ವಿಜಯಪುರ: ಪತ್ನಿಯನ್ನು ಎರಡು ಭಾಗ ಮಾಡಿ ಬಾವಿಗೆಸೆದ ಪತಿ

0
139

ವಿಜಯಪುರ: ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಶವವನ್ನು ಎರಡು ತುಂಡುಗಳಾಗಿ ಕತ್ತರಿಸಿ ಬಾವಿಯಲ್ಲಿ ಹಾಕಿದ ಘಟನೆ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದಲ್ಲಿ ನಡೆದಿದೆ.

ಗಣಿಹಾರ ಗ್ರಾಮದ ಪರಮಣ್ಣ ಷಣ್ಮುಖಪ್ಪ ಆನಗೊಂಡ ಎಂಬಾತ ಪತ್ನಿ ನೀಲಮ್ಮ (46) ಎನ್ನುವವಳನ್ನು ತಡರಾತ್ರಿ ಕೊಲೆ ಮಾಡಿ ಶವವನ್ನು ಪಕ್ಕದ ಮಹಿಬೂಬಪಟೇಲ ಎಂಬುವವರ ತೋಟದ ಜಮೀನಿನ ಬಾವಿಯಲ್ಲಿ ದೇಹವನ್ನು ಎರಡು ತುಂಡು ಮಾಡಿ ಕಲ್ಲು ಕಟ್ಟಿ ಎಸೆದಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ವಿಜಯಪುರ ಜಿಲ್ಲಾ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇಂಡಿ ಡಿಎಸ್‌ಪಿ ಜಗದೀಶ ಎಚ್.ಎಸ್. ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ ಹಾಗೂ ಪಿಎಸ್‌ಐ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

ಸದ್ಯ ಬಾವಿಯಿಂದ ದೇಹದ ಅರ್ಧ ಭಾಗವನ್ನು ಹೊರತೆಗೆಯಲಾಗಿದ್ದು ಇನ್ನು ಅರ್ಧ ಭಾಗಕ್ಕೆ ಶೋಧ ಕಾರ್ಯ ನಡೆಸಿದ್ದಾರೆ. ಘಟನೆ ಕುರಿತಂತೆ ಸಿಂದಗಿ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleದಾವಣಗೆರೆ: ವಿದ್ಯಾರ್ಥಿನಿಯ ಏಕಾಂಗಿ ಹೋರಾಟಕ್ಕೆ ತಾಪಂ ಸ್ಪಂದನೆ
Next articleಅಪಾಯಕಾರಿ ಸೆಲ್ಫಿ: ಸಾವಿನಲ್ಲಿ ಭಾರತಕ್ಕೆ ಮೊದಲ ಸ್ಥಾನ!

LEAVE A REPLY

Please enter your comment!
Please enter your name here