ಅಕ್ರಮ ಗಣಿಗಾರಿಕೆ: ಕರ್ನಾಟಕ ಸರ್ಕಾರ ಕ್ರಮ ಸ್ವಾಗತಾರ್ಹವೇ, ಆದರೆ..!

0
53

ಅಕ್ರಮ ಗಣಿಗಾರಿಕೆ ಕರ್ನಾಟಕ. ನಮ್ಮ ಹಿಂದಿನ ಹೋರಾಟಗಳ ಆಧಾರದ ಮೇಲೆ 2009ರಲ್ಲಿ ನಾವು ಅಕ್ರಮ ಗಣಿಗಾರಿಕೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯದಿಂದ (ಎಸ್‌ಪಿಎಸ್) ಸುಪ್ರಿಂಕೋರ್ಟ್ ಮೆಟ್ಟಿಲು ಏರಿದ್ದೆವು. ಪ್ರಶಾಂತ್ ಭೂಷಣ್ ಅವರಂತಹ ಅತ್ಯಂತ ಉತ್ಕೃಷ್ಟ ವಕೀಲರ ತಂಡ ಹೊಂದಿದ್ದೆವು. ಶಿವಮೊಗ್ಗದಿಂದ ಸಂಡೂರು ಮುಖಾಂತರ ಬಳ್ಳಾರಿವರೆಗೆ ಯಾತ್ರೆ ನಡೆಸಿ, ರಾಜ್ಯದ ಜನತೆಗೆ ಬಿಜೆಪಿ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಿದೆವು.

ರಾಜ್ಯದ ಇತಿಹಾಸದಲ್ಲೇ ಇತಿಹಾಸದಲ್ಲೇ ಅತಿದೊಡ್ಡ ಹಗರಣಕ್ಕೆ ಕಾರಣವಾದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಹಳೆ ಮೊಳಗಿಸಿದೆವು. ದೇಶದಲ್ಲೇ ಅತ್ಯಂತ ಪ್ರಾಮಾಣಿಕ ನ್ಯಾಯಾಧೀಶರಾಗಿದ್ದ ಅಂದಿನ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ವರದಿಗಳು ಅಕ್ರಮಗಳ ಮೇಲೆ ಬೆಳಕು ಚೆಲ್ಲಿದವು.

ನೆರೆಯ ಆಂಧ್ರಪ್ರದೇಶದ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಕೂಡ ಗಾಲಿ ಜನಾರ್ದನ್ ರೆಡ್ಡಿ ಅವರ ಬೆನ್ನಿಗೆ ನಿಂತಿದ್ದರು. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಾನೂನು ಹೋರಾಟ ನಡೆಸಿದೆವು.

2012ರಲ್ಲಿ ನಾವು ಸುಪ್ರಿಂಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯು ಸರಿಸುಮಾರು 10 ವರ್ಷಗಳ ನಂತರ ಆದೇಶ ಪ್ರಕಟಿಸಿ, ಜನಾರ್ದನ್ ರೆಡ್ಡಿ ಮತ್ತು ಮೂವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಓಬಳಾಪುರಂ ಮೈನಿಂಗ್‌ ಕಂಪನಿ ಪ್ರಕರಣದಲ್ಲಿ ಅಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹಟಗಿ ಗಣಿಗಾರಿಕೆ ಪರ ವಾದ ಮಂಡಿಸಿದಾಗ ನಮಗೆ ಸಿಡಿಲು ಬಡಿದಂತೆ ಆಗಿತ್ತು.

ಆದರೆ ಅಂತಿಮವಾಗಿ ಅಮ್ಯೂಕಸ್ ಕ್ಯೂರಿ ಶ್ಯಾಮ್ ದಿವಾನ್ ಅವರಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು. ಆಗ ಸುಪ್ರಿಂಕೋರ್ಟ್ ಕೂಡ ದಶಕದ ವಿಳಂಬಕ್ಕೆ ಕೆಂಡಾಮಂಡಲ ಆಗಿತ್ತು. ಸಿಬಿಐ ಅಧಿಕಾರಿ ಆರ್.ಎಂ.ಖಾನ್ ಮತ್ತು ಲಕ್ಷ್ಮಿನಾರಾಯಣ ಅವರು ಪ್ರಾಮಾಣಿಕ ತನಿಖೆ ನಡೆಸಿದ್ದನ್ನೂ ಸ್ಮರಿಸಬೇಕು.

ಇದಾದ ನಂತರ ಕರ್ನಾಟಕ ಸರಕಾರ ಮತ್ತೊಮ್ಮೆ ಎಚ್ಚೆತ್ತಿಕೊಂಡಿತು. ಹಿಂದಿನ ಅವಧಿಯಲ್ಲಿ ಹಾಗೂ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಹೆಚ್.ಕೆ.ಪಾಟೀಲ್‌ ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಲೇಬೇಕು ಎಂದು ಎಸ್.ಆರ್.ಹಿರೇಮಠ ಹೇಳಿದರು.

ಸಚಿವ ಸಂಪುಟದ ಉಪ ಸಮಿತಿಯ ಸದಸ್ಯರಿಗೂ ಗೌರವ ಸಲ್ಲಬೇಕು. ತಮ್ಮದೇ ಸರಕಾರಕ್ಕೆ ಪತ್ರ ಬರೆದ ಸಚಿವ ಹೆಚ್.ಕೆ.ಪಾಟೀಲರ ಕ್ರಮ ರಾಜ್ಯದಲ್ಲೇ ಒಂದು ಮೈಲುಗಲ್ಲು ಎಂದರೆ ತಪ್ಪಲ್ಲ. ಅದರ ಪರಿಣಾಮವಾಗಿ ಗುನ್ನೆಯಿಂದ ಗಳಿಸಿದ ಆಸ್ತಿಯ ವಸೂಲಿಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ಆದರೆ…! ಇದು ಕೇವಲ ಮಾತು, ಪತ್ರ, ಮಸೂದೆ ತರುವುದಕ್ಕೆ ಸೀಮಿತ ಆಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಚಿವ ಸಂಪುಟದ ಉಪ ಸಮಿತಿ ಸದಸ್ಯರು ರಿವಕರಿ ಕಮಿಷನರ್‌ಗೆ ಸಂಪೂರ್ಣ ಅಧಿಕಾರ ಕೊಡಬೇಕು. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ 2006ರಿಂದ ಈವರೆಗಿನ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು ರಿಕವರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಅದರ ಜೊತೆಗೆ ಎಸ್‌ಪಿಎಸ್ ಕೂಡ ಸರ್ಕಾರದ ಜೊತೆ ನಿಲ್ಲಲಿದೆ ಎಂದರು.

  • ರಿಕವರಿ ಕಮಿಷನರ್ ಹುದ್ದೆಗೆ ಅತ್ಯಂತ ಪ್ರಾಮಾಣಿಕ ಅಧಿಕಾರಿ ನೇಮಕ ಮಾಡಬೇಕು. ಅವರ ತಂಡಕ್ಕೆ ಅತ್ಯಂತ ದಕ್ಷ ಅಧಿಕಾರಿಗಳ ತಂಡವನ್ನೇ ನೇಮಕ ಮಾಡಬೇಕು. ನ್ಯಾ.ಸಂತೋಷ್ ಹೆಗ್ಡೆ ಮತ್ತು ಅಂದಿನ ಎಡಿಜಿಪಿ ರೂಪ್‌ಕುಮಾರ್ ದತ್ತಾ, ಅರಣ್ಯ ಅಧಿಕಾರಿ ಯು.ಸಿ.ಸಿಂಗ್‌ರಂತಹ ಉತ್ಕೃಷ್ಟ ಅಧಿಕಾರಿಗಳ ತಂಡವನ್ನು ರಚಿಸಬೇಕು.
  • ಸಚಿವ ಸಂಪುಟ ಉಪಸಮಿತಿ 3 ಶಿಫಾರಸುಗಳು ಅನುಷ್ಠಾನಗೊಳ್ಳಬೇಕು. ರಿಕವರಿ ಆಯುಕ್ತರನ್ನು ನೇಮಿಸಿ 78 ಸಾವಿರ ಕೋಟಿ ರೂ. ಹಾಗೂ ಅದರ ಮೇಲಿನ ಬಡ್ಡಿ ಸಹಿತ ವಸೂಲಿ ಮಾಡಬೇಕು. ಜೊತೆಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
  • ನಮ್ಮ ರಾಜ್ಯದ ಗಣಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಖಾತೆಯಿಂದ ತಕ್ಷಣ ಬದಅಸಬೇಕು. ಅಲ್ಲದೇ ಗಣಿ ಇಲಾಖೆಯ ಸಚಿವ ಮತ್ತು ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಬದಲಿಸಬೇಕು. ಏಕೆಂದರೆ ಕೇಂದ್ರೀಯ ಉನ್ನಧಿಕಾರ ಸಮಿತಿ (ಸಿಇಸಿ) 2025ರ ಏಪ್ರಿಲ್ 28ರಂದು ಕೊಟ್ಟಿರುವ ವರದಿಯಂತೆ ಸುಪ್ರಿಂಕೋರ್ಟ್ ವಿಭಜಿಸಿದ್ದ ಎ, ಬಿ, ಸಿ ಮತ್ತು ಡಿ ಕೆಟಗರಿ ಗಣಿಗಳನ್ನು ಹಾಗೂ ನಾಲ್ಕು ಆದೇಶಗಳನ್ನು ಉಲ್ಲಂಘಿಸಿ ನಾಲ್ಕೂ ಕೆಟಗರಿ ಗಣಿಗಳನ್ನು ಸಮ್ಮಿಲನಗೊಳಿಸಿರುವುದು ಬಹುದೊಡ್ಡ ಅಪರಾಧ.
  • ಅಲ್ಲದೇ ಸಚಿವ ಮಲ್ಲಕಾರ್ಜುನ್ ಅವರು 13 ಅದಿರಿನ ಡಂಪ್‌ಗಳನ್ನು ನಿಸ್ತೇಜಗೊಂಡಿದ್ದರೂ ಹರಾಜು ಮಾಡಿದ್ದಾರೆ. ಇದರ ಮೊತ್ತವೇ 30 ಸಾಏರ ಕೋಟ ರೂ. ಆಗಿದೆ ಎಂದು ಅಂದಾಜು ಮಾಡಲಾಗಿದೆ. ಅದನ್ನು ನಾವು ದೂರು ನೀಡಿದ ಪರಿಣಾಮ ಮತ್ತೆ ಸ್ಥಗಿತಗೊಳಿಸಲಾಗಿದೆ. ಹರಾಜಿನ ಹಣ ಕರ್ನಾಟಕ ಗಣಿ ಪರಿಸರ ಪುನಶ್ವೇತನ ನಿಗಮಕ್ಕೆ (ಕೆಎಂಇರ್‌ಸಿ) ಸೇರುತ್ತದೆ. ಆದರೆ ಡಂಪ್‌ಗಳು ನಿಸ್ತೇಜ ಆಗಿದ್ದರಿಂದ ಅದನ್ನು ಹರಾಜು ಮಾಡಲು ಬರುವುದಿಲ್ಲ ಎಂದು ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ ಗಣಿ ಸಚಿವರ ಬದಲಾವಣೆ ಮಾಡಬೇಕು.
  • 2013ರಿಂದ ಈವರೆಗೆ ಎಸ್‌ಐಟಿ ನಡೆಸಿದ ತನಿಖೆ ವೇಳೆ ಸಿಕ್ಕಿರುವ ಎಲ್ಲ ಸಾಕ್ಷ್ಯ, ಕಾಗದಪತ್ರ ಹಾಗೂ ದಾಖಲೆಗಳನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿ ಇಡಬೇಕು. ಸರಕಾರದಲ್ಲೇ ಸಾಕ್ಷ್ಯಗಳನ್ನು ನಾಶ ಮಾಡುವ ಬಹುದೊಡ್ಡ ಭ್ರಷ್ಟ ರಾಜಕಾರಣಿಗಳು ಇದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಈ ಸೂಕ್ಷ್ಮತೆ ಬಗ್ಗೆ ಅತಿಹೆಚ್ಚು ಜಾಗರೂಕತೆ ವಹಿಸಬೇಕು. ಪ್ರಾಮಾಣಿಕ ವ್ಯಕ್ತಿಯನ್ನು ಗಣಿ ಸಚಿವನನ್ನಾಗಿ ನೇಮಕ ಮಾಡಬೇಕು.
Previous articleಹುಬ್ಬಳ್ಳಿ: ನೀವು ಪೈಲಟ್ ಆಗಬಯಸುತ್ತೀರಾ? ಇಲ್ಲಿದೆ ಸುವರ್ಣಾವಕಾಶ
Next articleದಾವಣಗೆರೆ-ಬೀದರ್ ರಾಜಹಂಸ ಬಸ್: ಮಾರ್ಗ, ವೇಳಾಪಟ್ಟಿ, ದರ

LEAVE A REPLY

Please enter your comment!
Please enter your name here