ಚಿತ್ರದುರ್ಗದಲ್ಲಿ ಕಾರಿನಲ್ಲಿದ್ದ 97 ಲಕ್ಷ ರೂ. ಹಣದ ಸಮೇತ ಪರಾರಿಯಾಗಿದ್ದ ಬಾಡಿಗೆ ಕಾರಿನ ಚಾಲಕನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ, ಸಿಪಿಐ ಕುಮಾರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್‌ಗೆ ವಂಚನೆ ಮಾಡಲಾಗಿತ್ತು. ಮಂಗಳವಾರ ಗುರುಪ್ರಸಾದ್ ಪತ್ನಿ ಲಲಿತಾ ಜೊತೆ ಬಳ್ಳಾರಿಗೆ ತೆರಳಿದ್ದರು. ಬಳ್ಳಾರಿಯಲ್ಲಿದ್ದ ಜಮೀನು ಮಾರಾಟ ಮಾಡಿದ್ದರು 97 ಲಕ್ಷ ರೂ. ಪಡೆದು ಕಾರಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದರು.
ರಮೇಶ್ ಎಂಬುವನಿಗೆ ಸೇರಿದ ಬಾಡಿಗೆ ಕಾರಿನಲ್ಲಿ ವಾಪಸ್ ಆಗುವಾರ ಚಳ್ಳಕೆರೆ ಪಟ್ಟಣ ಬಳಿ ಊಟಕ್ಕಾಗಿ ಹೋಟೆಲ್‌ಗೆ ತೆರಳಿದ್ದರು. ಬೇಗ ಊಟ ಮುಗಿಸಿದ ರಮೇಶ್ ಕಾರಲ್ಲಿದ್ದ ಹಣ ಸಮೇತ ಎಸ್ಕೇಪ್ ಆಗಿದ್ದ.
ಪೊಲೀಸರು ಆರೋಪಿ ಇದ್ದ ಕಾರು ಫಾಲೋ ಮಾಡಿದರು. ಆಂಧ್ರ ಪ್ರದೇಶದ ಹಿಂದೂಪುರ ಮೂಲದ ರಮೇಶ ಆಂಧ್ರದತ್ತ ಪರಾರಿಯಾಗಲು ಯತ್ನ ನಡೆಸಿದ. ಪೊಲೀಸರು ಬೆನ್ನತ್ತಿದ್ದು ತಿಳಿದು ವೇಗವಾಗಿ ಚಲಿಸಿ ಮರಕ್ಕೆ ಡಿಕ್ಕಿ ಹೊಡೆದ.
ಕೊನೆಗೂ ಆರೋಪಿಯನ್ನು ಬಂಧಿಸಿರುವ ಚಳ್ಳಕೆರೆ ಪೊಲೀಸರು ಆರೋಪಿ ಬಳಿಯಿದ್ದ ಹಣ ವಶಕ್ಕೆ ಪಡೆದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶೋಧಮ್ಮ ನಿಧನ: ಹೊಸದುರ್ಗ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಉಮೇಶಯ್ಯ ಪತ್ನಿ ಯಶೋಧಮ್ಮ (53) ಹೃದಯಾಘಾತದಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ. ಮಂಗಳವಾರ ಗೌರಿ ಪೂಜೆ ನೇರವೇರಿಸಿದ ನಂತರ ಹೃದಯಾಘಾತವಾಗಿದೆ.
ಅವರನ್ನು ಚಿಕಿತ್ಸೆಗೆ ಹೊಸದುರ್ಗಕ್ಕೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತೆರಳುತ್ತಿರುವಾಗ ಮಾರ್ಗ ಮಧ್ಯೆ ಹೊಳಲ್ಕೆರೆ ಸಮೀಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆ ಬುಧವಾರ ಜಮೀನಿನಲ್ಲಿ ನಡೆಯಲಿದೆ.