ್ತು, ತಂಬಾಕು ಸೇರಿದಂತೆ ಇತರ ಡ್ರಗ್ಸ್ ಅನ್ನು ಸರಬರಾಜು ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೈಲು ವಾರ್ಡ್‌ನ್ ಅನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ, ತನಿಖೆ ಶುರು ಮಾಡಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಈ ಕಾರಾಗೃಹಕ್ಕೆ ಹುಬ್ಬಳ್ಳಿಯಿಂದ ವರ್ಗಾವಣೆಯಾಗಿದ್ದ ಕಲ್ಲಪ್ಪ ಬಂಧಿತ ಜೈಲು ವಾರ್ಡನ್. ಸೆ.7 ರಂದು ಕರ್ತವ್ಯಕ್ಕೆ ಕಲ್ಲಪ್ಪ ಹಾಜರಾದಾಗ ಅಲ್ಲಿನ ಸಿಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಅವರ ಜೇಬಿನಲ್ಲಿ ಮಾದಕವಸ್ತುವಾದ 100 ಗ್ರಾಂ ಆಯಶಿಶ್ ಆಯಿಲ್ ಮತ್ತು ಗುಟ್ಕಾವನ್ನು ಸಲ್ಯೂಶನ್ ಟೇಪ್‌ನಲ್ಲಿ ಸುತ್ತಿಕೊಂಡು ಬಂದಿರುವುದು ಗೊತ್ತಾಗಿದೆ.
ಈ ಬಗ್ಗೆಸಿಐಎಸ್‌ಎಫ್ ಮುಖ್ಯಸ್ಥರು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಲ್ಲಪ್ಪನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆಯೂ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮಾದಕ ವಸ್ತುಗಳು, ಬೀಡಿ ಸಿಗರೇಟು, ಮದ್ಯವನ್ನೂ ಪೂರೈಸಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಜೈಲಿನ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ದಟ್ಟ ಆರೋಪವೂ ಕೇಳಿ ಬರುತ್ತಿತ್ತು.
3 ತಿಂಗಳ ಹಿಂದಷ್ಟೇ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿದ್ದ: ಕೈದಿಗಳಿಗೆ ಮಾದಕ ವಸ್ತುಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಬಂಧನವಾಗಿರುವ ಜೈಲು ವಾರ್ಡನ್ ಕಲ್ಲಪ್ಪ 3 ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಯಿಂದ ವರ್ಗಾವಣೆ ಆಗಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಬಂದಿದ್ದ.
ಸೆ.7 ರಂದು ಕರ್ತವ್ಯಕ್ಕೆ ಕಲ್ಲಪ್ಪ ಹಾಜರಾದ ವೇಳೆ ಅಲ್ಲಿನ ಸಿಐಎಸ್‌ಎಫ್ ಸಿಬ್ಬಂದಿ ತಪಾಸಣೆ ಮಾಡಿದಾಗ ಅವರ ಜೇಬಿನಲ್ಲಿ ಮಾದಕವಸ್ತು ಇರುವುದು ಗೊತ್ತಾಗಿದೆ. ಈ ಬಗ್ಗೆ ಸಿಐಎಸ್‌ಎಫ್ ಮುಖ್ಯಸ್ಥರು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕಲ್ಲಪ್ಪನನ್ನು ಬಂಧಿಸಿದ್ದಾರೆ.
ಪ್ರಕರಣ ಕುರಿತು ಪೊಲೀಸ್ ರಿಯಾಕ್ಷನ್: ಮಾಜಿ ಸೈನಿಕರ ಕೋಟಾದಡಿ ಕಲ್ಲಪ್ಪ 2018ರಲ್ಲಿ ವಾರ್ಡನ್ ಆಗಿ ಕಾರಾಗೃಹ ಇಲಾಖೆಗೆ ಸೇರಿದ್ದ. ಕೆಲವು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ. ಕಲ್ಲಪ್ಪ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ. ಕೈದಿಗಳಿಗೆ ತಂಬಾಕು ಉತ್ಪನ್ನ, ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ.
ಬಂಧಿತನಿಂದ 100 ಗ್ರಾಂ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಯಾರಿಂದ ಮಾದಕ ವಸ್ತುಗಳನ್ನು ಖರೀದಿಸಿದ್ದ, ಯಾವ ಬ್ಯಾರಕ್‌ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ